ಜೈ ಶ್ರೀರಾಮ್ ಎಂದು ಹೇಳದ ಮುಸ್ಲಿಂ ಯುವಕನಿಗೆ ಪೆಟ್ಟು

ಕಾನ್ಪುರ್, ಜೂನ್ 30: ಮುಸ್ಲಿಂ ಟೋಪಿ ಧರಿಸಿದ್ದ 16 ವರ್ಷ ವಯಸ್ಸಿನ ಯುವಕನೊಬ್ಬನನ್ನು 'ಜೈ ಶ್ರೀರಾಮ್' ಎಂದು ಘೋಷಿಸುವಂತೆ ಗುಂಪೊಂದು ಒತ್ತಾಯಿಸಿದೆ. ನಿರಾಕರಿಸಿದ ಯುವಕನಿಗೆ ಅಪರಿಚಿತ ಗುಂಪೊಂದು ಥಳಿಸಿದ ಘಟನೆ ವರದಿಯಾಗಿದೆ.

ಪೆಟ್ಟು ತಿಂದ ಯುವಕನನ್ನು ಮೊಹಮ್ಮದ್ ತಾಜ್ ಎಂದು ಗುರುತಿಸಲಾಗಿದೆ, ಬರಾ ಗ್ರಾಮದ ನಿವಾಸಿಯಾಗಿದ್ದು, ಉತ್ತರಪ್ರದೇಶದ ಕಿದ್ವಾಣಿ ನಗರದಲ್ಲಿ ನಮಾಜ್ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಗುಂಪೊಂದು ಅಡ್ಡಗಟ್ಟಿದೆ.

ಮನೆಯಿಂದ ಕೇವಲ ನೂರು ಮೀಟರ್ ದೂರಲ್ಲಿರುವಾಗ ಮುರ್ನಾಲ್ಕು ಮಂದಿ ಬೈಕಿನಲ್ಲಿ ಬಂದು ಅಡ್ಡಗಟ್ಟಿ, ಇದೇನು ಟೋಪಿ ಧರಿಸಿದ್ದಿಯಾ? ಜೈ ಶ್ರೀರಾಮ್ ಎಂದು ಹೇಳು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದಿದ್ದಕ್ಕೆ ಮೊಹಮ್ಮದ್ ನನ್ನು ತಳ್ಳಿ, ಒದ್ದು, ಥಳಿಸಿದ್ದಾರೆ.

Kanpur : Unidentified men thrashed Muslim Boy For Refusing To Chant Jai Shri Ram

ನನ್ನ ಟೋಪಿ ತೆಗೆದು, ಕೆಳಕ್ಕೆ ತಳ್ಳಿ, ಎಲ್ಲರೂ ಒಟ್ಟಿಗೆ ಥಳಿಸಿದರು ಎಂದು ಮೊಹಮ್ಮದ್ ತಾಜ್ ತನ್ನ ದೂರಿನಲ್ಲಿ ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಐಪಿಸಿ ಸೆಕ್ಷನ್ 153 ಎ ಅನ್ವಯ ಎಫ್ ಐಆರ್ ದಾಖಲಾಗಿಸಿದ್ದು, ತನಿಖೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+