Assembly Election Results 2024: ಜಾರ್ಖಂಡ್, ಮಹಾರಾಷ್ಟ್ರ ಫಲಿತಾಂಶ ಸಮಯ, ವೀಕ್ಷಿಸುವುದೇಗೆ? ಇಲ್ಲಿದೆ ಮಾಹಿತಿ
Assembly Election Results 2024: ಈಗಾಗಲೇ ನವೆಂಬರ್ 20ರಂದು ಜಾರ್ಖಂಡ್ ಹಾಗೂ ಮಹಾರಾಷ್ಟ್ರ ಎರಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಮಕ್ತಯವಾಗಿದೆ. ನವೆಂಬರ್ 23ರಂದು ಅಂದರೆ ನಾಳೆ ಫಲಿತಾಂಶ ಹೊರಬೀಳಲಿದೆ. ಹಾಗಾದರೆ ಫಲಿತಾಂಶ ವೀಕ್ಷಣೆ ಮಾಡುವುದೇಗೆ ಹಾಗೂ ಸಮಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬಹುತೇಕ ಚುನಾವಣೋತ್ರ ಸಮೀಕ್ಷೆಗಳ ಪ್ರಕಾರ, ಜಾರ್ಖಂಡ್ ಹಾಗೂ ಮಹಾರಾಷ್ಟ್ರ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ವಿಜಯಶಾಲಿಯಾಗಲಿವೆ ಎಂದು ತಿಳಿಸಿವೆ.ಇನ್ನು ಎರಡು ಚುನಾವಣಾ ಫಲಿತಾಂಶಗಳು ನವೆಂಬರ್ 23, ಶನಿವಾರ ಹೊರಬೀಳಲಿದೆ. ಜಾರ್ಖಂಡ್‌ನ 81 ಸ್ಥಾನಗಳಿಗೆ ಹಾಗೂ ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿದೆ.

ಜಾರ್ಖಂಡ್ 81 ಸ್ಥಾನಗಳಿ ಎರಡು ಹಂತದಲ್ಲಿ ಮತದಾನ ನಡೆದಿದೆ. ಮೊದಲ ಹಂತದಲ್ಲಿ 43 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 13ರಂದು, ಇನ್ನುಳಿದ 38 ಸ್ಥಾನಗಳಿಗೆ ನವೆಂಬರ್ 20ರಂದು ಮತದಾನ ನಡೆದಿತ್ತು. ಮಹಾರಾಷ್ಟ್ರದ 288 ವಿಧಾನಸಭಾ ಸ್ಥಾನಗಳಿಗೂ ಒಂದೇ ಹಂತದಲ್ಲಿ ನವೆಂಬರ್ 20ರಂದು ಮತದಾನ ನಡೆದಿದೆ.
ಸಮಯದ ವಿವರ: ಇನ್ನು ಜಾರ್ಖಂಡ್ ರಾಜ್ಯದಲ್ಲಿ ಆಡಳಿತಾರೂಢ ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ ಮತ್ತು ಎನ್‌ಡಿಎ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ನಾಳೆ ಫಲಿತಾಂಶ ಹೊರಬೀಳಲಿದೆ. ಅದೇ ದಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಪ್ರಕಟ ಆಗಲಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭ ಆಗಲಿದ್ದು, ಮಧ್ಯಾಹ್ನದ ವೇಳೆಗೆ ಜಾರ್ಖಂಡ್‌ನಲ್ಲಿ ಮುಂದಿನ ಸರ್ಕಾರ ಯಾರು ರಚಿಸಲಿದ್ದಾರೆ ಎಂಬುದು ಬಹುತೇಕ ಖಚಿತವಾಗಲಿದೆ.
ಜಾರ್ಖಂಡ್‌ನಲ್ಲಿ ಇಂಡಿಯಾ ಮೈತ್ರಿಕೂಟ ಮತ್ತು ಎನ್‌ಡಿಎ ಎರಡೂ ಅಬ್ಬರದ ಪ್ರಚಾರವನ್ನು ನಡೆಸಿವೆ. ಫಲಿತಾಂಶ ಪ್ರಕಟಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಜೇಶ್ ಠಾಕೂರ್ ಶುಕ್ರವಾರ (ನವೆಂಬರ್ 22) ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಜೆಎಂಎಂ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಬಿಜೆಪಿ ಗೆಲ್ಲುವ ಸ್ಥಾನಗಳ ಬಗ್ಗೆ ನನಗೆ ಖಚಿತವಿಲ್ಲ. ಮೊದಲು ಅವರು 65 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಅವರು 55 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಪ್ರತುಲ್ ಶಾ ಡಿಯೋ, ನಾಳೆ ಸಂಜೆ ಜಾರ್ಖಂಡ್‌ನಲ್ಲಿ ಎನ್‌ಡಿಎ ಬಹುಮತದ ಸರ್ಕಾರ ರಚನೆಯಾಗಲಿದೆ ಎಂದು ಹೇಳಿದ್ದಾರೆ.
ಭಾರತೀಯ ಚುನಾವಣಾ ಆಯೋಗದ ಪ್ರಕಾರ ನವೆಂಬರ್ 23ರ ಶನಿವಾರ ಬೆಳಿಗ್ಗೆ 8 ಗಂಟೆಗೆ ಮತಗಳ ಎಣಿಕೆ ಆರಂಭವಾಗಲಿದೆ. ಒನ್ ಇಂಡಿಯಾ ಕನ್ನಡ ವೆಬ್‌ಸೈಟ್‌ನಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶಗಳ ಲೈವ್ ಅಪ್ಡೇಟ್‌ಗಳನ್ನು ವೀಕ್ಷಣೆ ಮಾಡಬಹುದಾಗಿದೆ.
ಫಲಿತಾಂಶಗಳುನ್ನು ನೋಡುವುದೇಗೆ?: ಫಲಿತಾಂಶಗಳು ECI ವೆಬ್‌ಸೈಟ್‌ನಲ್ಲಿಯೂ ಲಭ್ಯವಿರುತ್ತವೆ (https://results.eci.gov.in). ಎರಡು ರಾಜ್ಯಗಳ ಕ್ಷೇತ್ರವಾರು ಮತ ಎಣಿಕೆ ಮತ್ತು ಫಲಿತಾಂಶಗಳ ಕುರಿತು ಇದರಲ್ಲಿ ವೀಕ್ಷಣೆ ಮಾಡಬಹುದಾಗಿದೆ.












Click it and Unblock the Notifications