ಮಂಪರು ಪರೀಕ್ಷೆಗೆ ಸಿದ್ಧರಾದ ಕತುವಾ ಅತ್ಯಾಚಾರಿಗಳು

Posted By:
Subscribe to Oneindia Kannada

ಕತುವಾ, ಏಪ್ರಿಲ್ 16: ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕತುವಾದ ಚೀಫ್ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇಂದಿನಿಂದ ವಿಚಾರಣೆ ಆರಂಭವಾಗಿದ್ದು, ಎಲ್ಲಾ ಎಂಟು ಆರೋಪಿಗಳೂ ಮಂಪರು ಪರೀಕ್ಷೆಗೆ ಸಿದ್ಧರಿದ್ದಾರೆ ಎಂದು ಆರೋಪಿಗಳ ಪರ ವಕೀಲ ಅಂಕುರ್ ಶರ್ಮಾ ಹೇಳಿದ್ದಾರೆ.

ಕತುವಾ ಅತ್ಯಾಚಾರ-ಕೊಲೆ ಪ್ರಕರಣ: ಇಂದಿನಿಂದ ಆರೋಪಿಗಳ

"ನಾವೆಲ್ಲರೂ ಮಂಪರು ಪರೀಕ್ಷೆಗೆ ಸಿದ್ಧವಿದ್ದೇವೆ. ನಾವು ಅಪರಾಧಿಗಳಲ್ಲ" ಎಂದು ಆರೋಪಿಗಳು ಹೇಳಿದ್ದು, ಮುಂದಿನ ವಿಚಾರಣೆ ಏಪ್ರಿಲ್ 28 ರಂದು ನಡೆಯಲಿದೆ ಎಂದು ಅಂಕುರ್ ಶರ್ಮಾ ತಿಳಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಪ್ರಕರಣದ ಪ್ರಮುಖ ಆರೋಪಿ ಸಾಂಜಿ ರಾಮ್ ಅವರ ಪುತ್ರಿ ಮಾತನಾಡಿ, ನನ್ನ ತಂದೆ ಯಾವುದೇ ತಪ್ಪು ಮಾಡಿಲ್ಲ. ಇದೊಂದು ವ್ಯವಸ್ಥಿತ ಪಿತೂರಿ. ದಯವಿಟ್ಟು ಈ ಪ್ರಕರಣವನ್ನು ಸಿಬಿಐ ಗೆ ವಹಿಸಿ ಎಂದು ಬೇಡಿಕೆ ಇಟ್ಟಿದ್ದಾರೆ.

Kathua case: Accused ready for narco tests

ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳ ವಿರುದ್ಧ ಮತ್ತು ಚಾರ್ಜ್ ಶೀಟ್ ಸಲ್ಲಿಸುವುದಕ್ಕೆ ಅಡ್ಡಿಪಡಿಸಿದ ವಕೀಲರ ವಿರುದ್ಧ ಈಗಾಗಲೇ ಎರಡು ಎಫ್ ಐಆರ್ ದಾಖಲಿಸಲಾಗಿದೆ.

ಇಡೀ ದೇಶವನ್ನು ಬೆಚ್ಚಿ ಬೀಳಿಸಿದ ಕತುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಂಭವಿಸಿದ್ದು ಇದೇ ವರ್ಷದ ಜನವರಿ ತಿಂಗಳಿನಲ್ಲಿ. ಕತುವಾದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ, ಆಕೆಗೆ ಮತ್ತು ಬರುವ ಔಷಧ ನೀಡಿ, ದೇವಾಲಯದಲ್ಲಿ ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ನಂತರ ಆಕೆಯನ್ನು ಕೊಲೆ ಮಾಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The counsel for the accused in the alleged murder and rape of an eight-year-old girl, Ankur Sharma said on Monday that all of them were ready for the narco tests. After taking part in the first hearing of the case in the court of Kathua Chief Judicial Magistrate, Sharma also said the chargesheet copies provided to one or two accused did not contain medical records and other details.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ