ಪತಿಯ ಆಯುಷ್ಯ ವೃದ್ಧಿಗೆ ಕರ್ವ ಚೌತ್: ಸುಂದರ ಲಲನೆಯರ ಚೆಂದದ ಚಿತ್ರಗಳು

ಜೈಪುರ, ಅಕ್ಟೋಬರ್ 8: ಪತಿಯ ದೀರ್ಘಾಯುಷ್ಯಕ್ಕಾಗಿ ಪತ್ನಿ ಸೂರ್ಯೋದಯದಿಂದ, ಚಂದ್ರೋದಯದವರೆಗೂ ಉಪವಾಸ ಮಾಡುವ ಹಬ್ಬ ಕರ್ವ ಚೌತ್. ಆಶ್ವಯುಜ ಮಾಸದ, ಕೃಷ್ಣ ಪಕ್ಷದ ಚೌತಿಯಂದು ಈ ಹಬ್ಬವನ್ನು ಪ್ರಮುಖವಾಗಿ ರಾಜಸ್ಥಾನ, ಉತ್ತರಪ್ರದೇಶ, ಹಿಮಾಚಲ ಪ್ರದೇಶ, ಪಂಜಾಬ್, ಹರ್ಯಾಣ ರಾಜ್ಯಗಳಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ದಕ್ಷಿಣ ಭಾರತೀಯರು ಭೀಮನ ಅಮಾವಾಸ್ಯೆ ಹಬ್ಬವನ್ನು ಆಚರಿಸುವಂತೆಯೇ ಉತ್ತರ ಭಾರತೀಯರು ಕರ್ವ ಚೌತವನ್ನು ಆಚರಿಸುತ್ತಾರೆ. ಆಚರಣೆ, ಪೂಜಾ ವಿಧಾನ ಬೇರೆ ಬೇರೆಯಾದರೂ ಎರಡೂ ಹಬ್ಬಗಳ ಉದ್ದೇಶ ಮಾತ್ರ ಒಂದೇ. ವಿವಾಹಿತ ಮಹಿಳೆಯರು ಪತಿಯ ಆರೋಗ್ಯ, ಆಯುಷ್ಯ ವೃದ್ಧಿಸುವಂತೆ ಪ್ರಾರ್ಥಿಸಿದರೆ, ಅವಿವಾಹಿತ ಮಹಿಳೆಯರು ತಮ್ಮ ಭಾವಿ ಪತಿ ಹೇಗಿರಬೇಕೆಂದು ಪ್ರಾರ್ಥಿಸಿಯೂ ಈ ವ್ರತ ಆಚರಿಸುತ್ತಾರೆ.

ಪತಿಯ ಆಯಸ್ಸು ವೃದ್ಧಿಯ ಜೊತೆಗೆ, ಸಮೃದ್ಧ ಬೆಳೆಯ ಪ್ರಾರ್ಥನೆಯೊಂದಿಗೆ ಉಪವಾಸ ಆರಂಭವಾಗುತ್ತದೆ. ಚಂದ್ರೋದಯವಾಗುತ್ತಿದ್ದಂತುಯೇ, ಸಿಂಗರಿಸಿದ ಜರಡಿಯಲ್ಲಿ ಚಂದ್ರನನ್ನೊಮ್ಮೆ ನೋಡಿದ ನಂತರ ಉಪವಾಸ ವ್ರತ ಸಂಪೂರ್ಣವಾದಂತೆ.

ನಿನ್ನೆ(ಅಕ್ಟೋಬರ್ 8) ರಂದು ಉತ್ತರ ಭಾರತದಾದ್ಯಂತ ಕರ್ವ ಚೌತ್ ಆಚರಿಸಲಾಯಿತು. ಲಲನೆಯರು ಬಣ್ಣ ಬಣ್ಣದ ಸೀರೆ ಉಟ್ಟು ಪತಿಯ ಆಯುಷ್ಯಕ್ಕಾಗಿ ವ್ರತ ಕೈಗೊಂಡರು. ದೇಶದ ನಾನಾ ಕಡೆ ನಡೆದ ಕರ್ವ ಚೌತ್ ನ ಚಿತ್ರಗಳು ಇಲ್ಲಿವೆ.

ಜಮ್ಮು ಮಹಿಳೆ

ಜಮ್ಮು ಮಹಿಳೆ

ಜಮ್ಮು-ಕಾಶ್ಮೀರದಲ್ಲಿ ಜರಡಿಯ ಮೂಲಕ ಚಂದ್ರನನ್ನು ನೋಡಿ ಕರ್ವ ಚೌತ್ ವ್ರತ ಮುಗಿಸಿದ ವಿವಾಹಿತ ಮಹಿಳೆಯರು.

ವಾರಾಣಸಿಯಲ್ಲೂ ಆಚರಣೆ

ವಾರಾಣಸಿಯಲ್ಲೂ ಆಚರಣೆ

ಪತಿಯ ಆಯುಷ್ಯ ವೃದ್ಧಿಯ ಪ್ರಾರ್ಥನೆಯೊಂದಿಗೆ ಚಂದ್ರದರ್ಶನ ಮಾಡಿದ ವಾರಾಣಾಸಿಯ ಸುಂದರ ಮಹಿಳೆಯರು.

ದೇವಾಲಯದಲ್ಲೂ ಆಚರಣೆ

ದೇವಾಲಯದಲ್ಲೂ ಆಚರಣೆ

ಅಲಹಾಬಾದ್ ನ ದೇವಾಲಯವೊಂದರಲ್ಲಿ ಮಹಿಳೆಯರೆಲ್ಲ ಸೇರಿ ಕರ್ವ ಚೌತಿಯ ಸಂಪ್ರದಾಯದಲ್ಲಿ ಭಾಗಿಯಾದರು.

ಪಾಟ್ನಾದಲ್ಲಿ ಸಂಭ್ರಮ

ಪಾಟ್ನಾದಲ್ಲಿ ಸಂಭ್ರಮ

ಬಿಹಾಸರದ ಪಾಟ್ನಾದಲ್ಲಿ ಹೆಂಗೆಳಯರು ಜರಡಿಯಲ್ಲಿ ಚಂದ್ರನನ್ನು ನೋಡುತ್ತ ಪೋಸು ಕೊಟ್ತಿದ್ದು ಹೀಗೆ.

ಅಮೃತಸರದಲ್ಲಿ ಅದ್ಧೂರಿ ಕರ್ವ ಚೌತ್

ಅಮೃತಸರದಲ್ಲಿ ಅದ್ಧೂರಿ ಕರ್ವ ಚೌತ್

ಪಂಜಾಬಿನ ಅಮೃತಸರದಲ್ಲಿ ಕರ್ವ ಚೌತ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಸರ್ವಾಲಂಕರಾಭೂಷಿತೆಯರಾದ ಮಹಿಳೆಯರು ಪತಿಯ ಆಯುಷ್ಯ ವೃದ್ಧಿಗೆ ಪ್ರಾರ್ಥಿಸಿದರು.

ಶಿಮ್ಲಾದಲ್ಲಿ ಸಾಮೂಹಿಕ ಆಚರಣೆ

ಶಿಮ್ಲಾದಲ್ಲಿ ಸಾಮೂಹಿಕ ಆಚರಣೆ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿಸಾಮೂಹಿಕವಾಗಿ ಕರ್ವ ಚೌತ್ ಆಚರಿಸಿದ ಹೆಂಗೆಳೆಯರು.

ಬಿಕನೇರ್ ನಲ್ಲಿ ಸಂಭ್ರಮ

ಬಿಕನೇರ್ ನಲ್ಲಿ ಸಂಭ್ರಮ

ಕರ್ವ ಚೌತ್ ಹೆಚ್ಚು ಚಾಲ್ತಿಯಲ್ಲಿರುವುದು, ಮತ್ತು ಈ ಹಬ್ಬವನ್ನು ಹೆಚ್ಚಿನ ಜನ ಆಚರಿಸುವುದು ರಾಜಸ್ಥಾನದಲ್ಲೇ. ಇಲ್ಲಿನ ಬಿಕನೇರ್ ನಲ್ಲಿ ಮಹಿಳೆಯರು ಕರ್ವ ಚೌತ ಆಚರಿಸಿದ್ದು ಹೀಗೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+