ವಿವಾಹಕ್ಕೂ ಮೊದಲು ಮಿಟ್ಟಿ ಕೆಫೆಗೆ ಜೀತ್ ಅದಾನಿ, ದಿವಾ ಶಾ ಭೇಟಿ

ಉದ್ಯಮಿ ಗೌತಮ್ ಅದಾನಿ ಕಿರಿಯ ಪುತ್ರ ಜೀತ್ ಅದಾನಿ ಭಾವಿ ಪತ್ನಿ ದಿವಾ ಶಾ ಜೊತೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (ಸಿಎಸ್‌ಎಂಐಎ)ನಲ್ಲಿರುವ ಮಿಟ್ಟಿ ಕೆಫೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕೆಫೆ ಸಂಸ್ಥಾಪಕಿ ಅಲಿನಾ ಆಲಂ ಮತ್ತು ಅವರ ತಂಡಕ್ಕೆ ವಿವಾಹದ ಆಮಂತ್ರಣವನ್ನು ನೀಡಿದರು.

ಫೆಬ್ರವರಿ 7ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿವಾಹ ನಡೆಯಲಿದೆ. ಇದು ಕೇವಲ ಆಹ್ವಾನ ನೀಡುವ ಭೇಟಿ ಆಗಿರಲಿಲ್ಲ. ಜೀತ್ ಅದಾನಿ ಮತ್ತು ದಿವಾ ಶಾ ಮಿಟ್ಟಿ ಕೆಫೆ ನಡೆಸುವ, ವಿಕಲಾಂಗರನ್ನು ಸಶಕ್ತಗೊಳಿಸುವ ಸ್ಪೂರ್ತಿದಾಯಕ ಕಾರ್ಯಕ್ಕೆ ಮೆಚ್ಚುಗೆಯನ್ನು ಸೂಚಿಸಿದರು.

ಜೀತ್ ಅದಾನಿ ಮತ್ತು ದಿವಾ ಶಾ ತಮ್ಮ ಅಮೂಲ್ಯವಾದ ಸಮಯವನ್ನು ಕೆಫೆಯ ಸಿಬ್ಬಂದಿಗಳ ಜೊತೆ ಕಳೆದರು. ಅವರ ಜೊತೆ ಮಾತುಕತೆ ನಡೆಸಿದರು, ಕೇಕ್‌ ಕಟ್ ಮಾಡಿದರು. ಈ ಸಂತೋಷದ ಸಮಯದಲ್ಲಿ ಮಿಟ್ಟಿ ಕೆಫೆಯ ಸಿಬ್ಬಂದಿಗಳು ಒಬ್ಬರಿಗೂ ಹೂಗುಚ್ಛಗಳು, ಚೆಂದದ ಉಡುಗೊರೆಗಳನ್ನು ನೀಡಿದರು.

Jeet Adani Diva Shah Visit Mitti Cafe Mumbai Heartwarming Gesture Ahead Of Wedding

ಭಾರತದಾದ್ಯಂತ ಶಾಖೆಗಳನ್ನು ಹೊಂದಿರುವ ಮಿಟ್ಟಿ ಕೆಫೆಯ ಒಂದು ವಿಭಿನ್ನ ಮಾದರಿಯ ಉದ್ಯಮ. ಇದು ವಿಕಲಾಂಗರನ್ನು ಸಶಕ್ತಗೊಳಿಸುವ ಪ್ರಮುಖ ಗುರಿಯನ್ನು ಹೊಂದಿದೆ. ಅದರಲ್ಲೂ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗದ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. ವಿಕಾಲಾಂಗರನ್ನು ಸಶಕ್ತಗೊಳಿಸುವ ಜೀತ್ ಅದಾನಿ ಯೋಚನಾ ಲಹರಿಗೂ ಇದು ಹೊಂದಿಕೆಯಾಗುತ್ತಿದ್ದು, ಒಪ್ಪಂದವೂ ಆಗಿದೆ.

ಮಿಟ್ಟಿ ಕೆಫೆ ಮತ್ತು ಅದಾನಿ ವಿಮಾನ ನಿಲ್ದಾಣದ ನಿರ್ದೇಶಕ ಜೀತ್ ಅದಾನಿ ನಡುವಿನ ಪಾಲುದಾರಿಕೆ ಬಹಳ ಹಿಂದಿನದು. ಕೆಫೆಗೆ ಭೇಟಿ ನೀಡಿದಾಗ ಅವರು ವಿಕಲಾಂಗರನ್ನು ಸಶಕ್ತಗೊಳಿಸುವ ಕಾರ್ಯವನ್ನು ಶ್ಲಾಘಿಸಿದರು. ಅವರು ಸಹ ಸಶಕ್ತರಾಗಿ, ಗೌರವದಿಂದ ಜೀವನ ಕಟ್ಟಿಕೊಳ್ಳಬೇಕು ಎಂಬ ನಿಲುವನ್ನು ಜೀತ್ ಅದಾನಿ ಕೆಫೆಯ ತಂಡದ ಜೊತೆ ಹಂಚಿಕೊಂಡರು, ಮುಂದಿನ ದಿನಗಳಲ್ಲಿ ಸಂಸ್ಥೆಯ ಕಾರ್ಯಗಳಿಗೆ ತಮ್ಮ ಬೆಂಬಲವನ್ನು ಸಹ ಸೂಚಿಸಿದರು.

ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ ಬಳಿಕ ಜೀತ್ ಅದಾನಿ ಭಾವಿ ಪತ್ನಿ ದಿವಾ ಶಾ ಜೊತೆ ಮಿಟ್ಟಿ ಕೆಫೆಯ ಭೇಟಿ ನೀಡಿದರು. ಮಹಾಕುಂಭ ಮೇಳದಲ್ಲಿ ಮಾತನಾಡಿದ್ದ ಗೌತಮ್ ಅದಾನಿ ವಿವಾಹ ಸಮಾರಂಭ ಸರಳವಾಗಿ ನಡೆಯಲಿದೆ ಎಂದು ಹೇಳಿದ್ದರು. ಕಾರ್ಯಕ್ರಮ ವಿಶೇಷವಾಗಿದ್ದೂ ಸಹ ತಾವು ನಂಬಿದ ಜೀವನದ ದೃಷ್ಟಿಕೋನದಂತೆ ಸರಳವಾಗಿ ಅದನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದರು.

ಮಿಟ್ಟಿ ಕೆಫೆಗೆ ಜೀತ್ ಅದಾನಿ, ದಿವಾ ಶಾ ಭೇಟಿ ಸಾಮಾಜಿಕ ಸಮಸ್ಯೆಗಳಿಗೆ ಅವರು ಹೇಗೆ ಸ್ಪಂದಿಸುತ್ತಾರೆ, ಆ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎಂಬ ಅವರ ನಿಲುವನ್ನು ಪ್ರತಿಬಿಂಬಿಸುತ್ತಿದೆ. ಇದು ಕೇವಲ ವಿವಾಹ ಪೂರ್ವ ಸಂತಸದ ಸಂಭ್ರಮವಲ್ಲ ಸಮಾಜವನ್ನು ತಮ್ಮ ಜೊತೆ ಕರೆದುಕೊಂಡು ಹೋಗುವ ಅದಾನಿ ಕುಟುಂಬದ ಮೌಲ್ಯವನ್ನು ತೋರಿಸುತ್ತದೆ.

2023ರ ಮಾರ್ಚ್‌ನಲ್ಲಿ ಜೀತ್ ಅದಾನಿ, ದಿವಾ ಶಾ ನಿಶ್ಚಿತಾರ್ಥ ನಡೆದಿತ್ತು. ಫೆಬ್ರವರಿ 7ರಂದು ಗುಜರಾತ್‌ನಲ್ಲಿ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ವಿವಾಹ ನಡೆಯಲಿದೆ. ದಿವಾ ಶಾ ಸೂರತ್ ಮೂಲದ ವಜ್ರ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+