Jharkhand Election 2024: ತೀವ್ರ ಕುತೂಹಲ ಕೆರಳಿಸಿದ ಮೊದಲ ಹಂತದ ಮತದಾನ
Jharkhand Assembly Election 2024: ಜಾರ್ಖಂಡ್‌ನಲ್ಲಿ ಇಂದು (ನವೆಂಬರ್ 13) ಮೊದಲ ಹಂತದಲ್ಲಿ ವಿಧಾನಸಭೆ ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 81ರಲ್ಲಿ 43 ಸ್ಥಾನಗಳಿಗೆ ಮತದಾನ ನಡೆಯಿತ್ತಿದ್ದು, ಈ ಬಾರಿ ಹೆಚ್ಚಾಗಿ ಯುವಕ-ಯುವತಿಯರೇ ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಜಾರ್ಖಂಡ್‌ನಲ್ಲಿ ಒಟ್ಟು 81 ವಿಧಾನಸಭಾ ಕ್ಷೇತ್ರಗಳ ಪೈಕಿ ಇಂದು ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಚಂಪೈ ಸೇರಿದಂತೆ 683 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ ಆಗಲಿದ್ದು, ಮಧ್ಯಾಹ್ನದ ವೇಳೆಗೆ ಶೇಕಡ 40ರಷ್ಟು ಮತದಾನ ಆಗಿದ್ದು, ಈ ಮೂಲಕ ಮತದಾನ ಬಿರುಸು ಪಡೆದಿದೆ.

ರಾಜ್ಯದ 15 ಜಿಲ್ಲೆಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಇನ್ನು ಇಲ್ಲಿನ ಪ್ರದೇಶಗಳಲ್ಲಿ ನಕ್ಸಲಿಸ್ಟ್‌ಗಳು ಇರುವ ಹಿನ್ನೆಲೆ ಯಾವುದೇ ತೊಂದರೆ ಆಗದಂತೆ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಬಿಗಿಭದ್ರತೆ ಆಯೋಜನೆ ಮಾಡಿದೆ. ಮೊದಲ ಹಂತದಲ್ಲಿ 1.37 ಲಕ್ಷ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವವರಾಗಿದ್ದಾರೆ.
ರಾಜ್ಯದಲ್ಲಿ ಬೆಳಗ್ಗೆಯಿಂದಲೂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆ ಕೇಂದ್ರಗಳಿಗೆ ಆಗಮಿಸಿ ತಮ್ಮ ಮತವನ್ನು ಚಲಾಯಿಸಿ ಗಮನ ಸೆಳೆದಿದ್ದಾರೆ. ಇದೇ ಮೊದಲ ಬಾರಿಗೆ ಮತದಾನದಲ್ಲಿ ಹೆಚ್ಚಿನ ಯುವಕ-ಯುವತಿಯರು ಉತ್ಸಾಹದಿಂದ ಗುರುತಿನ ಚೀಟಿ ಪ್ರದರ್ಶಸುತ್ತಾ ಮತಗಟ್ಟೆ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಮತವನ್ನು ಚಲಾಯಿಸುತ್ತಿದ್ದಾರೆ.
ಇನ್ನು ಜಾರ್ಖಂಡ್‌ನಲ್ಲಿ ಜೆಎಂಎಂ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರಲು ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿದೆ. ಮತ್ತೊಂದೆಡೆ ಬಿಜೆಪಿ ಈ ಬಾರಿಯಾದರೂ ಗೆಲುವು ಸಾಧಿಸುವ ಮೂಲಕ 2019ರ ಸೇಡನ್ನು ತೀರಿಸಿಕೊಳ್ಳಲೇಬೇಕೆನ್ನುವ ಹಠ ತೊಟ್ಟಿದೆ. ಇನ್ನು 2 ಹಂತದ ಮತದಾನ ನವೆಂಬರ್ 20ರಂದು ನಡೆಯಲಿದ್ದು, ನವೆಂಬರ್ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಮತದಾನ
* ಕಣದಲ್ಲಿರುವ ಅಭ್ಯರ್ಥಿಗಳು-683 ಅಭ್ಯರ್ಥಿಗಳು
* ಮತದಾರರ ಸಂಖ್ಯೆ - 1,37,10,717
* ಪುರುಷ ಮತದಾರರು - 68,73,455
* ಮಹಿಳಾ ಮತದಾರರು - 68,36,959
* ತೃತೀಯ ಲಿಂಗಿಗಳು - 303
ಜಾರ್ಖಂಡ್‌ನ ಒಟ್ಟು 81 ವಿಧಾನಸಭೆ ಸ್ಥಾನಗಳಿಗೆ ಮತದಾನ ನಡೆಯಲಿದೆ. ಇಂದು (ನವೆಂಬರ್ 13) 43 ಸ್ಥಾನಗಳಿಹೆ ಮತದಾನ ನಡೆಯುತ್ತಿದೆ. ಇನ್ನು ನವೆಂಬರ್ 20ರಂದು ಇನ್ನುಳಿದ ಸ್ಥಾನಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 23ರಂದು ಫಲಿತಾಂದ ಹೊರಬೀಳಲಿದೆ.












Click it and Unblock the Notifications