Jio: ಮೆಗಾ IPOಗೂ ಮುನ್ನ ಜಿಯೋ ಮಾಸ್ಟರ್ ಪ್ಲ್ಯಾನ್, ಮುಂದಿನ 5 ವರ್ಷಗಳಲ್ಲಿ 34 ಕೋಟಿ ಹೊಸ ಗ್ರಾಹಕರ ಗುರಿ!
ಮುಂಬೈ: ಭಾರತದಲ್ಲಿ 53.3 ಕೋಟಿ ಕನೆಕ್ಟಿವಿಟಿ ಗ್ರಾಹಕರನ್ನು ಹೊಂದಿರುವ ಜಿಯೋ ಕಂಪನಿಯು ಷೇರುಪೇಟೆಯ ಅತೀ ದೊಡ್ಡ ಐಪಿಒಗೂ ಹೋಗುವ ಮುನ್ನ ಜಿಯೋ ಪ್ಲಾಟ್‌ಫಾರ್ಮ್ಸ್ ತನ್ನ ಮುಂದಿನ ಹಂತದ ಬೆಳವಣಿಗೆಯ ಮಾರ್ಗನಕ್ಷೆ (ರೋಡ್‌ಮ್ಯಾಪ್) ಬಹಿರಂಗಪಡಿಸಿದೆ. ಈ ಮೂಲಕ ಭವಿಷ್ಯ ಬೆಳವಣಿಗೆ ಕುರಿತು ಒಂದಷ್ಟು ಮಾಹಿತಿ ಹಂಚಿಕೊಂಡಿದೆ.
ಶುಕ್ರವಾರ ಜಿಯೋ ಪ್ಲಾಟ್‌ಫಾರ್ಮ್ಸ್ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಅಂಬಾನಿ ಅವರು ಮುಂಬೈನಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮೊಬಿಲಿಟಿ, ಹೋಮ್ ಮತ್ತು ಎಂಟರ್‌ಪ್ರೈಸ್-ಇಂಟರ್‌ನ್ಯಾಷನಲ್ ಅನ್ನು ಕಂಪನಿಯ ಮೂರು ಪ್ರಮುಖ ಬೆಳವಣಿಗೆ (ಗ್ರೋತ್) ಇಂಜಿನ್‌ಗಳೆಂದು ಘೋಷಿಸಿದರು. ತಂತ್ರಜ್ಞಾನ, ಡಿಜಿಟಲ್ ಗೇಟ್‌ವೇ ಮತ್ತು ಬಲವಾದ ಮೂಲಸೌಕರ್ಯದ ಆಧಾರದ ಮೇಲೆ, ಹಣಕಾಸು ವರ್ಷ (FY)31ರ ವೇಳೆಗೆ ಭಾರತದ ಅಂದಾಜು 1.4 ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯಲ್ಲಿ ಕಂಪನಿಯು ದೊಡ್ಡ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

"ಗ್ರಾಹಕರೇ ನಮ್ಮ ವ್ಯವಹಾರದ ಅತ್ಯಂತ ಪ್ರಮುಖ ಅಂಶ'. ಪ್ರತಿ ಭಾರತೀಯನಿಗೂ ಮತ್ತು ಮನೆ ಮನೆಗೆ, ಉದ್ಯಮಕ್ಕೆ ಕೈಗೆಟುಕುವ ಡಿಜಿಟಲ್ ಸೇವೆ ನೀಡುವುದೇ ಜಿಯೋ ಗುರಿಯಾಗಿದೆ. ಜಿಯೋ ಪ್ರಸ್ತುತ ಸುಮಾರು 53.3 ಕೋಟಿ ಕನೆಕ್ಟಿವಿಟಿ ಗ್ರಾಹಕರನ್ನು ಹೊಂದಿದೆ. ಭಾರತದ ಶೇಕಡಾ 60 ಕ್ಕಿಂತ ಹೆಚ್ಚು ಡೇಟಾ ಟ್ರಾಫಿಕ್ ನಿರ್ವಹಿಸುತ್ತಿದೆ ಎಂದು ಅವರು ಸೇವೆ ಕುರಿತು ಅವರು ವಿವರಿಸಿದರು.
ಜಿಯೋ ಗ್ರಾಹಕರ ಸಂಖ್ಯೆ 3 ಪಟ್ಟು ಏರಿಕೆ
ಜಿಯೋ ತನ್ನ ಮೊಬಿಲಿಟಿ ವಿಭಾಗದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸುಮಾರು 34 ಕೋಟಿ ಹೊಸ 4G ಮತ್ತು 5G ಗ್ರಾಹಕರನ್ನು ಕಾಣಲಿದೆ. ಇದರಲ್ಲಿ ಸುಮಾರು 10 ಕೋಟಿ ಗ್ರಾಹಕರು ಮೊದಲ ಬಾರಿಗೆ ಮೊಬೈಲ್ ಸಂಪರ್ಕ ಪಡೆದುಕೊಳ್ಳುವವರಾಗಿದ್ದಾರೆ. ಅಂದಾಜು 24 ಕೋಟಿ ಗ್ರಾಹಕರು 2G ಯಿಂದ 4G ಮತ್ತು 5G ಗೆ ಅಪ್‌ಗ್ರೇಡ್ ಆಗಲಿದ್ದಾರೆ. ಹಣಕಾಸು ವರ್ಷ (FY)26 ರಲ್ಲಿ ಜಿಯೋದ ನಿವ್ವಳ ಸಕ್ರಿಯ ಮೊಬೈಲ್ ಗ್ರಾಹಕರ ಸಂಖ್ಯೆಯು ಎರಡನೇ ಸ್ಥಾನದಲ್ಲಿರುವ ಆಪರೇಟರ್‌ಗಿಂತ ಸುಮಾರು ಮೂರು ಪಟ್ಟು ವೇಗವಾಗಿ ಬೆಳವಣಿಗೆ ಕಂಡಿದೆ.
ಹೋಮ್ ಬ್ರಾಡ್‌ಬ್ಯಾಂಡ್ ಕಂಪನಿಯ ಭವಿಷ್ಯದ ಬೆಳೆವಣಿಯೆ ಇಂಜಿನ್ ಆಗಲಿದೆ. ಜಿಯೋ ಸದ್ಯ ಸುಮಾರು 2.86 ಕೋಟಿ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಗ್ರಾಹಕರನ್ನು ಹೊಂದಿದೆ. ಇದು ಮುಂದಿನ ದಿನಗಳಲ್ಲಿ 10 ಕೋಟಿ ಮನೆಗಳಿಗೆ ವಿಸ್ತರಿಸಲಿದೆ. ಪ್ರಸಕ್ತ 2026ರ ಹಣಕಾಸು ವರ್ಷದಲ್ಲಿ ದೇಶದಲ್ಲಿ ಸೇರ್ಪಡೆಗೊಂಡ ಒಟ್ಟು ಹೊಸ ಫಿಕ್ಸೆಡ್ ಬ್ರಾಡ್‌ಬ್ಯಾಂಡ್ ಸಂಪರ್ಕಗಳಲ್ಲಿ ಸುಮಾರು ಶೇಕಡಾ 67.5 ರಷ್ಟು ಪಾಲು ಜಿಯೋಗೆ ಸೇರಿದ್ದೆಂಬ ಹೆಮ್ಮೆ ಇದೆ. ಫೈಬರ್ ಮತ್ತು ವೈರ್‌ಲೆಸ್ ತಂತ್ರಜ್ಞಾನದ ಮೂಲಕ ದೇಶದ 19,000 ಪಿನ್ ಕೋಡ್‌ಗಳಿಗೆ ಜಿಯೋ ಸೇವೆ ವಿಸ್ತರಿಸುತ್ತಿದೆ ಎಂದು ಆಕಾಶ್ ಅವರು ವಿವರಿಸಿದರು.
65 ರಷ್ಟು ಬ್ಯಾಂಕ್‌ಗಳಿಗೆ ಜಿಯೋ ಸೇವೆ
ಎಂಟರ್‌ಪ್ರೈಸ್ ಡಿಜಿಟಲ್ ಸೇವೆಗಳ ಮಾರುಕಟ್ಟೆ ಸುಮಾರು ₹5.1 ಲಕ್ಷ ಕೋಟಿ ಅಂದರೆ 56.8 ಬಿಲಿಯನ್ ಡಾಲರ್‌ಗಳಷ್ಟಿದೆ. ದೇಶದ ಸುಮಾರು ಶೇಕಡಾ 65 ರಷ್ಟು ಬ್ಯಾಂಕ್ ಶಾಖೆಗಳು ಜಿಯೋ ನೆಟ್‌ವರ್ಕ್ ಸೇವೆ ಒದಗಿಸಲಾಗುತ್ತಿದೆ. ಎಂಡ್-ಟು-ಎಂಡ್ ತಂತ್ರಜ್ಞಾನ ಸ್ಟಾಕ್ ಆಯ್ದ ವಿದೇಶಿ ಮಾರುಕಟ್ಟೆಗಳಿಗೂ ವಿಸ್ತರಿಸಲು ಬಯಸಿದೆ.
ಕೇವಲ ಸಾಫ್ಟ್‌ವೇರ್ ಮಾರಾಟ ಮಾಡುವುದು ಮಾತ್ರವಲ್ಲದೆ, ಜಾಗತಿಕ ಟೆಲಿಕಾಂ ಕಂಪನಿಗಳೊಂದಿಗೆ ಮ್ಯಾನೇಜ್ಡ್ ಸರ್ವೀಸ್ ಪಾರ್ಟನರ್ ಆಗಿ ಕಾರ್ಯ ನಿರ್ವಹಿಸುವುದು ಕಂಪನಿಯ ಯೋಜನೆಯಾಗಿದೆ. ಇದರ ಮೂಲಕ ಭಾರತವು ತಂತ್ರಜ್ಞಾನ ಆಮದುದಾರನಿಂದ ತಂತ್ರಜ್ಞಾನ ರಫ್ತುದಾರನಾಗುವ ದಿಕ್ಕಿನಲ್ಲಿ ಮುನ್ನಡೆಯಬಹುದು ಎಂದರು.
ಜಿಯೋ ಕಂಪನಿಯು ದೀರ್ಘಕಾಲೀನ ದೃಷ್ಟಿಕೋನ, ಬೃಹತ್ ಪ್ರಮಾಣ, ಬಲವಾದ ಅನುಷ್ಠಾನ ಮತ್ತು ಆರ್ಥಿಕ ಶಿಸ್ತಿನಲ್ಲಿ ನಂಬಿಕೆ ಹೊಂದಿದೆ ಎಂದ ಇಶಾ ಅಂಬಾನಿ ಅವರು, ಜಿಯೋ ಆರಂಭ, ರಿಲಯನ್ಸ್‌ನ ವ್ಯಾಪಾರ ಸ್ಮರಿಸಿದರು. ಇನ್ನೂ ರಿಲಯನ್ಸ್ ಸಂಸ್ಥಾಪಕ ಧೀರೂಭಾಯ್ ಅಂಬಾನಿ ಅವರು ಉಪಸ್ಥಿತರಿದ್ದರು.


Click it and Unblock the Notifications
