ಮೋದಿ ಸರ್ಕಾರಕ್ಕೆ ಮೊದಲ ದಿನವೇ ಶಿಕ್ಷಣ ನೀತಿ ವರದಿ ಸಲ್ಲಿಕೆ
ನವದೆಹಲಿ, ಜೂನ್ 1: ಮೋದಿ ಸರ್ಕಾರಕ್ಕೆ ಮೊದಲ ದಿನವೇ ಶಿಕ್ಷಣ ನೀತಿ ವರದಿ ಸಲ್ಲಿಕೆಯಾಗಿದೆ.ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಶೈಕ್ಷಣಿಕ ನೀತಿಗೆ ಸಂಬಂಧಿಸಿ ಕೆ. ಕಸ್ತೂರಿ ರಂಗನ್ ವರದಿಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಶುಕ್ರವಾರ ಸಲ್ಲಿಕೆಯಾಗಿದೆ.
ಜೂನ್ ಮೊದಲ ವಾರದಲ್ಲಿ ಈ ವರದಿಯು ಬಹಿರಂಗಗೊಳ್ಳಲಿದ್ದು, ಬಳಿಕ ಸಾರ್ವಜನಿಕರ ಅಭಿಪ್ರಾಯ ಪಡೆದು ಲೋಕಸಭೆಗೆ ಬರಲಿದೆ. ಹೊಸ ಸಚಿವರಿಗೆ ಮೊದಲ ದಿನವೇ ಹೊಸ ಸವಾಲು ಎದುರಾಗಿದೆ.
ಭಾರತೀಯ ಶಿಕ್ಷಣ ವ್ಯವಸ್ಥೆ ಅನುಷ್ಠಾನ,ಭಾರತದ ಇತಿಹಾಸ ಹಾಗೂ ಹಿನ್ನೆಲೆಗೆ ಹೆಚ್ಚಿನ ಒತ್ತು, ಪಠ್ಯದಲ್ಲಿ ಭಾರತೀಯ ಸಾಧಕರ ಮಾಹಿತಿ ಹೆಚ್ಚಳ, ಸೆಮಿಸ್ಟರ್ ಅವಧಿಯಲ್ಲಿ ವಿದ್ಯಾರ್ಥಿಗಳು ತಾವು ಸಿದ್ಧ ಎನಿಸಿದಾಗ ನಿಗದಿತ ವಿಷಯದ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ, ಯಾವುದಾದರೂ ಒಂದು ವಿಷಯದ ಬಗ್ಗೆ ಹೆಚ್ಚಿನ ಕಲಿಕೆ ಅಗತ್ಯ ಎದು ವಿದ್ಯಾರ್ಥಿಗೆ ಅನಿಸಿದರೆ ಮರು ಕಲಿಕೆಗೆ ಅವಕಾಶ.
ಖಾಸಗಿ ಶಿಕ್ಷಣ ಸಂಸ್ಥೆಗಳ ಅನಿಯಮಿತ ಶುಲ್ಕ ಏರಿಕೆಗೆ ಕಡಿವಾಣ, ಶುಲ್ಕ ನಿಗದಿಗೆ ಪ್ರತ್ಯೇಕ ಸಂಸ್ಥೆ ಸ್ಥಾಪನೆ ಸೇರಿದಂತೆ ಅನೇಕ ವಿಷಯಗಳು ಇದರಲ್ಲಿ ಅಡಕವಾಗಿದೆ.
ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದಾಗಲೇ ಈ ಸಮಿತಿ ರಚಿಸಲಾಗಿತ್ತು, 2040 ರ ವರೆಗೆ ದೇಶದ ಶೈಕ್ಷಣಿಕ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಈ ಶಿಕ್ಷಣ ನೀತಿ ನಿರೂಪಿಸಲಿದೆ.

ವಿದ್ಯಾರ್ಥಿಗಳಿಗೆ ಭಾರತೀಯ ಶಿಕ್ಷಣ ವ್ಯವಸ್ಥೆ ಪರಿಚಯ ಹಾಗೂ ಆಧುನಿಕ ಶಿಕ್ಷಣ ಪದ್ಧತಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಎನ್‌ಡಿಎ ಸರ್ಕಾರ ಶಿಕ್ಷಣ ನೀತಿ ಬಯಸಿತ್ತು.
ಸುದೀರ್ಘ ಚರ್ಚೆ ಹಾಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ನೂತನ ಸಚಿವರಿಗೆ ಕಸ್ತೂರಿ ರಂಗನ್ ವರದಿ ನೀಡಿದ್ದಾರೆ. ನೂತನ ಸಚಿವ ರಮೇಶ್ ಪೋಕ್ರಿಯಾಲ್ ಗೆ ಮೊದಲ ದಿನವೇ ವರದಿ ಸಲ್ಲಿಸಲಾಗಿತ್ತು.












Click it and Unblock the Notifications