Jowar-Millet Price Hike: ಅಭಿಯಾನ, ಸ್ಟಾರ್ಟ್‌ಅಪ್‌ಗಳಿಂದ 'ಸಿರಿಧಾನ್ಯ' ಬೆಲೆ ಗಮನಾರ್ಹ ಹೆಚ್ಚಳ, ಕಾರಣ
ಬೆಂಗಳೂರು, ಡಿಸೆಂಬರ್ 06: ವಿಶ್ವಸಂಸ್ಥೆ 2023 ವರ್ಷವನ್ನು 'ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ'ವೆಂದು ಘೋಷಣೆ ಮಾಡಿದೆ. ಇದರ ಬೆನ್ನಲ್ಲೆ ಬಹುರಾಷ್ಟ್ರೀಯ ಕಂಪನಿಗಳು ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿವೆ. ಹೀಗಾಗಿ ಈ ಬಾರಿ ರಾಗಿ, ಜೋಳ ಮತ್ತು ಕಂದು ಜೋಳ (ಬ್ರೌನ್ ಟಾಪ್)ದಂತಹ ವಿವಿಧ ರೀತಿಯ ರಾಗಿಗಳ (ಧಾನ್ಯಗಳ) ಬೆಲೆಗಳು ಏರಿಕೆ ಕಂಡಿವೆ. ದೇಹಕ್ಕೆ ಆರೋಗ್ಯ ಒದಗಿಸುವ ಈ ಸಿರಿಧಾನ್ಯಗಳ ಬೆಲೆ ಹೆಚ್ಚಳ, ಅದಕ್ಕೆ ಕಾರಣವೇನು? ಎಂಬೆಲ್ಲ ಅಂಶಗಳು ಇಲ್ಲಿವೆ.
ಕೇವಲ ಒಂದೇ ವರ್ಷದ ಅವಧಿಯಲ್ಲಿ ಶೇ. 40 ರಿಂದ 100 ರಷ್ಟು ರಷ್ಟು ಸಿರಿಧಾನ್ಯಗಳ ಬೆಲೆ ಗಮನಾರ್ಹವಾಗಿ ಏರಿಕೆ ಆಗಿವೆ. ಬೆಲೆಯಲ್ಲಿನ ಈ ಏರಿಕೆಗೆ ಅಂತಾರಾಷ್ಟ್ರೀಯ ವರ್ಷದ ಮಿಲ್ಲೆಟ್ಸ್ ಅಭಿಯಾನಗಳು ಮತ್ತು ಈ ಮಾರುಕಟ್ಟೆ ವಿಭಾಗಕ್ಕೆ ಬಹುರಾಷ್ಟ್ರೀಯ ಕಂಪನಿಗಳ ಪ್ರವೇಶವಾಗಿದ್ದೆ ಕಾರಣವೆಂದು ಹೇಳಲಾಗುತ್ತಿದೆ ಎಂದು 'ಟಿಇ' ವರದಿ ಮಾಡಿದೆ.

ಸಿರಿಧಾನ್ಯ ಕುರಿತ ಅಭಿಯಾನಗಳು ಹೆಚ್ಚಾಗುತ್ತಿವೆ. ಹೆಚ್ಚುತ್ತಿರುವ ಸ್ಟಾರ್ಟ್‌ಅಪ್‌ಗಳಿಂದಾಗಿ ಜೋಳ, ರಾಗಿ ಸೇರಿದಂತೆ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗಿ, ಬೆಲೆಯು ಹೆಚ್ಚಾಗುತ್ತಿದೆ. ಆದರೆ ಅನಿರೀಕ್ಷಿತ ಹವಾಮಾನ ಪರಿಸ್ಥಿತಿಗಳು ರಾಗಿ ಪೂರೈಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ವಿವಿಧ ರೂಪದಲ್ಲಿ ರಾಗಿ ಬಳಕೆ
ರಾಗಿಯನ್ನು ಪಾಸ್ತಾ, ನೂಡಲ್ಸ್ ಮತ್ತು ಬಿಸ್ಕತ್ತು ಇನ್ನಿತರ ತಿಂಡಿಗಳಂತಹ ಹೊಸ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ರಾಗಿಗೆ ಮತ್ತಷ್ಟು ಬೇಡಿಕೆ ಸೃಷ್ಟಿಯಾಗಿದೆ. ರಾಗಿಗಳು ಬೆಳಗಿನ ಉಪಾಹಾರ ಧಾನ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ರಾಗಿಯನ್ನು ಹಿಟ್ಟಿನ ರೂಪದಲ್ಲಿ ಸಾಂಪ್ರದಾಯಿಕ (ಮುದ್ದೆ, ದೋಸೆ, ರೊಟ್ಟಿ) ರೂಪಗಳಲ್ಲಿಯೂ ಬಳಕೆ ಮಾಡಲಾಗುತ್ತಿದೆ. ಇದರ ಆಧಾರದಲ್ಲಿ ಹೊಸ ಉದ್ಯಮಗಳು ಹುಟ್ಟಿಕೊಂಡಿವೆ.

ರಾಗಿ ಆಧಾರಿತ ಸ್ಟಾರ್ಟ್‌ಅಪ್‌ಗಳು, ತಮ್ಮ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂದುತ್ತಿವೆ. ದ್ವಿಗುಣ ಕಾರ್ಯಚರಣೆ ನಡೆಸುತ್ತಿದ್ದು, ಉತ್ಪಾದಣೆಯನ್ನು ಹೆಚ್ಚಿಸುತ್ತಿವೆ. ಈ ಕಾರಣದಿಂದಲೇ ಉತ್ತಮ ಗುಣಮಟ್ಟದ ರಾಗಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡುವ ಸವಾಲು ಇದೀಗ ಎದುರಾಗಿದೆ.
ಹವಾಮಾನ ಕಾರಣ: ಉತ್ಪಾದನೆ ಕುಂಠಿತ
ಬೆಲೆ ಹೆಚ್ಚಾಗಿದೆ. ಬೇಡಿಕೆಯು ಹೆಚ್ಚಾಗಿದೆ ಎಂದು ಅಗತ್ಯದಷ್ಟು ರಾಗಿ ಬೆಳೆದು ಪೂರೈಕೆ ಮಾಡಲು ಮನಸ್ಸು ಮಾಡಿದರೂ ಸಹಿತ ಅನಿಯಮಿತ ಹವಾಮಾನ ಪರಿಸ್ಥಿತಿ ನಿರೀಕ್ಷೆಗಳನ್ನು ಬುಡಮೇಲು ಆಗುತ್ತಿವೆ. ಗೋಧಿ ಮತ್ತು ಅಕ್ಕಿಯಂತಹ ಇತರ ಆಹಾರ ಧಾನ್ಯಗಳಿಗೆ ಹೋಲಿಸಿದರೆ ರಾಗಿಗಳ ಕಡಿಮೆ ಉತ್ಪಾದನೆ ಆಗುತ್ತಿವೆ.
ಇನ್ನೂ ಜೋಳ ಬೆಳೆ ಬೆಳೆಯುವ ರಾಜ್ಯಗಳಲ್ಲಿ ಪ್ರಮುಖವಾಗಿರುವ ಮಹಾರಾಷ್ಟ್ರ, ಕರ್ನಾಟಕ ಮತ್ತು ತೆಲಂಗಾಣದಲ್ಲಿ ಈ ಬಾರಿ ಬರಗಾಲ ಎದುರಾಗಿದೆ. ಆಂಧ್ರಪ್ರದೇಶ, ಕರ್ನಾಟಕ ಮತ್ತು ಕೇರಳದ ಕಂದು ಜೋಳ, ಮತ್ತು ಅತಿ ಮಳೆಯಿಂದಾಗಿ ರಾಗಿ ಉತ್ಪಾದನೆ ಇಳಿಕೆ ಆಗಿದೆ ಎಂದು ಉದ್ಯಮ ತಜ್ಞರು ಹೇಳುತ್ತಾರೆ.
ಜೋಳ ಬೆಲೆ ಶೇ.150ರಷ್ಟು ಏರಿಕೆ
ಉತ್ತಮ ಗುಣಮಟ್ಟದ ಜೋಳದ ಬೆಲೆ ಪ್ರಸ್ತುತದಲ್ಲಿ ಶೇಕಡಾ 150 ಮತ್ತು ರಾಗಿಯ ಬೆಲೆ ಶೇಕಡಾ 45 ರಷ್ಟು ಹೆಚ್ಚಾಗಿದೆ. ಇದರಿಂದ ಗ್ರಾಹಕರಿಗೆ ಆರ್ಥಿಕ ಹೊರೆ ಅನುಭವಿಸುವಂತಾಗಿದೆ.
ಸರ್ಕಾರಿ ಶಾಲೆಗಳಿಗೆ ರಾಗಿ ಆಧಾರಿತ ಆಹಾರ ಪದಾರ್ಥವನ್ನು ಸರಬರಾಜು ಮಾಡುವ ಹಾಗೂ ಇತರ ಬ್ರ್ಯಾಂಡ್‌ಗಳಿಗೆ ರಾಗಿ ಉತ್ಪನ್ನಗಳನ್ನು ತಯಾರಿಸುವ ಶ್ರೀಹರಿತ ಆಗ್ರೋ ಫುಡ್ ಪ್ರಾಡಕ್ಟ್ಸ್‌ನ ಸಿಇಒ ಅನ್ನಪೂರ್ಣ ಕಲ್ಲೂರಿ ಅವರು ರಾಗಿ ಬೆಲೆಯ ಅತ್ಯಧಿಕ ಏರಿಕೆಗೆ ಆತಂಕ ವ್ಯಕ್ತಪಡಿಸಿದ್ದಾರೆ. ರಾಗಿ ಬೆಲೆ ಶೇಕಡಾ 15-20ರಷ್ಟು ಮಾಸಿಕವಾಗಿ ಏರಿಕೆ ಕಾಣುತ್ತಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.












Click it and Unblock the Notifications