ಕಂಗನಾ ರಣಾವತ್‌ಗೆ ಲೋಕಸಭೆ ಚುನಾವಣೆ 2024ರ ಟಿಕೆಟ್ ಘೋಷಿಸಿದ ಬಿಜೆಪಿ!
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಈಗ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರವನ್ನ ಹಿಡಿದು, ಸರ್ಕಾರ ರಚಿಸಲು ರೆಡಿಯಾಗಿದೆ. ಹೀಗಿದ್ದಾಗ ಕ್ರಾಂತಿಕಾರಿ ನಿರ್ಣಯ ಕೈಗೊಂಡು ಟಿಕೆಟ್ ವಿತರಣೆ ಮಾಡುತ್ತಿದೆ ಬಿಜೆಪಿ. ಇದೀಗ ತನ್ನ 5ನೇ ಪಟ್ಟಿಯನ್ನ ಬಿಜೆಪಿ ಪ್ರಕಟಿಸಿದ್ದು ಇದರಲ್ಲಿ ನಟಿ ಕಂಗನಾ ರಣಾವತ್ ಅವರಿಗೆ ಕೂಡ ಟಿಕೆಟ್ ಘೋಷಣೆ ಮಾಡಿದೆ. ಹಾಗಾದ್ರೆ ಕಂಗನಾ ಯಾವ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ? ಮಾಹಿತಿಗೆ ಮುಂದೆ ಓದಿ.
ಅಂದಹಾಗೆ ಈ ಮೊದಲಿನಿಂದ ಕೂಡ ನರೇಂದ್ರ ಮೋದಿ ಅವರ ಸರ್ಕಾರವನ್ನು ಬೆಂಬಲಿಸುತ್ತಾ ಬಂದಿದ್ದ ಕಂಗನಾ ರಣಾವತ್ ಅವರಿಗೆ ಸಾಕಷ್ಟು ಪರ & ವಿರೋಧದ ಅಲೆ ಕೂಡ ಎದುರಾಗಿತ್ತು. ಆದರೂ ಇದ್ಯಾವುದನ್ನೂ ಲೆಕ್ಕ ಮಾಡದ ಬಿಜೆಪಿ ಹೈಕಮಾಂಡ್, ಗಟ್ಟಿ ನಿರ್ಧಾರ ಕೈಗೊಂಡು ಕಂಗನಾ ಅವರಿಗೆ ಮಣೆ ಹಾಕಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಕಂಗನಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಈ ವಿಚಾರ ತಿಳಿಯುತ್ತಿದ್ದಂತೆ ಕಂಗನಾ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಹಾಗೇ ಖುದ್ದು ಕಂಗನಾ ಕೂಡ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

ಕಂಗನಾ ಆಯ್ಕೆ ಹಿಂದೆ ರಣತಂತ್ರ?
ನಿಮಗೆಲ್ಲಾ ಗೊತ್ತಿರುವಂತೆ ನಟಿ ಕಂಗನಾ ಅವರು ಬಾಲಿವುಡ್ ಅಂಗಳದಲ್ಲಿ ಭಾರಿ ದೊಡ್ಡ ಹಿಟ್ ಸಿನಿಮಾಗಳನ್ನ ನೀಡಿದ್ದವರು. ಹಾಗೇ ರಾಜಕೀಯ ಅಖಾಡದಲ್ಲೂ ಬಿಜೆಪಿ ಪರವಾಗಿ, ಹಲವಾರು ಬಾರಿ ಸಮರ್ಥನೆ ಕೂಡ ಮಾಡಿಕೊಂಡಿದ್ದರು. ಇದು ಚರ್ಚೆಗೆ ಬಂದಿತ್ತಾದರೂ, ಅದರ ಬಗ್ಗೆ ಕಂಗನಾ ಕೇರ್ ಮಾಡದೆ ಮುನ್ನುಗ್ಗಿದ್ದರು. ಈಗ ನೋಡಿದರೆ ಬಿಜೆಪಿ ಟಿಕೆಟ್‌ನ ಪಡೆದು, ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಮುಂದಾಗಿದ್ದಾರೆ. ಹಾಗಾದರೆ ಈಗ ತಮಗೆ ಟಿಕೆಟ್ ಸಿಕ್ಕ ಬಗ್ಗೆ ಕಂಗನಾ ಹೇಳಿದ್ದು ಏನು?
'ನನ್ನ ಪ್ರೀತಿಯ ಭಾರತ & ಭಾರತೀಯ...'
ಈ ಕುರಿತು ಇದೀಗ ಹೇಳಿಕೆ ನೀಡಿರುವ ನಟಿ ಕಂಗನಾ ಅವರು, 'ನನ್ನ ಪ್ರೀತಿಯ ಭಾರತ ಮತ್ತು ಭಾರತೀಯ ಜನರ ಸ್ವಂತ ಪಕ್ಷ, ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಯಾವಾಗಲೂ ನನ್ನ ಬೇಷರತ್ ಬೆಂಬಲ ಹೊಂದಿದೆ, ಇಂದು ಬಿಜೆಪಿಯ ರಾಷ್ಟ್ರೀಯ ನಾಯಕತ್ವವು ನನ್ನ ಜನ್ಮಸ್ಥಳ ಹಿಮಾಚಲ ಪ್ರದೇಶದಿಂದ ನನ್ನನ್ನ ಬಿಜೆಪಿ ಲೋಕಸಭಾ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಮಂಡಿ (ಕ್ಷೇತ್ರ) ದಿಂದ ನನ್ನ ಲೋಕಸಭೆ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲು ನನಗೆ ಹೆಮ್ಮೆ & ಹರ್ಷವಿದೆ.' ಎಂದಿದ್ದಾರೆ ಕಂಗನಾ ಅವರು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಪೋಸ್ಟ್ ಒಂದನ್ನು ಹಾಕಿದ್ದಾರೆ ನಟಿ ಕಂಗನಾ.
ಒಟ್ನಲ್ಲಿ ನಟಿ ಕಂಗನಾ ಅವರ ಆಯ್ಕೆ ಬಳಿಕ ಈಗ ಬಿಜೆಪಿ ಹೈಕಮಾಂಡ್ ಕ್ರಾಂತಿಕಾರಿಯಾದ ನಿರ್ಧಾರ ಕೈಗೊಳ್ಳುತ್ತಿರುವ ಎಲ್ಲಾ ಮುನ್ಸೂಚನೆ ಕಾಣ್ತಿದೆ. ಹಾಗೇ ಈ ಮೂಲಕ ಲೋಕಸಭೆ ಅಖಾಡದಲ್ಲಿ ಭರ್ಜರಿ ಗೆಲುವು ಸಾಧಿಸಲು ಬೇಕಿರುವ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಬಿಜೆಪಿ ಹೈಕಮಾಂಡ್. ಹಾಗೇ ಕಾರ್ಯಕರ್ತರು ಕೂಡ ಬಿಜೆಪಿ ಗೆಲುವಿಗಾಗಿ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ವಿರೋಧ ಪಕ್ಷಗಳು ಕಂಗನಾ ಆಯ್ಕೆ ಬಗ್ಗೆ ಹೇಗೆ ಪ್ರತಿಕ್ರಿಯೆ ನೀಡುತ್ತವೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications