Aadhaar-PAN Link: ಆಧಾರ್- ಪ್ಯಾನ್ ಲಿಂಕ್‌ಗೆ ಜೂ.30 ಕೊನೆ ದಿನ, ಲಿಂಕ್ ಮಾಡುವ ವಿಧಾನ ತಿಳಿಯಿರಿ
ಬೆಂಗಳೂರು, ಮೇ 25: ಆಧಾರ ಕಾರ್ಡ್ ಜೊತೆಗೆ ಪ್ಯಾನ್ (PAN) ಲಿಂಕ್ ಮಾಡಲು ನೀಡಿರುವ ಗಡುವು ಅನ್ನು ಪದೇ ಪದೇ ವಿಸ್ತರಿಸಿದ್ದ ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಅಂತಿಮ ದಿನಾಂಕ ಘೋಷಿಸಿತ್ತು. ಹೀಗಿದ್ದರೂ ಇನ್ನು ಲಿಂಕ್ ಮಾಡಿಕೊಳ್ಳದವರಿಗಾಗಿಯೇ ಮುಂದಿನ ಮಾರ್ಚ್ 31ರವರೆಗೂ ಅವಕಾಶ ನೀಡಲಾಗಿದೆ. ಮೂಲಗಳ ಪ್ರಕಾರ ಇದೇ ಕೊನೆ ಬಾರಿಯ ವಿಸ್ತರಣೆ ಎಂದು ಹೇಳಲಾಗುತ್ತಿದೆ.
ಮಾರ್ಚ್ ಕೊನೆಯ ವಾರಕ್ಕೆ ಅಂತ್ಯಗೊಳ್ಳಬೇಕಿದ್ದ ಅವಧಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಪರ್ಮನೆಂಟ್ ಅಕೌಂಟ್ ನಂಬರ್ ಅಂದರೆ PAN ಕಾರ್ಡ್ ಇದು ಹಣಕಾಸು ವಿಚಾರದಲ್ಲಿ ಒಬ್ಬ ವ್ಯಕ್ತಿಗೆ ಅತ್ಯವಶ್ಯಕವಾಗಿದೆ. ಪ್ರಮುಖ ಗುರುತಿನ ಕಾರ್ಡ್ ಎಂದು ಸಹ ಪರಿಗಣಿಸಲಾಗಿದ. ಈ ಪ್ಯಾನ್ ನಂಬರ್ ಇಲ್ಲದೆ ಯಾವುದೇ ಹಣಕಾಸಿನ ಕೆಲಸವನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.

ಹೊಸದಾಗಿ ಇಲ್ಲವೇ ಈಗಾಗಲೇ ಬ್ಯಾಂಕಿನಲ್ಲಿ ಖಾತೆ ತೆರೆದವರಿಗೆ, ಹೂಡಿಕೆ ಮಾಡುವವರೆಗೆ, ಸಾಲ ಪಡೆಯುವವರಿಗೆ ಹೀಗೆ ಎಲ್ಲ ಕೆಲಸಗಳಿಗೂ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ. ಅಗತ್ಯದ ಸಮಯದಲ್ಲಿ PAN card ಇಲ್ಲದಿದ್ದರೆ ಹಣಕಾಸಿನ ಕೆಲಸಗಳಿಗೆ ಅಡ್ಡಿ ಉಂಟಾಗುವುದು ನಿಶ್ಚಿತ.
ನೀವು ಪ್ಯಾನ್ ಸಂಖ್ಯೆಗೆ ಮತ್ತು ಆಧಾರ್ ಸಂಖ್ಯೆ ಲಿಂಕ್ ಮಾಡದಿದ್ದರೆ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಆದಷ್ಟು ಬೇಗ ಹತ್ತಿರ ಇಂಟರ್‌ನೆಟ್ ಕೇಂದ್ರ (Cyber Center)ಗಳಿಗೆ ಭೇಟಿ. ಇಲ್ಲವೇ ನೀವೆ ಆನ್‌ಲೈನ್ ಮೂಲಕ ಪರಿಶೀಲಿಸಿ ಲಿಂಕ್ ಆಗಿರದಿದ್ದರೆ ಲಿಂಕ್ ಮಾಡಿಕೊಳ್ಳಲು ಮುಂದಿನ ಜೂನ್ ತಿಂಗಳ ಕೊನೆ ದಿನದವರೆಗೂ ಅವಕಾಶ ವಿಸ್ತರಿಸಲಾಗಿದೆ. ಒಂದು ವೇಳೆ ನೀವು ಲಿಂಕ್ ಮಾಡದಿದ್ದರೆ, ಭವಿಷ್ಯದಲ್ಲಿ ಲಿಂಕ್ ಮಾಡಿಕೊಳ್ಳಲು ಹೆಚ್ಚಿನ ಹಣ ಪಾವತಿಸಬೇಕಾಗಬಹುದು.

ಬೇರೆ ಕೆಲವು ವೆಬ್‌ಸೈಟ್‌ಗಳಲ್ಲಿ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡು ಪ್ರಕ್ರಿಯೆ ನಡೆಯುತ್ತಿದೆ. 1000 ಶುಲ್ಕದ ಜೊತೆಗೆ ಪ್ರೊಸೆಸಿಂಗ್ ಫೀ ಎಂದು 500 ರೂ. ಹೆಚ್ಚುವರಿ ಹಣ ವಸೂಲಿ ಸಂಗ್ರಹಿಸಲಾಗುತ್ತಿದೆ.
ಲಿಂಕ್ ಆಗಿದೆಯೇ? ಮೊಬೈಲ್ ಸಂದೇಶದಲ್ಲೇ ತಿಳಿಯಿರಿ
ಆಧಾರ್ ಮತ್ತು ಪಾನ್ ಲಿಂಕ್ ಆಗಿದೆಯೇ? ಎಂಬುದನ್ನು ನೀವು ನಿಮ್ಮ ಫೋನ್‌ನಿಂದ SMS ಕಳಿಸುವ ಮೂಲಕ ತಿಳಿಯಬಹುದು. 567678 ಅಥಥಾ 56161 ಸಂಖ್ಯೆಗೆ UIDPAN ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ಬಳಿಕ 12 ಡಿಜಿಟ್ ಆಧಾರ್ ಸಂಖ್ಯೆ ನಮೂದಿಸನಬೇಕು. ನಂತರ ಮತ್ತೊಂದು ಸ್ಪೇಸ್ ನೀಡಿ ಪ್ಯಾನ್ ಸಂಖ್ಯೆ ನಮೂದಿಸಿ ಸೆಂಡ್ ಮಾಡಿದರೆ ನಿಮ್ಮ ಮೊಬೈಲ್‌ಗೆ ಬರುವ ಸಂದೇಶದ ಮೂಲಕವೇ ತಿಳಿಯಬಹುದು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ https://www.incometax.gov.in/ ಭೇಟಿ ನೀಡಿ.
ಲಿಂಕ್ ಮಾಡುವುದು ಹೇಗೆ?
* ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ತೆರೆಯಿರಿ https://incometaxindiaefiling.gov.in/
* ಬಳಕೆದಾರ ಐಡಿ, ಪಾಸ್‌ವರ್ಡ್ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ಲಾಗ್ ಇನ್ ಆಗಿ.
* ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ನೀಡಿರುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮೆನು ಬಾರ್‌ನಲ್ಲಿ 'ಪ್ರೊಫೈಲ್ ಸೆಟ್ಟಿಂಗ್‌ಗಳು' ಗೆ ಹೋಗಿ ಮತ್ತು 'ಲಿಂಕ್ ಆಧಾರ್' ಕ್ಲಿಕ್ ಮಾಡಿ.
* PAN ವಿವರಗಳ ಪ್ರಕಾರ ಹೆಸರು, ಲಿಂಗ ಮತ್ತು ಹುಟ್ಟಿದ ದಿನಾಂಕದ ವಿವರ ಈಗಾಗಲೇ ನಮೂದಿಸಲಾಗಿದೆ.
* ನಿಮ್ಮ ಆಧಾರ್‌ನಲ್ಲಿ ನಮೂದಿಸಲಾದ ಪ್ಯಾನ್ ವಿವರಗಳನ್ನು ಪರದೆಯ ಮೇಲೆ ಪರಿಶೀಲಿಸಿ. ಸರಿ ಇಲ್ಲದಿದ್ದರೆ ನೀವು ಅಲ್ಲಿಯೇ ದಾಖಲೇ ಸರಿಪಡಿಸಿಕೊಳ್ಳಬಹುದು.
* ದಾಖಲೆ ಸರಿ ಇದ್ದು ಹೊಂದಾಣಿಕೆಯಾದರೆ ಆಧಾರ್ ಸಂಖ್ಯೆಯನ್ನು ನಮೂದಿಸಿ "ಈಗ ಲಿಂಕ್" ಬಟನ್ ಮೇಲೆ ಕ್ಲಿಕ್ ಮಾಡಿ.
* ನಂತರ ನಿಮ್ಮ ಪ್ಯಾನ್‌ಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂದು ಪಾಪ್-ಅಪ್ ಸಂದೇಶವು ನಿಮಗೆ ಕಾಣಸುತ್ತದೆ.












Click it and Unblock the Notifications