ಸಂಬಳವಿಲ್ಲದೆ ಅಮ್ಮನ ಒಡವೆ ಮಾರುವ ಸ್ಥಿತಿಗೆ ಬಂದ ಪೈಲಟ್‌ಗಳು
ನವದೆಹಲಿ, ಮಾರ್ಚ್ 22: ವೆಚ್ಚವನ್ನು ಭರಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜೆಟ್ ಏರ್‌ವೇಸ್ ಕಳೆದ ಮೂರು ತಿಂಗಳಿನಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ಇದರಿಂದ ಸಿಬ್ಬಂದಿ ಕೂಡ ಹಣವಿಲ್ಲದೆ ಕುಟುಂಬ ನಿರ್ವಹಣೆಗೆ ತೀರಾ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜೀವನ ಸಾಗಿಸಲು ಸೂಕ್ತ ವೇತನ ದೊರಕದೆ ಇರುವುದು ಪೈಲಟ್‌ಗಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಿದೆ. ಇದು ಒಟ್ಟಾರೆ ಇಡೀ ಸಂಸ್ಥೆಯ ಅಸ್ತಿತ್ವಕ್ಕೆ ಸಂಚಕಾರ ತರುವ ಸೂಚನೆಗಳು ದೊರೆತಿವೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ವಿಮಾನ ಹಾರಾಟ ಆರಂಭಿಸಲು ಕಾಕ್‌ಪಿಟ್ ಪ್ರವೇಶಿಸುವ ಮುನ್ನ ನಮ್ಮ ಎಲ್ಲ ಒತ್ತಡಗಳನ್ನು ಮರೆಯಲು ಪ್ರಯತ್ನಿಸುತ್ತೇವೆ. ಆದರೆ, ನಾವು ಕೇವಲ ಮನುಷ್ಯರು' ಎಂದು ಸಂಬಳವಿಲ್ಲದೆ ತೊಂದರೆಗೆ ಒಳಗಾಗಿರುವ ಜೆಟ್‌ಏರ್‌ವೇಸ್‌ನ ಹಿರಿಯ ಕಮಾಂಡರ್ ಒಬ್ಬರು ಹೇಳಿದ್ದಾರೆ.
'ನಾವು ಕೂಡ ಸಾಮಾನ್ಯ ಮನುಷ್ಯರೇ. ನಾವು ಎಷ್ಟೇ ಪ್ರಯತ್ನಿಸಿದರೂ ನಮ್ಮ ಮೇಲಿನ ಒತ್ತಡದ ಮಟ್ಟ ಹೆಚ್ಚುತ್ತಲೇ ಹೋಗುತ್ತಿದೆ. ನಮ್ಮ ಶಕ್ತಿ ಮಿರಿ ಪ್ರಯತ್ನಿಸುತ್ತಿದ್ದೇವೆ. ಆದರೆ, ಸಂಬಳವಿಲ್ಲದೆ ಇರುವುದರ ಒತ್ತಡ ನಮಗೆ ಬೇಕಿಲ್ಲ. ಅದನ್ನು ತಕ್ಷಣವೇ ತೊಲಗಿಸಬೇಕು' ಎಂದು ಕ್ಯಾಪ್ಟನ್ ಕರಣ್ ಚೋಪ್ರಾ ಹೇಳಿದ್ದಾರೆ.
{photo-feature}












Click it and Unblock the Notifications