ಓಣಂ ಹಬಕ್ಕೆ ಆನ್‌ಲೈನ್‌ ಮೂಲಕವೇ ಮದ್ಯ ಸಮಾರಾಧನೆ

ತಿರುವನಂತಪುರ, ಆಗಸ್ಟ್, 19: ಕೇರಳದ ಕುಡುಕರಿಗೆ ಇದೊಂದು ಸಿಹಿಸುದ್ದಿ. ಓಣಂ ಹಬ್ಬಕ್ಕೆ ಮದ್ಯವನ್ನು ಆನ್ ಲೈನ್ ನಲ್ಲಿಯೇ ಖರೀದಿ ಮಾಡಬಹುದು. ಇಂಥದ್ದೊಂದು ಅವಕಾಶವನ್ನು ಕೇರಳ ರಾಜ್ಯ ಸರ್ಕಾರಿ ಸ್ವಾಮ್ಯದ ಗ್ರಾಹಕರ ಸಹಕಾರ ಸಂಘ ಕೊಡಮಾಡುತ್ತಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಸಂಸ್ಥೆ ಅಧ್ಯಕ್ಷ ಎಮ್. ಮೆಹಬೂಬ್ 'ಹಬ್ಬದ ದಿನ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಕೊಳ್ಳುವುದನ್ನು ಮತ್ತು ನೂಕು ನುಗ್ಗಲನ್ನು ತಪ್ಪಿಸಲು ಹೊಸ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.[ಅಕ್ರಮ ಮದ್ಯದ ವಿಷಯದಲ್ಲಿ ಕರ್ನಾಟಕವೇ ನಂಬರ್ 1!]

Kerala: 'Liquor to be made available online in from Onam'

ಆನ್ ಲೈನ್ ನಲ್ಲಿ ಸುಮಾರು 59 ಬ್ರ್ಯಾಂಡ್ ಗಳ ಮಾರಾಟಕ್ಕೆ ಸರ್ಕಾರದ ಅನುಮತಿ ಸಿಕ್ಕಿದೆ. ಆನ್ ಲೈನ್ ಮೂಲಕ ಉಳಿದ ಎಲ್ಲ ವಸ್ತುಗಳನ್ನು ಮಾರಾಟ ಮಾಡಲಾಗುತ್ತುದ್ದು ಗ್ರಾಹಕ ಸ್ನೇಹಿಯಾಗಿದೆ. ಸಮಯ ಮತ್ತು ಹಣದ ಉಳಿತಾಯವೂ ಇಲ್ಲಿ ಸಾಧ್ಯವಿದೆ ಎಂದು ಹೇಳಿದ್ದಾರೆ.[ಬೆಂಗಳೂರು ಸಭ್ಯ ಕುಡುಕರ ರಾಜಧಾನಿ ಎಂದ ಅಬಕಾರಿ ಸಚಿವ]

ಮುಂದಿನ ತಿಂಗಳು ಅಂದರೆ ಸೆಪ್ಟೆಂಬರ್ ಕೊನೆಯಲ್ಲಿ ಓಣಂ ಹಬ್ಬ ಆಚರಣೆ ಮಾಡಲಾಗುತ್ತಿದ್ದು ಕೇರಳದ ಜನರು ಆನ್ ಲೈನ್ ಮುಖಾಂತರವೇ ಮದ್ಯ ಹೀರಬಹುದು. ಕೇರಳದ ಹಿಂದಿನ ಸರ್ಕಾರ ರಾಜ್ಯದಾದ್ಯಂತ ಸುಮಾರು 700 ಬಾರ್ ಗಳನ್ನು ಬಂದ್ ಮಾಡಿತ್ತು. ಜತೆಗೆ ಒಂದೇ ಒಂದು ಹೊಸ ಮದ್ಯದ ಅಂಗಡಿಗೂ ಅವಕಾಶ ನೀಡಿರಲಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+