Jharkhand Assembly Election 2024: ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಇತಿಹಾಸ, ಅಂಕಿಅಂಶ, ಮಾಹಿತಿ
Jharkhand Election 2024 Phase-1 voting: ದೇಶದಾದ್ಯಂತ ಕುತೂಹಲ ಕೆರಳಿಸಿರುವ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಎಂಎಂ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ತೀವ್ರ ಹಣಾಹಣಿಯಲ್ಲಿ ತೊಡಗಿವೆ. ಜಾರ್ಖಂಡ್‌ನ 81 ವಿಧಾನಸಭಾ ಕ್ಷೇತ್ರಗಳ ಪೈಕಿ 43 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದೆ. 43 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳು ಪರಿಶಿಷ್ಟ ಪಂಗಡಗಳಿಗೆ ಹಾಗೂ 6 ಪರಿಶಿಷ್ಟ ಜಾತಿಗಳಿಗೆ ಮೀಸಲಾಗಿದೆ.
ಜಾರ್ಖಂಡ್ ಕಳೆದ ನಾಲ್ಕು ವಿಧಾನಸಭಾ ಚುನಾವಣೆಗಳು 2005, 2009, 2014 ಹಾಗೂ 2019 ರಲ್ಲಿ ನಡೆದಿದ್ದವು. 2005 ರಲ್ಲಿ ನಡೆದ ಚುನಾವಣೆಯಲ್ಲಿ ಶೇ 57.03 ಮತದಾನದ ನಡೆದಿತ್ತು. ಸರಿಸುಮಾರು 76 ಲಕ್ಷ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ.

2009 ರಲ್ಲಿ ಶೇ 56.96 ರಷ್ಟು ಮತದಾನವಾಗಿತ್ತು. ಈ ಚುನಾವಣೆಯಲ್ಲಿ 77 ಲಕ್ಷಕ್ಕೂ ಅರ್ಹ ಮತದಾರರು ಮತದಾನ ಮಾಡಿರಲಿಲ್ಲ. 2014 ರಲ್ಲಿ ಶೇ 66.42 ರಷ್ಟು ಮತದಾನವಾಗಿತ್ತು. ಸುಮಾರು 70,01,412 ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. 2019ರ ಚುನಾವಣೆಯಲ್ಲಿ ಶೇ 65.18 ರಷ್ಟು ದಾಖಲೆಯ ಮತದಾನವಾಗಿದ್ದು, 80,27,548 ಮತದಾರರು ಚುನಾವಣೆ ಪ್ರಕ್ರಿಯೆಯಿಂದ ಹೊರಗುಳಿದಿದ್ದರು.
ಜಾರ್ಖಂಡ್ ಚುನಾವಣೆಯ ಮೊದಲ ಹಂತ: 43 ವಿಧಾನಸಭಾ ಕ್ಷೇತ್ರಗಳ ಪಟ್ಟಿ
ಕೊಡರ್ಮ
ಬರ್ಕತಾ
ಬರ್ಹಿ
ಬರ್ಕಗಾಂವ್
ಹಜಾರಿಬಾಗ್
ಸಿಮಾರಿಯಾ
ಚಾತ್ರ
ಬಹರಗೋರಾ
ಘಟ್ಸಿಲಾ
ಪೊಟ್ಕಾ
ಜುಗ್ಸಲೈ
ಜಮ್ಶೆಡ್‌ಪುರ ಪೂರ್ವ
ಜಮ್ಶೆಡ್‌ಪುರ ಪಶ್ಚಿಮ
ಇಚಗಢ
ಸೆರೆಕೆಲ್ಲಾ
ಚೈಬಾಸಾ
ಮಜ್ಗಾಂವ್
ಜಗನಾಥಪುರ
ಮನೋಹರಪುರ
ಲತೇಹರ್
ಪಂಕಿ
ಡಾಲ್ಟೊಂಗಂಜ್
ಬಿಶ್ರಾಂಪುರ
ಛತ್ತರ್‌ಪುರ
ಹುಸೇನಾಬಾದ್
ಗರ್ವಾ
ಭಾವನಾಥಪುರ
ಚಕ್ರಧರಪುರ ಖಾರ್ಸಾವನ್
ತಮರ್
ತೋರ್ಪಾ
ಖುಂತಿ
ರಾಂಚಿ
ಹಟಿಯಾ
ಕಾಂಕೆ
ಮಂದರ್
ಸಿಸಾಯಿ
ಗುಮ್ಲಾ
ಬಿಶುನ್‌ಪುರ
ಸಿಮ್ಡೆಗಾ
ಕೊಲೆಬಿರಾ
ಲೋಹರ್ದಗಾ
ಮಾಣಿಕಾ
ಜಾರ್ಖಂಡ್‌ನಲ್ಲಿ ಎನ್‌ಡಿಎ ಹಾಗೂ ಇಂಡಿಯಾ ಮೈತ್ರಿಕೂಟವು ಸೆಣಸಾಟ ನಡೆಸಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟಗಳು ಈಗಾಗಲೇ ಭರ್ಜರಿ ಪ್ರಚಾರ ನಡೆಸಿದ್ದು ಮಾಜಿ ಮುಖ್ಯಮಂತ್ರಿ ಚಂಪೈ ಸೊರೆನ್ ಹಾಗೂ ಕಾಂಗ್ರೆಸ್ ನಾಯಕ ಅಜೋಯ್ ಕುಮಾರ್ ಅವರಂತಹ ಘಟಾನುಘಟಿ ನಾಯಕರು ಚುನಾವಣಾ ಕಣದಲ್ಲಿದ್ದಾರೆ.












Click it and Unblock the Notifications