Breaking: ತೆಲಂಗಾಣದಲ್ಲಿ ಜೆಪಿ ನಡ್ಡಾ ಸಮಾಧಿ: ಟಿಆರ್‌ಎಸ್‌ಗೆ ಬಿಜೆಪಿ ಎಚ್ಚರಿಕೆ
ಹೈದರಾಬಾದ್ ಅಕ್ಟೋಬರ್ 20: ತೆಲಂಗಾಣದಲ್ಲಿ ಟಿಆರ್‌ಎಸ್-ಬಿಜೆಪಿ ಜಿದ್ದಾಜಿದ್ದಿ ಬಿರುಸುಗೊಂಡಿದೆ. ಟಿಆರ್‌ಎಸ್ ಕಾರ್ಯಕರ್ತರು ಮಲ್ಕಾಪುರದಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮಾಧಿ ನಿರ್ಮಾಣ ಮಾಡಿದ್ದು ರಾಜಕೀಯ ವಾಗ್ದಾಳಿಗಳನ್ನು ಚುರುಕುಗೊಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ಈ ಸಂಬಂಧ ಟಿಆರ್‌ಎಸ್ ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದೆ.
'ಇದು ಹೇಯ ಕೃತ್ಯ! ಟಿಆರ್‌ಎಸ್ ಕಾರ್ಯಕರ್ತರು ನಮ್ಮ ಗೌರವಾನ್ವಿತ ಅಧ್ಯಕ್ಷರ (ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ) ಸಮಾಧಿಯನ್ನು ಮಾಡಿದ್ದಾರೆ. ಇದು ಅಸಹ್ಯಕರವಾದ ಕೃತ್ಯ. ಎಲ್ಲರಿಗೂ ಬಿಜೆಪಿ ಬೆಳೆಯುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಆದರೆ ಬಿಜೆಪಿಯ 18 ಕೋಟಿ ಸದಸ್ಯರು ಟಿಆರ್‌ಎಸ್‌ಗೆ ಅದೇ ರೀತಿ ಮಾಡಲು ಪ್ರಾರಂಭಿಸಿದರೆ ಹೇಗಿರುತ್ತೆ ಅನ್ನೋದನ್ನು ಊಹಿಸಿ' ಎಂದು ಜುಬ್ಲಿ ಹಿಲ್ಸ್‌ನ ಮಾಜಿ ಶಾಸಕ ಮತ್ತು ದಿವಂಗತ ಜನಪ್ರಿಯ ನಾಯಕ ಪಿ ಜನಾರ್ದನ ರೆಡ್ಡಿ ಅವರ ಪುತ್ರ ಪಿ ವಿಷ್ಣುವರ್ಧನ್ ರೆಡ್ಡಿ ಅವರು ಎಚ್ಚರಿಕೆ ಕೊಟ್ಟಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಜನಗಾಂವ್‌ನಲ್ಲಿ ಪಾದಯಾತ್ರೆ ನಡೆಯುತ್ತಿದ್ದ ತೆಲಂಗಾಣದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಂಡಿ ಸಂಜಯ್ ಮತ್ತು ಬಿಜೆಪಿ ಕಾರ್ಯಕರ್ತರನ್ನು ಧರ್ಮದ ವಿರುದ್ಧ ಹೇಳಿಕೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ನಡ್ಡಾ, "ಬಂಡಿ ಸಂಜಯ್ ಅವರ ಬಂಧನವನ್ನು ಖಂಡಿಸಿ, ಮುಂಬರುವ ಚುನಾವಣೆಯಲ್ಲಿ ಟಿಆರ್‌ಎಸ್ ಸರ್ಕಾರ ನಿರ್ನಾನಮವಾಗಲಿದೆ," ಎಂದು ವಾಗ್ದಾಳಿ ಮಾಡಿದ್ದರು.
This is despicable!
— Vishnu Vardhan Reddy (@SVishnuReddy) October 20, 2022
TRS workers made a grave of our Hon'ble President which is beyond disgusting even going by @trspartyonline std.
Everyone knows @KTRTRS is frustrated with growing strata of @BJP4India but imagine if 18 crore members of BJP starts doing same to TRS!@blsanthosh pic.twitter.com/cdDP6x6nTA
ಮಾತ್ರವಲ್ಲದೆ ತೆಲಂಗಾಣದಲ್ಲಿ ಕೆಸಿಆರ್ ಅವರ ಭ್ರಷ್ಟಾಚಾರ ಮತ್ತು ಕುಟುಂಬ ಕೇಂದ್ರಿತ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಬಿಜೆಪಿಗೆ ಸಿಗುತ್ತಿರುವ ಬೆಂಬಲ ಕಂಡು ಟಿಆರ್ ಎಸ್ ಪಕ್ಷಕ್ಕೆ ಆತಂಕ ಮೂಡಿದೆ ಎಂದಿದ್ದರು.

ಇತ್ತೀಚೆಗೆ ಟಿಆರ್‌ಎಸ್‌ಗೆ ರಾಜೀನಾಮೆ ನೀಡಿದ ನಾಲ್ಕೇ ದಿನದಲ್ಲಿ ಬಿಜೆಪಿ ಸೇರಿದ ಮಾಜಿ ಸಂಸದ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ತೆಲಂಗಾಣದ ಮಾಜಿ ಸಂಸದ ನರಸಯ್ಯ ಗೌಡ ಹಾಗೂ ಕೆಲ ಟಿಆರ್‌ಎಸ್ ಮುಖಂಡರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.












Click it and Unblock the Notifications