ಜಾರ್ಖಂಡ್ ವಿಧಾನಸಭಾ ಚುನಾವಣೆ ಘೋಷಣೆ, ಡಿ. 23ಕ್ಕೆ ಫಲಿತಾಂಶ
ನವದೆಹಲಿ, ನವೆಂಬರ್ 01 : ಚುನಾವಣಾ ಆಯೋಗ ಜಾರ್ಖಂಡ್ ವಿಧಾನಸಭಾ ಚುನಾವಣೆಗೆ ದಿನಾಂಕಗಳನ್ನು ಘೋಷಣೆ ಮಾಡಿದೆ. ಹರ್ಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಬಳಿಕ ಮತ್ತೊಂದು ರಾಜ್ಯದಲ್ಲಿ ಚುನಾವಣೆ ಎದುರಾಗಿದೆ.
ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ ಜಾರ್ಖಂಡ್ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿದರು. ಜಾರ್ಖಂಡ್‌ನಲ್ಲಿ ಒಟ್ಟು 81 ವಿಧಾನಸಭಾ ಕ್ಷೇತ್ರಗಳಿವೆ.

ಜಾರ್ಖಂಡ್ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆದ್ದರಿಂದ, ಬಿಜೆಪಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 2ನೇ ಬಾರಿ ಗೆಲುವು ಸಾಧಿಸಿದ ಬಳಿಕ ನಡೆಯುತ್ತಿರುವ 3ನೇ ರಾಜ್ಯದ ವಿಧಾನಸಭಾ ಚುನಾವಣೆ ಇದಾಗಿದೆ.
"5 ಹಂತಗಳಲ್ಲಿ ಜಾರ್ಖಂಡ್ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಸೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ" ಎಂದು ಸುನಿಲ್ ಅರೋರಾ ಹೇಳಿದರು.
ಚುನಾವಣಾ ದಿನಾಂಕದ ವಿವರ
* ಮೊದಲ ಹಂತ : 13 ಕ್ಷೇತ್ರ, ನವೆಂಬರ್ 30 ಮತದಾನ
* 2 ನೇ ಹಂತ 20 ಕ್ಷೇತ್ರ, ಡಿಸೆಂಬರ್ 7
* 3 ನೇ ಹಂತ 17 ಕ್ಷೇತ್ರ, ಡಿಸೆಂಬರ್ 12
* 4 ನೇ ಹಂತ, 15 ಕ್ಷೇತ್ರ, ಡಿಸೆಂಬರ್ 16
* 5 ನೇ ಹಂತ, 16 ಕ್ಷೇತ್ರ, ಡಿಸೆಂಬರ್ 20
ಒಟ್ಟು 5 ಹಂತದಲ್ಲಿ ನಡೆಯುವ ಚುನಾವಣೆಗಾಗಿ 29, 464 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಕಳೆದ ವರ್ಷದ ಚುನಾವಣೆಗೆ ಹೋಲಿಕೆ ಮಾಡಿದರೆ ಶೇ 20ರಷ್ಟು ಮತಟ್ಟೆಗಳು ಹೆಚ್ಚಳವಾಗಿವೆ.












Click it and Unblock the Notifications