ಕರ್ನಾಟಕ ಚುನಾವಣಾ ಫಲಿತಾಂಶ 2023; ಡೈಲಿಹಂಟ್‌ನಲ್ಲಿ ನಿಖರ ಮಾಹಿತಿ

ಕರ್ನಾಟಕ ಚುನಾವಣಾ ಫಲಿತಂಶ 2023 ಡೈಲಿಹಂಟ್‌ Live: ವಿಧಾನಸಭೆ ಚುನಾವಣೆ 2023ರ ಫಲಿತಾಂಶ ಮೇ 13ರ ಶನಿವಾರ ಪ್ರಕಟವಾಗಲಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮೇ 10ರ ಬುಧವಾರ ಮತದಾನ ನಡೆದಿತ್ತು. ಒಟ್ಟು 2613 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 2,427 ಪುರುಷರು, 184 ಮಹಿಳೆಯರು ಮತ್ತು ಇಬ್ಬರು ಇತರ ಅಭ್ಯರ್ಥಿಗಳು.

ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಲ್ಲಿ 224 ಬಿಜೆಪಿ, 223 ಕಾಂಗ್ರೆಸ್ (ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪಕ್ಷಕ್ಕೆ ಬೆಂಬಲ), 207 ಜೆಡಿಎಸ್, 209 ಎಎಪಿ, 133 ಬಿಎಸ್ಪಿ, 4 ಸಿಪಿಐ(ಎಂ), 8 ಜೆಡಿಯು ಮತ್ತು ಎನ್‌ಪಿಪಿಯ ಇಬ್ಬರು. 685 ಮಾನ್ಯತೆ ಪಡೆಯದ ಪಕ್ಷದ ಅಭ್ಯರ್ಥಿಗಳು, 918 ಪಕ್ಷೇತರರು.

Karnataka Election Results 2023 Tune Into Dailyhunt To Get Fastest Coverage

ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲು 5,31,33,054 ಜನರು ಅರ್ಹತೆ ಹೊಂದಿದ್ದರು. ಇವರ ಪೈಕಿ 16 ಲಕ್ಷ ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡುವವರು ಆಗಿದ್ದರು. ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮನೆಯಿಂದಲೇ ಮತದಾನ ಮಾಡಲು 80 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರಿಗೆ ಅವಕಾಶ ನೀಡಲಾಗಿತ್ತು.

ಡೈಲಿಹಂಟ್ ಕವರೇಜ್; ಡೈಲಿಹಂಟ್ ಕರ್ನಾಟಕ ವಿಧಾನಸಭೆ ಚುನಾವಣೆ ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿಯನ್ನು ನೀಡಲಿದೆ. ಚುನಾವಣೆ ಎಂದರೆ ಕೇವಲ ಅಂಕಿ ಸಂಖ್ಯೆಗಳು ಎಂಬುದು ನಮ್ಮ ನಂಬಿಕೆಯಲ್ಲ. ಜನರ ಬದುಕಿನ ಮೇಲೆ ಪ್ರಭಾವ ಬೀರುವ ಚುನಾವಣೆ ಮಾಹಿತಿಯ ವಿವರಗಳು, ವಿಶ್ಲೇಷಣೆ ಮೂಲಕ ಸರಿಯಾದ ಚಿತ್ರಣವನ್ನು ನೀಡಲಿದ್ದೇವೆ.

ಒಮ್ಮೆ ಅಂಕಿ ಸಂಖ್ಯೆಗಳು ಬರಲು ಆರಂಭವಾದ ಬಳಿಕ ಎಲ್ಲಾ ದೃಷ್ಟಿಕೋನಗಳಿಂದ ಅದರ ವಿಶ್ಲೇಷಣೆ ಮಾಡಲಿದ್ದೇವೆ. ನಂಬರ್‌ಗಳ ಚಿತ್ರಣದ ಆಳಕ್ಕೆ ಇಳಿದು ವಿವರಗಳನ್ನು ನೀಡಲಿದ್ದೇವೆ. ಸಾಮಾನ್ಯ ಜನರಿಗೆ ರಾಜಕೀಯ ವಿಶ್ಲೇಷಕರ ಮೂಲಕ ಸರಿಯಾದ ವಿಶ್ಲೇಷಣೆ ಕಟ್ಟಿಕೊಡಲಿದ್ದೇವೆ.

ಡೈಲಿ ಹಂಟ್ ಚುನಾವಣಾ ಫಲಿತಾಂಶದ ಚಿತ್ರಣವನ್ನು ಕಟ್ಟಿಕೊಡಲಿದೆ. ಇದರಲ್ಲಿ ಲೈವ್ ಪೇಜ್ ಮೂಲಕ ಕ್ಷಣ-ಕ್ಷಣದ ಮಾಹಿತಿ ವೇಗವಾಗಿ ನೀಡುವುದು, ಚಿತ್ರಣವನ್ನು ಸರಳವಾಗಿ ಜನರಿಗೆ ತಲುಪಿಸುವುದು ಸೇರಿದೆ. ಕಳೆದ ಚುನಾವಣೆಯ ಫಲಿತಾಂಶದ ಜೊತೆ ಹೋಲಿಕೆ, ರಾಜ್ಯವಾರು, ಕ್ಷೇತ್ರವಾರು ಬದಲಾಗುವ ಸಂಖ್ಯೆಗಳನ್ನು ನಿಖರವಾಗಿ ನೀಡಲಿದ್ದೇವೆ. ಸಾಮಾಜಿಕ ಜಾಲತಾಣ ಟ್ವೀಟರ್ ಟ್ರೆಂಡ್ ಸಹ ಕಟ್ಟಿಕೊಡಲಿದ್ದೇವೆ.

ಕ್ಷಣ ಕ್ಷಣದ ವಿಡಿಯೋಗಳು, ವೈರಲ್ ಮೀಮ್‌ಗಳು, ಟ್ರೆಂಡಿಂಗ್ ಸ್ಟೋರಿಗಳು ಸಹ ನಿಮಗೆ ಲಭ್ಯವಾಗಲಿವೆ. ಫೋಟೋ, ವಿಡಿಯೋ ಕ್ಷಣ ಕ್ಷಣದ ಫಲಿತಾಂಶಕ್ಕಾಗಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+