ಜಾರ್ಖಂಡ್: ಬುಡಕಟ್ಟು ಮಹಿಳೆಗೆ ಟಾಯ್ಲೆಟ್ ನೆಕ್ಕಲು ಒತ್ತಾಯಿಸಿದ ಬಿಜೆಪಿ ನಾಯಕಿ

ಜಾರ್ಖಂಡ್‌ನಲ್ಲಿ ಅಮಾನವಿಯ ಘಟನೆಯೊಂದು ನಡೆದಿದೆ. ಜಾರ್ಖಂಡ್‌ನ ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರು ತಮ್ಮ ಮನೆಯ ಕೆಲಸದಾಕೆಯ ನಾಲಿಗೆಯಿಂದ ಶೌಚಾಲಯವನ್ನು ಸ್ವಚ್ಛಗೊಳಿಸುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜೊತೆಗೆ ಅವರು ಕೆಲಸದಾಕೆಯನ್ನು ನಿಂದಿಸಿದ ಆರೋಪದ ಮೇಲೆ ಬಿಜೆಪಿ ಅಮಾನತುಗೊಳಿಸಿದೆ. ಮಾತ್ರವಲ್ಲದೆ ಸೀಮಾ ಪತ್ರಾ ಮೇಲೆ ಬುಡಕಟ್ಟು ಮಹಿಳೆಗೆ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆಕೆಯ ಮನೆಯಲ್ಲಿ ಸೇವಕಿಯಾಗಿ ಕೆಲಸ ಮಾಡುತ್ತಿದ್ದ ಸುನೀತಾ ಎಂದು ಗುರುತಿಸಲಾಗಿರುವ ಕೆಲಸದಾಕೆಗೆ ಚಿತ್ರಹಿಂಸೆ ನೀಡಿರುವುದಾಗಿ ಬೆಳಕಿಗೆ ಬಂದಿದೆ.

ಇದೀಗ ಅಮಾನತುಗೊಂಡಿರುವ ಬಿಜೆಪಿ ನಾಯಕಿ ಹಾಗೂ ಮಾಜಿ ಐಎಎಸ್ ಅಧಿಕಾರಿ ಮಹೇಶ್ವರ್ ಪಾತ್ರಾ ಅವರ ಪತ್ನಿ ಸೀಮಾ ಪಾತ್ರಾ ಅವರು ಕಳೆದ 8 ವರ್ಷಗಳಿಂದ ಸುನೀತಾ ಅವರಿಗೆ ಚಿತ್ರಹಿಂಸೆ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಬುಡಕಟ್ಟು ಮಹಿಳೆಯಾದ ಸುನೀತಾ ಅವರ ದೇಹದಾದ್ಯಂತ ಅನೇಕ ಗಾಯಗಳಾಗಿವೆ. ಸೀಮಾ ಪಾತ್ರಾ ತನ್ನನ್ನು ಬಿಸಿ ವಸ್ತುಗಳಿಂದ ಸುಡುತ್ತಿದ್ದರು ಎಂದು ಸುನೀತಾ ಆರೋಪಿಸಿದ್ದಾರೆ.

ಸೀಮಾ ಪತ್ರಾ ಅವರ ಮಗ ಆಯುಷ್ಮಾನ್ ಸೇವಕಿಯನ್ನು ರಕ್ಷಿಸಲು ಪ್ರಯತ್ನಿಸಿದರು. ಅವರು ತಮ್ಮ ಸ್ನೇಹಿತ ವಿವೇಕ್ ಬಾಸ್ಕೆಗೆ ಮನೆಯಲ್ಲಿ ನಡೆದ ಘಟನೆಗಳ ಬಗ್ಗೆ ತಿಳಿಸಿದ್ದಾರೆ. ಸುನೀತಾ ಕೊನೆಗೆ ವಿವೇಕ್‌ಗೆ ತನ್ನ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಕೊನೆಗೆ ವಿವೇಕ್ ಸಹಾಯದಿಂದ ಸುನೀತಾ ರಕ್ಷಿಸಲ್ಪಟ್ಟಿದ್ದಾಳೆ.

Jharkhand: BJP leader forced a tribal woman to lick the toilet

ಪೊಲೀಸರು ರಾಂಚಿಯ ಅರ್ಗೋಡ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಎಸ್‌ಸಿ-ಎಸ್‌ಟಿ ಕಾಯ್ದೆ, 1989 ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಇದರೊಂದಿಗೆ ಘಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಕಾಂಗ್ರೆಸ್ ಆಗ್ರಹಿಸಿದೆ. ಜಾರ್ಖಂಡ್‌ನಲ್ಲಿ ಸೀಮಾ ಪಾತ್ರಾ ತನ್ನ ಮನೆಗೆಲಸದಾಕೆಗೆ ಕಿರುಕುಳ ನೀಡಿದ ವರದಿಯನ್ನು ರಾಷ್ಟ್ರೀಯ ಮಹಿಳಾ ಆಯೋಗ ಗಮನಕ್ಕೆ ತೆಗೆದುಕೊಂಡಿದೆ. ರಾಷ್ಟ್ರೀಯ ಮಹಿಳಾ ಆಯೋಗ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿಯನ್ನು ಕೋರಿದೆ. ಜೊತೆಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದೆ.

ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಹೇಳಿಕೆಯಲ್ಲಿ, ಸಮಿತಿಯು ಜಾರ್ಖಂಡ್‌ನ ಡಿಜಿಪಿಗೆ ಪತ್ರ ಬರೆದಿದ್ದು, ಆರೋಪ ನಿಜವೆಂದು ಕಂಡುಬಂದಲ್ಲಿ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ. ಮಹಿಳಾ ಆಯೋಗ ಈ ವಿಷಯದಲ್ಲಿ ನ್ಯಾಯಯುತ ತನಿಖೆ ನಡೆಸಬೇಕು ಎಂದೂ ಪತ್ರ ಬರೆದಿದೆ ಎಂದು ರೇಖಾ ಶರ್ಮಾ ಹೇಳಿದರು.

ಮಹಿಳಾ ಆಯೋಗ ಸಂತ್ರಸ್ತರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಬೇಕು ಎಂದು ಕೋರಿದೆ ಮತ್ತು ಅವಳ ಸುರಕ್ಷತೆಯನ್ನೂ ಖಚಿತಪಡಿಸಿಕೊಳ್ಳುವಂತೆ ಮನವಿ ಮಾಡಿದೆ. ಈ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮವನ್ನು ಏಳು ದಿನಗಳಲ್ಲಿ ಆಯೋಗಕ್ಕೆ ತಿಳಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+