Jharkhand Elections: ಜಾರ್ಖಂಡ್ 2ನೇ ಹಂತದ ಚುನಾವಣೆ: 2019ರಲ್ಲಿ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಜಾರ್ಖಂಡ್‌ನಲ್ಲಿ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಇಂದು ಮತದಾನ ಪೂರ್ಣಗೊಂಡಿದೆ. ಎರಡನೇ ಸುತ್ತಿನಲ್ಲಿ ರಾಜ್ಯದ 12 ಜಿಲ್ಲೆಗಳ 38 ವಿಧಾನಸಭಾ ಸ್ಥಾನಗಳಿಗೆ ಮತದಾನವಾಗಿದೆ. ಮಧ್ಯಾಹ್ನ 3ರವರೆಗಿನ ಅಂಕಿಅಂಶಗಳ ಪ್ರಕಾರ, 38 ಕ್ಷೇತ್ರಗಳಲ್ಲಿ 61.47 ರಷ್ಟು ಮತದಾನವಾಗಿದೆ. ಹಾಗಾದರೆ 2019ರಲ್ಲಿ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನವಾಗಿತ್ತು ಎಂದು ತಿಳಿಯೋಣ.
ಎರಡನೇ ಹಂತದ ಮತದಾನದೊಂದಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ 1211 ಅಭ್ಯರ್ಥಿಗಳ ಭವಿಷ್ಯ ಇವಿಎಂಗಳಲ್ಲಿ ಭದ್ರವಾಗಿದೆ. ಧನ್ಬಾದ್ ಮತ್ತು ಗಿರಿದಿಹ್ ಜಿಲ್ಲೆಗಳು ತಲಾ ಆರು ಸ್ಥಾನಗಳನ್ನು ಹೊಂದಿದ್ದು, ಹಜಾರಿಬಾಗ್ ಮತ್ತು ರಾಮಗಢ ಜಿಲ್ಲೆಗಳಲ್ಲಿ ತಲಾ ಒಂದು ಸ್ಥಾನಕ್ಕೆ ಮತದಾನ ಪೂರ್ಣಗೊಂಡಿದೆ. ಇದಕ್ಕೂ ಮುನ್ನ ನವೆಂಬರ್ 13 ರಂದು ಮೊದಲ ಹಂತದಲ್ಲಿ 43 ಸ್ಥಾನಗಳಿಗೆ ಮತದಾನವಾಗಿದ್ದು ಒಟ್ಟು ಶೆ.66.65ರಷ್ಟು ಜನರು ಮತದಾನ ಮಾಡಿದ್ದರು.

ಎರಡನೇ ಹಂತದಲ್ಲಿ ಸ್ಪರ್ಧಿಸಿದ ವಿಶೇಷ ಅಭ್ಯರ್ಥಿಗಳು ಯಾರು?
ಜಾರ್ಖಂಡ್ ಚುನಾವಣೆಯ ಎರಡನೇ ಹಂತದ ಜನಪ್ರಿಯ ಸ್ಥಾನಗಳಲ್ಲಿ ಬರ್ಹೆತ್, ಗಂಡೆ, ದುಮ್ಕಾ, ಜಮ್ತಾರಾ, ಧನ್ವರ್, ಸಿಲ್ಲಿ, ಮಹೇಶ್‌ಪುರ, ಝರಿಯಾ, ಜಮಾ ಮತ್ತು ಪೊದೈಯಾಹತ್ ಸೇರಿವೆ. ಎರಡನೇ ಸುತ್ತಿನಲ್ಲಿ ವಿಶೇಷ ಅಭ್ಯರ್ಥಿಗಳ ಕುರಿತು ಮಾತನಾಡುವುದಾದರೆ, ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಅವರ ಕುಟುಂಬ, ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ, ಎಜೆಎಸ್‌ಯು ಮುಖ್ಯಸ್ಥ ಸುದೇಶ್ ಮಹತೋ, ಮಾಜಿ ಉಪಮುಖ್ಯಮಂತ್ರಿ ಸ್ಟೀಫನ್ ಮರಾಂಡಿ, ಮಾಜಿ ಸಚಿವ ಲೂಯಿಸ್ ಮರಾಂಡಿ, ಮಾಜಿ ಡಿಎಸ್‌ಪಿ ನವನೀತ್ ಹೆಂಬ್ರಾಮ್ ಅವರಂತಹ ಅನೇಕ ದೊಡ್ಡ ಸ್ಪರ್ಧಿಗಳು ಇದರಲ್ಲಿದ್ದಾರೆ. ಝರಿಯಾದಲ್ಲಿರುವ ಪ್ರಸಿದ್ಧ ಸಿಂಗ್ ಮ್ಯಾನ್ಷನ್‌ನ ಇಬ್ಬರು ಸೊಸೆಯರ ರಾಜಕೀಯ ಭವಿಷ್ಯ ಕೂಡ ಎರಡನೇ ಸುತ್ತಿನಲ್ಲಿ ನಿರ್ಧಾರವಾಗಲಿದೆ.
ಯಾರು ಸ್ಪರ್ಧೆಯಲ್ಲಿದ್ದಾರೆ?
ಜಾರ್ಖಂಡ್‌ನಲ್ಲಿ ಪ್ರಮುಖ ಸ್ಪರ್ಧೆಯು ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮಹಾಮೈತ್ರಿಕೂಟ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ನಡುವೆ ನಡೆದಿದೆ. ಎರಡನೇ ಹಂತದಲ್ಲಿ ಒಟ್ಟು 38 ಸ್ಥಾನಗಳ ಪೈಕಿ ಜೆಎಂಎಂ 20 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 13 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಸಿಪಿಐ (ಎಂಎಲ್) ಒಟ್ಟು ನಾಲ್ಕು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಅದರಲ್ಲಿ ಒಂದು ಮಹಾಮೈತ್ರಿಕೂಟದ ಅಭ್ಯರ್ಥಿ ಇದ್ದಾರೆ. ಜೊತೆಗೆ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಎರಡನೇ ಹಂತದಲ್ಲಿ ಎರಡು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.
ಇನ್ನೂ ಎನ್‌ಡಿಎಯಲ್ಲಿ ಬಿಜೆಪಿ 38 ರಲ್ಲಿ 32 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಉಳಿದ ಆರು ಸ್ಥಾನಗಳಲ್ಲಿ ಸುದೇಶ್ ಮಹತೋ ಅವರ ಎಜೆಎಸ್‌ಯು ಸ್ಪರ್ಧಿಸುತ್ತಿದೆ. ಇದಲ್ಲದೇ ಇತರೆ ಸಣ್ಣ ಪಕ್ಷಗಳೂ ಸ್ಪರ್ಧೆಯನ್ನು ಕುತೂಹಲಕರವಾಗಿಸಲು ಪ್ರಯತ್ನಿಸಿವೆ. ಕಳೆದ 2019 ರಲ್ಲಿ ಶೇ. 66.94ರಷ್ಟು ಮತದಾನವಾಗಿದೆ.
2019 ರಲ್ಲಿ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಬಾಗ್ಮಾರಾ ಶೇ.63.9
ಬಾಗೋದರ್ ಶೇ.67.1
ಬಾರ್ಹೆಟ್ ಶೇ.70.9
ಬರ್ಮೊ ಶೇ.62.2
ಬೊಕಾರೊ ಶೇ.52.7
ಬೋರಿಯೊ ಶೇ.65.4
ಚಂದಂಕ್ಯಾರಿ ಶೇ.74.1
ದಿಯೋಘರ್ ಶೇ.63.7
ಧನ್ಬಾದ್ ಶೇ.54.3
ಧನ್ವಾರ್ ಶೇ. 62.5
ದುಮ್ಕಾ ಶೇ.67
ಡುಮ್ರಿ ಶೇ.71.2
ಗಿರಿದಿ ಶೇ.63.8
ಗೊಡ್ಡಾ ಶೇ67.6
ಗೋಮಿಯಾ ಶೇ.69..
ಜಾಮಾ ಶೇ.69.4
ಜಮ್ತಾರಾ ಶೇ.78.6
ಜಮುವಾ ಶೇ.59.3
ಜಾರ್ಮುಂಡಿ ಶೇ.73.5
ಝರಿಯಾ ಶೇ.54
ಖಿಜ್ರಿ ಶೇ.65.5
ಲಿಟ್ಟಿಪಾರಾ ಶೇ.71.5
ಮಧುಪುರ್ ಶೇ.74.4
ಮಹಾಗಮ ಶೇ.67.5
ಮಹೇಶಪುರ ಶೇ.77
ಮಾಂಡು ಶೇ.62.9
ನಿರ್ಸಾ ಶೇ.68.4
ಪಾಕುರ್ ಶೇ.77.7
ಪೊರೆಯಹತ್ ಶೇ.68.7
ರಾಜಮಹಲ್ ಶೇ. 71.3
ರಾಮಗಢ ಶೇ.73
ಶರತ್ ಶೇ.80.5
ಶಿಕಾರಿಪದ ಶೇ.74.2
ಸಿಲ್ಲಿ ಶೇ.79.3
ಸಿಂಡ್ರಿ ಶೇ.72.8
ತುಂಡಿ ಶೇ.69.8












Click it and Unblock the Notifications