ಕೇರಳ : 'ಸೆಕ್ಸಿ ದುರ್ಗಾ' ಚಿತ್ರಕ್ಕೆ ಸಿಕ್ಕಿತು ಪ್ರದರ್ಶನ ಭಾಗ್ಯ

ಕೇರಳ, ನವೆಂಬರ್ 21 : ಗೋವಾದಲ್ಲಿ ನಿನ್ನೆಯಷ್ಟೆ(ನವೆಂಬರ್ 20) ಉದ್ಘಾಟನೆ ಕಂಡ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ)ದಲ್ಲಿ ಮಲಯಾಳಂನ 'ಎಸ್‌ ದುರ್ಗಾ' (ಸೆಕ್ಸಿ ದುರ್ಗಾ) ಚಿತ್ರವನ್ನು ಪ್ರದರ್ಶಿಸುವಂತೆ ಕೇರಳ ಹೈಕೋರ್ಟ್‌ ಮಂಗಳವಾರ ನವೆಂಬರ್ 21ರಂದು ಆದೇಶಿಸಿದೆ.

ಆದೇಶದ ಜೊತೆಗೆ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲೇ ಬೇಕಿದೆ ಎಂದು ಹೇಳಿದೆ. 'ಪದ್ಮಾವತಿ' ಚಿತ್ರ ಕೂಡ ನಿಷೇಧದ ಭೀತಿ ಎದುರಿಸುತ್ತಿರುವ ಈ ಸಮಯದಲ್ಲಿ ಕೇರಳ ಹೈಕೋರ್ಟ್ ನ ಈ ಆದೇಶ ಕಲಾವಿದರ, ಸಿನಿಪ್ರಿಯರ, ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಇರುವವರಲ್ಲಿ ಸ್ವಲ್ಪ ಸಮಾಧಾನ ಮೂಡಿಸಿದೆ.

Kerala high court verdict to show S Durga movie in IFFI

ಮಲಯಾಳಂನ ಎಸ್ ದುರ್ಗಾ (ಸೆಕ್ಸಿ ದುರ್ಗಾ) ಮತ್ತು ಮರಾಠಿಯ ನೂಡ್ ಚಿತ್ರಗಳನ್ನು ಸಿನಿಮೋತ್ಸವದ ಪ್ರದರ್ಶನ ಪಟ್ಟಿಯಿಂದ ಹೊರಗಿಡಲಾಗಿತ್ತು. ಎಸ್ ದುರ್ಗಾ ನಿರ್ದೇಶಕ ಸನಲ್ ಕುಮಾರ್‌ ಅವರು ಗೋವಾ ಚಿತ್ರೋತ್ಸವದಿಂದ 'ಎಸ್‌ ದುರ್ಗಾ'(ಸೆಕ್ಸಿ ದುರ್ಗಾ) ಚಿತ್ರವನ್ನು ಹೊರಗಿಟ್ಟಿದ್ದನ್ನು ಪ್ರಶ್ನಿಸಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಐಎಫ್‌ಎಫ್‌ಐ ಅಧಿಕಾರಿಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ದೂರು ದಾಖಲಿಸಿದ್ದರು.

ಸನಲ್ ಕುಮಾರ್ ಅವರ ಅರ್ಜಿ ವಿಚಾರಣೆ ನಡೆಸಿರುವ ನ್ಯಾ.ಬಿ.ವಿನೋದ್‌ ಚಂದ್ರನ್‌ ಅವರು ಚಿತ್ರವನ್ನು ಐಎಫ್‌ಎಫ್‌ಐನಲ್ಲಿ ಪ್ರದರ್ಶಿಸುವಂತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚಿಸಿದ್ದಾರೆ.
13 ತೀರ್ಪುಗಾರರ ಸಮಿತಿ ಶಿಫಾರಸು ಮಾಡಿದ್ದ 21 ಸಿನಿಮಾಗಳ ಪಟ್ಟಿಯಿಂದ ಮಲಯಾಳಂನ 'ಎಸ್ ದುರ್ಗಾ' ಮತ್ತು ಮರಾಠಿಯ 'ನ್ಯೂಡ್' ಚಿತ್ರಗಳನ್ನು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕೈಬಿಟ್ಟಿತ್ತು.

ಈ ಚಿತ್ರಗಳನ್ನು ಕೈಬಿಟ್ಟಿದ್ದನ್ನು ಪ್ರತಿಭಟಿಸಿ ಪನೋರಮಾ ವಿಭಾಗದ ಚಿತ್ರಗಳ ಆಯ್ಕೆ ಸಮಿತಿಯ ಮುಖ್ಯಸ್ಥ, ನಿರ್ದೇಶಕ ಸುಜಯ್ ಘೋಷ್ ಹಾಗೂ ಇನ್ನೂ ಇಬ್ಬರು ಸದಸ್ಯರು ರಾಜೀನಾಮೆ ನೀಡಿದ್ದರು. ಇಷ್ಟಲ್ಲದೆ ಶಬಾನಾ ಆಜ್ಮಿ, ನಾಸಿರುದ್ದೀನ್ ಶಾ ಇನ್ನಿತರ ಸಿನಿಮಾ ಮಂದಿಯಿಂದ ಹಾಗು ಸಿನಿಪ್ರಿಯರಿಂದ ಈ ಚಿತ್ರಗಳನ್ನು ಹೊರಗಿಟ್ಟಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು.

ನಿನ್ನೆ (ನವೆಂಬರ್ 20) ರಂದು ಉದ್ಘಾಟನೆಯಾಗಿರುವ 48ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ) ನ.28ರವರೆಗೆ ನಡೆಯಲಿದೆ.

ಸೆಕ್ಸಿ ದುರ್ಗಾ' ಎಂದೂ ಕರೆಯಲಾಗುವ 'ಎಸ್ ದುರ್ಗಾ', ಒನ್ನ ಮಹಿಳೆ ಮತ್ತು ಪುರುಷರು ಪ್ರಯಾಣ ನಡೆಸುವ ವೇಳೆ ಹಾದಿಯಲ್ಲಿ ನಡೆಯುವ ಘಟನೆಗಳ ಕುರಿತು ಹೆಣೆದಿರುವ ಕಥೆ. ಇಬ್ಬರು ಪುರುಷರ ಕೈಗೆ ಸಿಲುಕಿ ಈ ಇಬ್ಬರು ಪ್ರಯಾಣಿಕರು ಅನುಭವಿಸುವ ಭೀಕರತೆಯನ್ನು ಈ ಸಿನಿಮಾ ತೆರೆದಿಡುತ್ತದೆ. 2017ನೇ ಸಾಲಿನ ರಾಟ್ಟರ್‌ಡ್ಯಾಮ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರವು 'ಹಿವೋಸ್ ಟೈಗರ್' ಪ್ರಶಸ್ತಿಯನ್ನೂ ಪಡೆದಿದೆ.

ಮೂಲಭೂತವಾದಿಗಳು ಸಂಸ್ಕೃತಿಯ ಹೆಸರಿನಲ್ಲಿ ಕಲೆಯ ಮೇಲೆ ನಡೆಸುವ ದಾಳಿಗೆ ನ್ಯಾಯಸ್ಥಾನದಲ್ಲಿ ಜಾಗವಿಲ್ಲ ಎಂಬುದನ್ನು ಎಸ್ ದುರ್ಗಾ ಸಿನೆಮಾದ ಪರವಾಗಿ ಬಂದಿರುವ ತೀರ್ಪು ತೋರಿಸಿಕೊಟ್ಟಿದೆ ಎಂದು ಸಿನಿಮಾ ಮಂದಿ ಸಂತೋಷ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+