ರೈಫಲ್ ಗಳೊಂದಿಗೆ ಕಾಣೆಯಾಗಿದ್ದ ಪೇದೆ ಉಗ್ರ ಸಂಘಟನೆಗೆ ಸೇರ್ಪಡೆ
ಶ್ರೀನಗರ, ಮೇ 22 : ಕಾಶ್ಮೀರದ ಬುದ್ ಗಾಂ ಜಿಲ್ಲೆಯಲ್ಲಿ ನಾಲ್ಕು ಸರ್ವೀಸ್ ರೈಫಲ್ ಗಳೊಂದಿಗೆ ಪರಾರಿಯಾಗಿದ್ದ ಪೊಲೀಸ್ ಪೇದೆ ಉಗ್ರ ಸಂಘಟನೆಯೊಂದಕ್ಕೆ ಸೇರಿದ್ದಾನೆಂದು ತಿಳಿದು ಬಂದಿದೆ.
ಬುದ್ ಗಾಂ ಜಿಲ್ಲೆಯ ಚಂದ್‍ಪುರದ ಎಫ್‍ಸಿಐ ಗೋದಾಮಿನಿಂದ ಶನಿವಾರ ಐಎನ್ ಎಸ್ ಎಎಸ್ ಎನ್ನುವ ನಾಲ್ಕು ಸರ್ವೀಸ್ ರೈಫಲ್ ಗಳನ್ನು ತೆಗೆದುಕೊಂಡು ಕಾಣೆಯಾಗಿದ್ದ ಪೊಲೀಸ್ ಕಾನ್ ಸ್ಟೆಬಲ್ ಸಯ್ಯದ್ ನವೀದ್ ಮುಷ್ತಾಕ್, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಉಗ್ರರ ಬಗ್ಗುಬಡಿಯಲು ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಳ್ವಿಕೆ?]

2015 ಮಾ.27ರಂದು ಪುಲ್ವಾಮಾ ಜಿಲ್ಲೆಯ ಪೊಲೀಸ್ ಸಿಬ್ಬಂದಿ ನಜೀರ್ ಅಹಮದ್ ಪಂಡಿತ್ ಎರಡು ಎಕೆ ರೈಫಲ್ ಗಳೊಂದಿಗೆ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications