ಜೆಇಇ ಮೇನ್ಸ್ 2021ರ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ: ಇಂದಿನಿಂದಲೇ ರಿಜಿಸ್ಟ್ರೇಷನ್ ಆರಂಭ
ನವದೆಹಲಿ, ಡಿಸೆಂಬರ್ 15: ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶಾತಿ ನಡೆಸುವ ಜಾಯಿಂಟ್ ಎಂಟ್ರ್ಯಾನ್ಸ್ ಎಕ್ಸಾಮಿನೇಷನ್ (JEE) ಪರೀಕ್ಷೆಯು ನಾಲ್ಕು ಬಾರಿ ನಡೆಯಲಿದ್ದು ಇಂದಿನಿಂದ ರಿಜಿಸ್ಟ್ರೇಷನ್ ಪ್ರಾರಂಭವಾಗಿದೆ ಮತ್ತು ಅರ್ಜಿ ಭರ್ತಿ ಮಾಡಲು ಕೊನೆಯ ದಿನಾಂಕ ಜನವರಿ 15,2021 ಆಗಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಬಹುನಿರೀಕ್ಷಿತ ಪರೀಕ್ಷೆ ಜೆಇಇ ಮೇನ್ 2021 ವೇಳಾಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಯಾವ ಪರೀಕ್ಷೆ ಎಂದು ನಡೆಯಲಿದೆ ಎಂಬ ಮಾಹಿತಿ ಈ ಕೆಳಗಿದೆ.

ನಾಲ್ಕು ಬಾರಿ ನಡೆಯಲಿದೆ ಜೆಇಇ ಪರೀಕ್ಷೆ
ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡ ಕಡಿಮೆಗೊಳಿಸಲು ಜೆಇಇ ಮೇನ್ ಪರೀಕ್ಷೆಗೆ ಒಂದರಿಂದ ನಾಲ್ಕು ಬಾರಿವರೆಗೆ ಪರೀಕ್ಷೆಗೆ ಹಾಜರಾಗುವ ಅವಕಾಶ ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ, ಜೆಇಇ ಮೇನ್ಸ್ ಫೆಬ್ರವರಿ, ಮಾರ್ಚ್, ಏಪ್ರಿಲ್ ಮತ್ತು ಮೇ ಎಂದು ನಾಲ್ಕು ಬಾರಿ ನಡೆಸಲಾಗುತ್ತದೆ. ನೋಂದಾಯಿಸಲು ಸಿದ್ಧರಿರುವ ಎಲ್ಲ ಅಭ್ಯರ್ಥಿಗಳು ಜೆಇಇ ಮೇನ್ಸ್ 2021 ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವೆಬ್‌ಸೈಟ್- jeemain.nta.nic.in ಮೂಲಕ ಅರ್ಜಿ ಸಲ್ಲಿಸಬಹುದು.

JEE ಮೇನ್ಸ್ 2021ರ ವೇಳಾಪಟ್ಟಿ
ಆನ್‌ಲೈನ್ ರಿಜಿಸ್ಟ್ರೇಷನ್ ಆರಂಭ ಡಿಸೆಂಬರ್ 15, 2021
ಆನ್‌ಲೈನ್ ರಿಜಿಸ್ಟ್ರೇಷನ್ ಕೊನೆಯ ದಿನಾಂಕ ಜನವರಿ 15, 2021
ಅಪ್ಲಿಕೇಶನ್ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಜನವರಿ 16, 2021
ಅಪ್ಲಿಕೇಶನ್ ಮಾಹಿತಿ ತಿದ್ದುಪಡಿ ಮಾಡಲು ಇರುವ ಅವಕಾಶ ಜನವರಿ 18-21 ವರೆಗೆ
ಎನ್‌ಟಿಎ ಇಂದ ಪ್ರವೇಶ ಪತ್ರ ಬಿಡುಗಡೆ ದಿನಾಂಕ ಫೆಬ್ರವರಿ ಮೊದಲ ವಾರ
ಮೊದಲ ಸೆಷನ್ ಪರೀಕ್ಷೆ ದಿನಾಂಕ ಫೆಬ್ರವರಿ 23-26ರವರೆಗೆ
ಫಲಿತಾಂಶ ಬಿಡುಗಡೆ ದಿನಾಂಕ ತಿಳಿಸಲಾಗಿಲ್ಲ
ಗಮನಿಸಿ: ಪರೀಕ್ಷೆಯು 13 ಭಾಷೆಗಳಲ್ಲಿ ನಡೆಯಲಿದ್ದು, ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದಾಗ ತಮ್ಮ ಆಯ್ಕೆಯ ಭಾಷೆಯನ್ನು ಆರಿಸಿಕೊಳ್ಳಬಹುದು. ಅವರು ಅದನ್ನು ನಂತರ ಬದಲಾಯಿಸಲು ಸಾಧ್ಯವಿಲ್ಲ.

JEE ಮೇನ್ಸ್ ಬರೆಯಲು ಅರ್ಹತೆ
ಜೆಇಇ ಮೇನ್ಸ್ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. 2019, 2020 ರಲ್ಲಿ 12 ನೇ ತರಗತಿ ಅಥವಾ ಅದಕ್ಕೆ ಸಮನಾದ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಥವಾ 2021ರಲ್ಲಿ ಹಾಜರಾಗುವ ಅಭ್ಯರ್ಥಿಗಳು ಜಿಇಇ ಮೇನ್ಸ್ 2021ಕ್ಕೆ ಅರ್ಹರಾಗಿರುತ್ತಾರೆ.
ಆದಾಗ್ಯೂ, 2018 ರಲ್ಲಿ ಅಥವಾ ಅದಕ್ಕೂ ಮೊದಲು 12 ನೇ ತರಗತಿ ಅಥವಾ ಸಮನಾದ ಪರೀಕ್ಷೆಯಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳು ಹಾಗೆಯೇ 2022 ಅಥವಾ ನಂತರದ ಪರೀಕ್ಷೆಯಲ್ಲಿ ಹಾಜರಾಗುವ ವಿದ್ಯಾರ್ಥಿಗಳು ಜೆಇಇ ಮೇನ್ಸ್) 2021ರ ಪರೀಕ್ಷೆಗೆ ಹಾಜರಾಗಲು ಅರ್ಹರಲ್ಲ.

JEE ಪರೀಕ್ಷಾ ವಿಧಾನ
ಜೆಇಇ ಮುಖ್ಯ ಪರೀಕ್ಷೆಗೆ (2021) ಹಿಂದಿನ ವರ್ಷದ ಪಠ್ಯಕ್ರಮವೇ ಇರಲಿದೆ. ಕಳೆದ ವರ್ಷದಂತೆಯೇ ಎನ್‌ಟಿಎ ನಡೆಸುವ ಜೆಇಇ ಮೇನ್ ಪರೀಕ್ಷೆಗಳ ಪೈಕಿ, ಬೆಸ್ಟ್ ಅಂಕಗಳನ್ನು ರ್ಯಾಂಕ್‌ಗೆ ಪರಿಗಣಿಸಲಾಗುತ್ತದೆ.
ವಿದ್ಯಾರ್ಥಿಗಳು 75 ಪ್ರಶ್ನೆಗಳಿಗೆ ಉತ್ತರ ನೀಡಬೇಕಿದ್ದು, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳಲ್ಲಿ ಪ್ರತಿ ವಿಷಯದಿಂದ 30 ಪ್ರಶ್ನೆಗಳು ಇರಲಿದ್ದು, 25 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಮೂರು ವಿಷಯಗಳಿಂದ ಒಟ್ಟು 90 ಪ್ರಶ್ನೆಗಳು ಇರಲಿವೆ.












Click it and Unblock the Notifications