Supreme Court New Judge: ಸುಪ್ರೀಂ ಕೋರ್ಟ್‌ಗೆ ನೂತನ ಜಡ್ಜ್
Supreme Court judge: ಕೆ.ವಿನೋದರ್ ಚಂದ್ರನ್ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ಇಂದು (ಜನವರಿ 16) ಪ್ರಮಾಣವಚನ ಸ್ವೀಕರಿಸಿದರು. ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್ ನ ನೂತನ ನ್ಯಾಯಾಧೀಶರಿಗೆ ಪ್ರಮಾಣ ವಚನ ಬೋಧಿಸಿದರು.
ಜನವರಿ 7ರಂದು ಸುಪ್ರೀಂ ಕೋರ್ಟ್ ಕೊಲಿಜಿಯಂ ನ್ಯಾಯಮೂರ್ತಿ ವಿನೋದ್ ಚಂದ್ರ ಅವರನ್ನು ಸುಪ್ರಿಂ ಕೋರ್ಟ್ ನ್ಯಾಯಾಧೀಶ ಹುದ್ದೆಗೇರಲು ಶಿಫಾರಸ್ಸು ಮಾಡಿತ್ತು. ಜನವರಿ 14ರಂದು ಕೇಂದ್ರ ಸರ್ಕಾರ ಅವರ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು. ಅದರಂತೆಯೇ ಅವರು ಇಂದು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನವೆಂಬರ್ 8, 2011ರಂದು ಕೇರಳ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು, ಮಾರ್ಚ್ 23, 2023ರಂದು ಪಾಟ್ನಾದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಇನ್ನು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರ ಹೆಸರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಿಗೆ ಶಿಫಾರಸು ಮಾಡಲಾಯಿತು.
ವಿನೋದ್ ಚಂದ್ರನ್ ಸುಪ್ರೀಂ ಕೋರ್ಟ್‌ನಲ್ಲಿ ಏಪ್ರಿಲ್ 25, 2028ರ ವರೆಗೆ ನ್ಯಾಯಾಧೀಶರಾಗಿ ಮುಂದುವರೆಯಲಿದ್ದಾರೆ. ಸುಪ್ರೀಂ ಕೋರ್ಟ್ ಈಗ 33 ನ್ಯಾಯಾಧೀಶರನ್ನು ಹೊಂದಿದ್ದು, ಇದೀಗ ವಿನೋದ್ ಚಂದ್ರನ್ ಸೇರಿದಂತೆ ಈ ಸಂಖ್ಯೆ 34 ಆಗಿದೆ.












Click it and Unblock the Notifications