10,12ನೇ ತರಗತಿ ಟಾಪರ್‌ಗಳಿಗೆ ಜಾರ್ಖಂಡ್ ಶಿಕ್ಷಣ ಸಚಿವರ ಭರ್ಜರಿ ಉಡುಗೊರೆ

ರಾಂಚಿ, ಸೆಪ್ಟೆಂಬರ್ 23: 10 ಹಾಗೂ 12 ತರಗತಿ ಟಾಪರ್‌ಗಳಿಗೆ ಜಾರ್ಖಂಡ್ ಶಿಕ್ಷಣ ಸಚಿವ ಜಗರ್ನಾಥ್ ಮಹತೋ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ.

ಟಾಪರ್‌ಗಳಿಗೆ ಕಾರುಗಳನ್ನು ನೀಡಿ ಅವರಿಗೆ ಶುಭಾಶಯ ಕೋರಿದ್ದಾರೆ. ಫಲಿತಾಂಶ ಪ್ರಕಟವಾದ ದಿನ 10 ಹಾಗೂ 12ನೇ ತರಗತಿ ಟಾಪರ್‌ಗಳಿಗೆ ಕಾರು ನೀಡುವುದಾಗಿ ಘೋಷಿಸಿದ್ದರು. ಈಗ ಅದರಂತೆಯೇ ನಡೆದುಕೊಂಡಿದ್ದು, ಟಾಪರ್‌ಗಳಿಗೆ ಆಲ್ಟೋ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಕಾರ್ಯಕ್ರಮವನ್ನು ಜಾರ್ಖಂಡ್ ವಿಧಾನಸಭೆಯ ಕಟ್ಟಡದಲ್ಲಿ ನೆರವೇರಿಸಲಾಯಿತು. ಹಾಗೆಯೇ ಮುಂದಿನ ವರ್ಷದಿಂದ ಟಾಪರ್ಸ್‌ಗಳ ಶಿಕ್ಷಣದ ವೆಚ್ಚವನ್ನು ನಾನೇ ಭರಿಸುತ್ತೇನೆ, ಅವರ ವಿದ್ಯಾಭ್ಯಾಸಕ್ಕೆ ಯಾವುದೇ ತೊಡಕಾಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಸಚಿವ ಮಹತೋ ಅವರು ಕೂಡ ಈಗ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

Jharkhand Education Minister Gifts Cars To Class 10, 12 Board Toppers

ಅವರ ವಿಧಾನಸಭಾ ಕ್ಷೇತ್ರದಲ್ಲಿ ಟಾಪರ್‌ಗಳಿಗೆ ಪ್ರತಿವರ್ಷ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ.10 ನೇ ತರಗತಿ ಟಾಪರ್ ಮನೀಶ್ ಕುಮಾರ್, ದ್ವಿತೀಯ ಪಿಯುಸಿ ಟಾಪರ್ ಅಮಿತ್ ಕುಮಾರ್ ಅವರಿಗೆ ಕೀಯನ್ನು ಹಸ್ತಾಂತರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+