ಕಾವ್ಯಾನೇ ನನ್ನ 'ಮೇಡಂ' ಅಂದ ಸುನಿ ಹಾಕಿದ ಬಾಂಬ್!

ಬೆಂಗಳೂರು, ಆಗಸ್ಟ್ 30 : ಕನ್ನಡ ಚಿತ್ರಗಳಲ್ಲಿ ನಟಿಸಿರುವ ಮಲಯಾಳಂನ ಖ್ಯಾತ ನಟಿಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಪಲ್ಸರ್ ಸುನಿ ನೀಡಿರುವ ಹೇಳಿಕೆಯಿಂದ ಭಾರೀ ಬಿರುಗಾಳಿ ಏಳುವ ಸಾಧ್ಯತೆಯಿದೆ.

ವಿಚಾರಣೆಯ ಸಂದರ್ಭದಲ್ಲಿ ಆತ ಪ್ರಸ್ತಾಪಿಸಿದ್ದ 'ಮೇಡಂ' ಮತ್ತಾರೂ ಅಲ್ಲ, ಅವರೇ ಕಳೆದ 50 ದಿನಗಳಿಂದ ಜೈಲು ಸೇರಿರುವ ಮಲಯಾಳಂ ನಟ ದಿಲೀಪ್ ಅವರ ಪತ್ನಿ ಕಾವ್ಯಾ ಮಾಧವನ್! ಹೌದು, ಆ ಮೇಡಂ ಕಾವ್ಯಾ ಮಾಧವನ್ ಅವರೇ ಎಂದು ಆತ ನೀಡಿರುವ ಹೇಳಿಕೆಯಿಂದಾಗಿ ತನಿಖೆಗೆ ರೋಚಕ ತಿರುವು ಸಿಕ್ಕಂತಾಗಿದೆ.

ಅಚ್ಚರಿಯ ಸಂಗತಿಯೆಂದರೆ, ಕಾವ್ಯಾ ಮಾಧವನ್ ಅವರು ಪಲ್ಸರ್ ಸುನಿ ಯಾರು ಎಂಬುದು ಗೊತ್ತೇ ಇಲ್ಲ, ನನಗೂ ಆತನಿಗೂ ಯಾವುದೇ ಸಂಪರ್ಕ, ಸಂಬಂಧವಿಲ್ಲ ಎಂದು ಪೊಲೀಸರು ನಡೆಸಿದ್ದ ವಿಚಾರಣೆಯಲ್ಲಿ ತಿಳಿಸಿದ್ದರು. ಅದೀಗ ಉಲ್ಟಾಪುಲ್ಟಾ ಆಗಿದೆ. ಪಲ್ಸರ್ ಸುನಿ ಮತ್ತು ಕಾವ್ಯಾ ಸಂಪರ್ಕದಲ್ಲಿದ್ದರು ಎಂಬುದು ಖಚಿತವಾಗಿದೆ.

ಆದರೆ, ಮಲಯಾಳಂ ನಟಿಯನ್ನು ಅಪಹರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದರ ಹಿಂದೆ ನಡೆಸಲಾಗಿದ್ದ ಸಂಚಿನಲ್ಲಿ ಕಾವ್ಯಾ ಮಾಧವನ್ ಅವರ ಯಾವುದೇ ಪಾತ್ರವಿಲ್ಲ ಎಂದು ಒಪ್ಪಿಕೊಂಡಿದ್ದಾನೆ. ಅವರಿಂದ ಹಣ ಇಸಿದುಕೊಳ್ಳಲು ಮಾತ್ರ ಅವರ ಪಾತ್ರ ಸೀಮಿತವಾಗಿದ್ದು ಎಂದು ಹೇಳಿದ್ದಾನೆ.

ಪಲ್ಸರ್ ಸುನಿ ಯಾರೆಂದೇ ಗೊತ್ತಿಲ್ಲದ ಕಾವ್ಯಾ ಮಾಧವನ್ ಅವರು ಸುನಿಗೆ 25 ಸಾವಿರ ರುಪಾಯಿ ಯಾಕೆ ಕೊಟ್ಟರು? ಎಂಬುದು ಇನ್ನೂ ನಿಗೂಢವಾಗಿದೆ. ತನ್ನ ಗಂಡ ದಿಲೀಪ್ ಅವರ ಆಜ್ಞೆಯ ಮೇರೆಗೆ ಹಣ ಕೊಟ್ಟಿದ್ದಾಗಿ ಕಾವ್ಯಾ ಮಾಧವನ್ ಅವರು ವಿಚಾರಣೆಯಲ್ಲಿ ಒಪ್ಪಿಕೊಂಡಿರುವುದು ಗಮನಾರ್ಹವಾಗಿದೆ.

ನಡೆದಿತ್ತು ಕಾವ್ಯಾ ಅಂಗಡಿಯ ಮೇಲೆ ದಾಳಿ

ನಡೆದಿತ್ತು ಕಾವ್ಯಾ ಅಂಗಡಿಯ ಮೇಲೆ ದಾಳಿ

ಕೆಲ ತಿಂಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯಾ ಮಾಧವನ್ ಅವರಿಗೆ ಸೇರಿದ ಲಕ್ಷ್ಯ ಎಂಬ ಬೃಹತ್ ಅಂಗಡಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಆಗ, ಅಲ್ಲಿಂದ ಮಲಯಾಳಂ ನಟಿಯ ಮೇಲೆ ನಡೆಸಿದ ದೌರ್ಜನ್ಯದ ವಿಡಿಯೋ ಇರುವ ಹಾರ್ಡ್ ಡಿಸ್ಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಆ ವಿಡಿಯೋದಲ್ಲಿ ಏನಿದೆ ಎಂಬುದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.

ಸುನಿ ಗೊತ್ತೇ ಇಲ್ಲ ಎಂದಿದ್ದ ದಿಲೀಪ್

ಸುನಿ ಗೊತ್ತೇ ಇಲ್ಲ ಎಂದಿದ್ದ ದಿಲೀಪ್

ಪಲ್ಸರ್ ಸುನಿ ವಿಷಯದಲ್ಲಿ ದಿಲೀಪ್ ಕೂಡ ಕಾವ್ಯಾ ನೀಡಿದ್ದ ಹೇಳಿಕೆಯನ್ನೇ ನೀಡಿದ್ದರು. ಆತ ನನಗೆ ಗೊತ್ತೇ ಇಲ್ಲ ಎಂದು ನಾಟಕವಾಡಿದ್ದರು. ಆದರೆ, ಅವರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದಾಗ ತಮಗೂ ಪಲ್ಸರ್ ಸುನಿಗೂ ಇರುವ ವ್ಯಾವಹಾರಿಕ ಸಂಬಂಧವನ್ನು ದಿಲೀಪ್ ಒಪ್ಪಿಕೊಂಡಿದ್ದರು. ಹಲವಾರು ಫೋಟೋಗಳಲ್ಲಿಯೂ ಇದು ಬಯಲಾಗಿತ್ತು. ಪ್ರಕರಣ ಗಂಭೀರವಾಗಿರುವುದರಿಂದ ನ್ಯಾಯಾಲಯ ದಿಲೀಪ್ ಅವರಿಗೆ ಜಾಮೀನು ನೀಡಲು ನಿರಾಕರಿಸಿದೆ.

ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ

ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ

ಸದ್ಯಕ್ಕೆ ಕನ್ನಡದ ನಿರ್ಮಾಪಕರನ್ನು ಮದುವೆಯಾಗುತ್ತಿರುವ ಮಲಯಾಳಂ ನಟಿಯನ್ನು ಫೆಬ್ರವರಿ 17ರಂದು ರಾತ್ರಿಯ ಸಮಯದಲ್ಲಿ ಅತ್ಯಂತ ವ್ಯವಸ್ಥಿತವಾಗಿ, ಸಿನಿಮೀಯವಾಗಿ ಅಪಹರಿಸಿ ಚಲಿಸುತ್ತಿದ್ದ ವಾಹನದಲ್ಲಿ ಐವರು ಲೈಂಗಿಕ ದೌರ್ಜನ್ಯ ಎಸಗಿದ್ದರು. ಇದನ್ನೆಲ್ಲ ಪಲ್ಸರ್ ಸುನಿ ತನ್ನ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿದ್ದ. ನಂತರ ಆ ಮೊಬೈಲನ್ನು ಎಲ್ಲೋ ಬಿಸಾಕಿದ್ದಾಗಿ ಪೊಲೀಸರಿಗೆ ಹೇಳಿಕೆ ನೀಡಿದ್ದ.

ನಟಿಗೆ ಮಂಜು ವಾರಿಯರ್ ಬೆಂಬಲ

ನಟಿಗೆ ಮಂಜು ವಾರಿಯರ್ ಬೆಂಬಲ

ದಿಲೀಪ್ ಅವರ ಮಾಜಿ ಪ್ರೇಯಸಿಯಾಗಿದ್ದ ಮಲಯಾಳಂ ನಟಿ ಮತ್ತು ದಿಲೀಪ್ ನಡುವಿನ ಜಮೀನಿಗೆ ಸಂಬಂಧಿಸಿದ ವ್ಯಾಜ್ಯದಿಂದಲೇ ಇಂಥ ಕೃತ್ಯ ಎಸಗಲಾಯಿತು ಎಂದು ಆರೋಪಿಸಲಾಗಿದೆ. ಇದನ್ನು ದಿಲೀಪ್ ಸಾರಾಸಗಟಾಗಿ ನಿರಾಕರಿಸಿದ್ದಾರೆ. ದಿಲೀಪ್ ಅವರು ಮಾಜಿ ಮಡದಿ ಮಂಜು ವಾರಿಯರ್ ಅವರು ಮಲಯಾಳಂ ನಟಿಯ ಬೆಂಬಲಕ್ಕೆ ನಿಂತಿದ್ದು, ನಟಿಗೆ ನ್ಯಾಯ ಸಿಗಲೇಬೇಕು ಎಂದು ಹೋರಾಟ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+