Justin Bieber: ಅನಂತ್-ರಾಧಿಕಾ ವಿವಾಹ; ₹83 ಕೋಟಿ ಚೆಕ್ ಪಡೆದು ಹೊರಟ ಜಸ್ಟಿನ್ ಬೀಬರ್
ಖ್ಯಾತ ಪಾಪ್ ತಾರೆ ಜಸ್ಟಿನ್ ಬೀಬರ್ ಕೇವಲ ಒಂದು ರಾತ್ರಿಯ ಪ್ರದರ್ಶನಕ್ಕಾಗಿ ಬರೋಬ್ಬರಿ 83 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಂಡಿದ್ದಾರೆ. ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಅವರ ವಿವಾಹ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಸ್ಟಿನ್ ಬೀಬರ್ 83 ಕೋಟಿ ರೂಪಾಯಿ ಚೆಕ್ ಪಡೆದು ವಾಪಸ್ ತೆರಳಿದ್ದಾರೆ.
ಯುಎಸ್‌ನ ಜಸ್ಟಿನ್ ಬೀಬರ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭದಲ್ಲಿ ಕಾರ್ಯಕ್ರಮ ಕೊಡಲು ಮುಂಬೈಗೆ ಆಗಮಿಸಿದ್ದರು. ತಮ್ಮ ಸಂಗೀತದ ಮೂಲಕ ಸಂಗೀತ ಸಮಾರಂಭವನ್ನು ವಿಶೇಷವಾಗಿಸಿದರು.

ತಮ್ಮ ಜನಪ್ರಿಯ ಟಾಪ್ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮದ ಸಂಭ್ರಮ ಹೆಚ್ಚಿಸಿದರು. ಶನಿವಾರ ಬೆಳಗ್ಗೆ ಮುಂಬೈನಿಂದ ಯುಎಸ್‌ಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ತೆರಳಿದ್ದು ಕಂಡುಬಂದಿದೆ.
83 ಕೋಟಿ ರೂಪಾಯಿ ಸಂಭಾವನೆ
ವರದಿಗಳ ಪ್ರಕಾರ, ಜಸ್ಟಿನ್ ಬೀಬರ್ ಅವರಿಗೆ 10 ಮಿಲಿಯನ್ ಡಾಲರ್ ಮೊತ್ತವನ್ನು ನೀಡಲಾಗಿದೆ (ಭಾರತೀಯ ಕರೆನ್ಸಿಯಲ್ಲಿ 83 ಕೋಟಿ ರೂಪಾಯಿ). ಅದು ಕೂಡ ಎರಡು-ಮೂರು ಗಂಟೆಗಳ ಪ್ರದರ್ಶನ ನೀಡಿದ್ದಕ್ಕೆ!
ಭಾರತದಲ್ಲಿ ಬೀಬರ್ ಅವರ ಮೊದಲ ಸಂಗೀತ ಕಚೇರಿ 2017 ರಲ್ಲಿ ನಡೆಸಲಾಯಿತು. ಅವರು 2022 ರಲ್ಲಿ ಮತ್ತೊಮ್ಮೆ ಕಾರ್ಯಕ್ರಮ ನೀಡಬೇಕಿತ್ತು, ಆದರೆ ಗಾಯಕನ ಆರೋಗ್ಯ ಸರಿ ಇಲ್ಲದ ಕಾರಣ ಪ್ರವಾಸವನ್ನು ರದ್ದುಗೊಳಿಸಲಾಗಿತ್ತು.
ಮಗನ ಮದುವೆಯನ್ನು ಅದ್ದೂರಿಯಾಗಿ ಮಾಡುತ್ತಿರುವ ಮುಕೇಶ್ ಅಂಬಾನಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದಾರೆ. ಜಾಮ್ ನಗರದಲ್ಲಿ ನಡೆದಿದ್ದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಖ್ಯಾತ ಪಾಪ್ ತಾರೆ ರಿಹನ್ನಾ ಅವರನ್ನು ಕರೆಸಿ ಕುಣಿಸಿದ್ದು, ಇದಕ್ಕೆ ರಿಹನ್ನಾ 100 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರು ಎಂದು ವರದಿಯಾಗಿತ್ತು.
#justinbieber Justin Bieber #anantambani #radhikamerchant #AnantRadhikaWedding #sangeet #mukeshambani #nitaambani #JioWorldCentre #Reliance Reliance Digital pic.twitter.com/ApD3iQdChs
— Veer Arjun (@VeerArjunDainik) July 6, 2024
ಮದುವೆಯಲ್ಲಿ ಅನೇಕ ಗಣ್ಯರು ಭಾಗಿ
ಅನಂತ್ ಮತ್ತು ರಾಧಿಕಾ ಅವರ ಸಂಗೀತ ಸಮಾರಂಭದಲ್ಲಿ ಸಾಕಷ್ಟು ಸಿನಿಮಾ ಮತ್ತು ಕ್ರಿಕೆಟ್ ತಾರೆಯರು ಭಾಗವಹಿಸಿದ್ದರು. ಮುಂಬೈನ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ನಲ್ಲಿ ವಿವಾಹ ಸಮಾರಂಭ ನಡೆಯುತ್ತಿದ್ದು, ಸಲ್ಮಾನ್ ಖಾನ್‌ನಿಂದ ಮಾಧುರಿ ದೀಕ್ಷಿತ್, ಹಾರ್ದಿಕ್ ಪಾಂಡ್ಯದವರೆಗೆ ಹಲವಾರು ಸೆಲೆಬ್ರಿಟಿಗಳು ಭಾಗವಹಿಸಿದ್ದರು.
ಎಂಎಸ್ ಧೋನಿ, ಸಾಕ್ಷಿ ಧೋನಿ, ಸೂರ್ಯಕುಮಾರ್ ಯಾದವ್ ಮತ್ತು ಪತ್ನಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ರಣಬೀರ್ ಕಪೂರ್, ಆಲಿಯಾ ಭಟ್, ಇಶಾನ್ ಕಿಶಾನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಗಳು ಮತ್ತು ಕ್ರಿಕೆಟಿಗರು ಸಮಾರಂಭದಲ್ಲಿ ಭಾಗವಹಿಸಿದ್ದರು.












Click it and Unblock the Notifications