ಮಾರಣಾಂತಿಕ ನಿಪಾಹ್ ಸೋಂಕಿಗೆ ಕೇರಳದಲ್ಲಿ ಮತ್ತೊಂದು ಬಲಿ
ಕೊಞಕೊಡೆ, ಮೇ 24: ದೇಶವನ್ನು ಬೆಚ್ಚಿ ಬೀಳಿಸಿರುವ ನಿಪಾಹ್ ವೈರಸ್ ಸೋಂಕಿಗೆ ಕೇರಳದಲ್ಲಿ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 11 ಕ್ಕೆ ಏರಿದೆ.
ಕೇರಳದ ಕೊಞಕೊಡೆ ಎಂಬಲ್ಲಿ ವ್ಯಕ್ತಿಯೋರ್ವ ಈ ಸೋಂಕಿನಿಂದಲೇ ಮೃತಪಟ್ಟಿದ್ದು ವೈದ್ಯಕೀಯ ಪರೀಕ್ಷೆಯಿಂದ ದೃಢವಾಗಿದೆ. ಮೃತರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಈಗಾಗಲೇ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಈ ರೋಗದ ಭೀತಿ ಆವರಿಸಿದ್ದು, ಸಾಮಾನ್ಯ ಜ್ವರದಿಂದ ಆರಂಭವಾಗುವ ಸಮಸ್ಯೆ ನಂತರ ಮಾರಣಾಂತಿಕವಾಗುವುದರಿಂದ ಜನರು ಆಸ್ಪತ್ರೆಯತ್ತ ದೌಡಾಯಿಸುತ್ತಿದ್ದಾರೆ.

ಈಗಾಗಲೇ ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ನಿಪಾಹ್ ಚಿಕಿತ್ಸೆಗಾಗಿಯೇ ಪ್ರತ್ಯೇಕ ವಾರ್ಡ್ ಕಾಯ್ದಿರಿಸುವ ಸೂಚನೆಯನ್ನು ಆರೋಗ್ಯ ಇಲಾಖೆ ಸರ್ಕಾರಿ ಆಸ್ಪತ್ರೆಗಳಿಗೆ ನೀಡಿದೆ.
ಒಂದು ಬಗೆಯ ಬಾವಲಿ(ಫ್ರೂಟ್ ಬ್ಯಾಟ್ಸ್)ಗಳಿಂದ ಹರಡುವ ಈ ಸೋಂಕು ರೋಗ ಮನುಷ್ಯ ಮತ್ತು ಪ್ರಾಣಿಗಳಲ್ಲಿ ಕಂಡುಬರುತ್ತಿದ್ದು, ಸದ್ಯಕ್ಕೆ ಈ ರೋಗಕ್ಕೆ ಯಾವುದೇ ರೀತಿಯ ಪರಿಣಾಮಕಾರೀ ಚಿಕಿತ್ಸೆ ಪತ್ತೆಯಾಗಿಲ್ಲ. ಮುನ್ನೆಚ್ಚರಿಕೆಯಷ್ಟೇ ರೋಗದಿಂದ ಪಾರಾಗುವ ಉಪಾಯವಾಗಿದೆ.












Click it and Unblock the Notifications