ಕೇರಳದ ಈ ಗರ್ಲ್ಸ್ ಹಾಸ್ಟೆಲಿನಲ್ಲಿ ಬಟ್ಟೆ ಬದಲಿಸಲೂ ಡೋರ್ ಹಾಕುವಂತಿಲ್ಲ

ಕೇರಳದ ಕೊಲ್ಲಂನ ನರ್ಸಿಂಗ್ ಕಾಲೇಜೊಂದು ವಿಲಕ್ಷಣ ಕಾರಣಕ್ಕೆ ಸುದ್ದಿಯಾಗಿದೆ. ಇಲ್ಲಿನ ಯುವತಿಯರು ಹಾಸ್ಟೆಲಿನ ಕೋಣೆಯ ಬಾಗಿಲು ಲಾಕ್ ಮಾಡಿಕೊಳ್ಳುವಂತಿಲ್ಲ. ಬಟ್ಟೆ ಬದಲಿಸುವಾಗಲೂ ಈ ನಿಯಮಗಳು ಅನ್ವಯವಾಗುತ್ತವೆ.

ಕೊಲ್ಲಂ, ಮಾರ್ಚ್ 7: ಕೇರಳದ ಕೊಲ್ಲಂನ ನರ್ಸಿಂಗ್ ಕಾಲೇಜೊಂದು ವಿಲಕ್ಷಣ ಕಾರಣಕ್ಕೆ ಸುದ್ದಿಯಾಗಿದೆ. ಇಲ್ಲಿನ ಯುವತಿಯರು ಹಾಸ್ಟೆಲಿನ ಕೋಣೆಯ ಬಾಗಿಲು ಲಾಕ್ ಮಾಡಿಕೊಳ್ಳುವಂತಿಲ್ಲ. ಬಟ್ಟೆ ಬದಲಿಸುವಾಗಲೂ ಈ ನಿಯಮಗಳು ಅನ್ವಯವಾಗುತ್ತವೆ.

ವಿದ್ಯಾರ್ಥಿನಿಯರು ತಮ್ಮ ತಮ್ಮಲ್ಲೆ ಲೈಂಗಿಕ ಕ್ರಿಯೆ (ಲೆಸ್ಬಿಯನ್ ಸೆಕ್ಸ್) ನಡೆಸುತ್ತಾರೆ ಎಂಬ ಹೆದರಿಕೆಯಲ್ಲಿ ಕೊಲ್ಲಂನ ಉಪಾಸನಾ ಕಾಲೇಜಿನ ಪ್ರಿನ್ಸಿಪಾಲ್ ಇಂಥಹದ್ದೊಂದು ವಿಲಕ್ಷಣ ನೊಟೀಸ್ ಜಾರಿ ಮಾಡಿ ರಾಷ್ಟ್ರವ್ಯಾಪಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಬಟ್ಟೆ ಬದಲಿಸುವಾಗಲೂ ಸೆಕ್ಸ್ ನಡೆಸುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಆಗಲೂ ಡೋರ್ ಲಾಕ್ ಹಾಕಬೇಡಿ ಎಂದು ನೊಟೀಸ್ನಲ್ಲಿ ಹೇಳಲಾಗಿದೆ. ಜತೆಗೆ ವಿದ್ಯಾರ್ಥಿನಿಯರು ಕಾಲೇಜು ಆವರಣ ಸೇರಿದಂತೆ ಖಾಸಗಿಯಾಗಿ ಮೊಬೈಲ್ ಫೋನ್ ಬಳಕೆ ಮಾಡುವಂತಿಲ್ಲ. ಕಾಲೇಜಿನಲ್ಲಿರುವ ಫೋನನ್ನೇ ವಾರಕ್ಕೊಮ್ಮೆ ಅಥವಾ ಎರಡು ದಿನಕ್ಕೊಮ್ಮೆ ಬಳಸುವಂತೆ ನೊಟೀಸ್ ನಲ್ಲಿ ತಿಳಿಸಲಾಗಿದೆ.[ಕೇರಳದಲ್ಲಿ 7 ಅಪ್ರಾಪ್ತ -ಅನಾಥ ಬಾಲಕಿಯರ ಮೇಲೆ ಸರಣಿ ರೇಪ್]

Kerala: Scared of obscene activities, college forbids women from locking doors

'ನಾವು ಸೆಕ್ಸ್ ಮಾಡುತ್ತೇವೆ, ಹಾಗೂ ಮೊಬೈಲ್ ಬಳಸುತ್ತೇವೆ ಎಂಬ ಕಾರಣಕ್ಕೆ ಬಾಗಿಲು ಲಾಕ್ ಮಾಡದಂತೆ ನಿರ್ದೇಶನ ನೀಡಿದ್ದಾರೆ. ನಾವು ಬೇಕಿದ್ದರೆ ಬಾಗಿಲು ಹಾಕಿ ಅದಕ್ಕೆ ಚೇರ್ ಅಡ್ಡ ಇಡಬಹುದು. ಆದರೆ ಲಾಕ್ ಮಾಡುವಂತಿಲ್ಲ,' ಎಂದು ವಿದ್ಯಾರ್ಥಿನಿಯರು ತಿಳಿಸಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.[ಕೇರಳದಲ್ಲಿ 24 ವರ್ಷ ವಯಸ್ಸಿನ ಗಗನಸಖಿ ಆತ್ಮಹತ್ಯೆ]

ಇಂಟರ್ನೆಟ್ ಕೂಡಾ ಬ್ಲಾಕ್

ಕಾಲೇಜಿನ ಗ್ರಂಥಾಲಯದಲ್ಲಿದ್ದ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಯುವತಿಯರು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆ ಎಂಬುದು ಇದಕ್ಕೆ ಪ್ರಿನ್ಸಿಪಾಲ್ ಸಮಜಾಯಿಷಿ ನೀಡಿದ್ದಾರಂತೆ.

ಇನ್ನು ಉದ್ದ ಕೂದಲು ಬೆಳೆಸಿದರೆ, ಉಗುರು ಉದ್ದ ಬಿಟ್ಟರೆ ವಿದ್ಯಾರ್ಥಿಗಳಿಗೆ ಪ್ರಿನ್ಸಿಪಾಲ್ ದಂಡವನ್ನೂ ಹಾಕುತ್ತಾರಂತೆ.

Kerala: Scared of obscene activities, college forbids women from locking doors

ಇಲ್ಲಿನ ಪ್ರಿನ್ಸಿಪಾಲ್ ಜೆಸ್ಸಿ ಕುಟ್ಟಿ ವಿದ್ಯಾರ್ಥಿಗಳ ಜತೆ ಅನುಚಿತವಾಗಿ ನಡೆದುಕೊಳ್ಳುತ್ತಾರೆ ಎಂದೂ ವಿದ್ಯಾರ್ಥಿಗಳು ದೂರಿದ್ದಾರೆ. ನಮ್ಮ ಡೈರಿಗಳನ್ನು ತೆಗೆದು ತರಗತಿಯ ಮುಂದೆ ಓದುತ್ತಾರೆ ಎಂದೆಲ್ಲಾ ಆಪಾದಿಸಿದ್ದಾರೆ.

ಪ್ರತಿಭಟನೆ

ಸಹಜವಾಗಿ ಪ್ರಿನ್ಸಿಪಾಲರ ಈ ನಡವಳಿಕೆ ವಿರುದ್ಧ ಆಕ್ರೋಶಿತರಾಗಿರುವ ವಿದ್ಯಾರ್ಥಿಗಳು ಪ್ರತಿಭಟನೆಗೆ ಇಳಿದಿದ್ದಾರೆ. ಕಳೆದ ಶುಕ್ರವಾರದಿಂದ ಕಾಲೇಜಿನ ಮುಂಭಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು ಪ್ರಿನ್ಸಿಪಾಲ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ.

ಆದರೆ ಪ್ರತಿಭಟನೆ ನಡೆಸುವವರನ್ನು ಹಾಸ್ಟೆಲ್ ಬಿಟ್ಟು ತೆರಳುವಂತೆ ಕಾಲೇಜು ಆಡಳಿತ ಮಂಡಳಿ ಬೆದರಿಕೆ ಹಾಕುತ್ತಿದೆಯಂತೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+