'ಇದು ಟ್ರೈಲರ್ ಅಷ್ಟೇ, 2019ರಲ್ಲಿ ಫುಲ್ ಸಿನ್ಮಾ ನೋಡಿ'

ಬೆಂಗಳೂರು, ಮೇ 23 : ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಾದ ಬೆಳವಣಿಗೆ, ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿದ್ದು ಕೇವಲ ಟ್ರೈಲರ್ ಅಷ್ಟೆ. ಆದರೆ, ಪೂರ್ಣ ಸಿನೆಮಾ 2019ರ ಸಾರ್ವತ್ರಿಕ ಚುನಾವಣೆ ನಂತರ ಬಿಡುಗಡೆಯಾಗಲಿದೆ ಎಂದು ಆಂಧ್ರಪ್ರದೇಶ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಹೇಳಿದ್ದಾರೆ.

ಧರ್ಮ ಪೊರತಮ್ ಸಭಾ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೆಲುಗು ಜನಾಂಗ ಕರ್ನಾಟಕ ಚುನಾವಣೆಯಲ್ಲಿ ಕೇವಲ ಟ್ರೈಲರ್‌ ತೋರಿಸಿದ್ದಾರೆ. ಮುಂದಿನ 2019ರ ಚುನಾವಣೆಯಲ್ಲಿ ಅವರೇ ಸಂಪೂರ್ಣ ಸಿನೆಮಾವನ್ನು ತೋರಿಸಲಿದ್ದಾರೆ ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Karnataka just trailer, full movie in 2019, says Andhra IT Minister Nara Lokesh

ಹೊಸ ಸರ್ಕಾರದಿಂದಾಗಿ ರಾಜ್ಯಕ್ಕೆ ಸಹಾಯವಾಗಬಹುದು ಎನ್ನುವ ನಿಟ್ಟಿನಲ್ಲಿ 2014ರಲ್ಲಿ ಟಿಡಿಪಿ(ತೆಲುಗು ದೇಶಂ ಪಾರ್ಟಿ) ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡಿದ್ದೆವು. ಆದರೆ, ಅದೆಲ್ಲವೂ ಹುಸಿಯಾಯಿತು. ವಾರ್ಡ್‌ ಮೆಂಬರ್‌ಗಳಾಗಿಯೂ ಗೆಲ್ಲದವರಿಗೂ ಟಿಡಿಪಿ ಅವಕಾಶ ಮಾಡಿಕೊಟ್ಟಿತ್ತು. ಬಿಜೆಪಿಯ ಶಾಸಕರು ಮತ್ತು ಸಂಸದರನ್ನು ಆರಿಸಿ ಕಳುಹಿಸಲಾಗಿತ್ತು ಎಂದು ಕಿಡಿಕಾರಿದ್ದಾರೆ.

ಇದಲ್ಲದೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಕ್ಷವೂ ಕೂಡ ರಾಜ್ಯದಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+