6ನೇ ಬಾರಿ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ

ಪಾಟ್ನಾ, ಜುಲೈ 27: ನಿನ್ನೆ ಡಿವೋರ್ಸ್, ಇವತ್ತು ಮದುವೆ! ಇದು ಬಿಹಾರದ ರಾಜಕೀಯದ ಚಿತ್ರ! ಹೌದು, ನಿನ್ನೆ ತಾನೇ (ಜುಲೈ 26) ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ಇಂದು (ಜುಲೈ 27) ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಬಿಹಾರದ ರಾಜಧಾನಿ ಪಾಟ್ನಾದ ರಾಜಭವನದಲ್ಲಿ ಬಿಹಾರ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿ ಅವರು, ನಿತೀಶ್ ಕುಮಾರ್ ಅವರಿಗೆ ಪ್ರಮಾಣ ವಚನ ಬೊಧಿಸಿದರು. ಬಿಹಾರದ ಉಪಮುಖ್ಯಮಂತ್ರಿಯಾಗಿ ಸುಶೀಲ್ ಕುಮಾರ್ ಮೋದಿ ಸಹ ಪ್ರಮಾಣವಚನ ಸ್ವೀಕರಿಸಿದರು.

JDU's Nitish Kumar takes oath as Bihar CM, BJP's Sushil Modi is DCM

ಈ ಮೂಲಕ ಜೆಡಿಯು-ಆರ್ ಜೆಡಿ ಮಹಾಮೈತ್ರಿಕೂಟ ಮುರಿದುಬಿದ್ದಿದ್ದು, ಬಿಜೆಪಿ-ಜೆಡಿಯು ಮತ್ತೊಮ್ಮೆ ಒಂದಾಗಿ ಬಿಹಾರವನ್ನು ಮುನ್ನಡೆಸಲಿದೆ. 132(243) ಶಾಸಕರ ಬಲವನ್ನು ಹೊಂದಿರುವ ನಿತೀಶ್ ಕುಮಾರ್ ಬಹುಮತ ಪಡೆದಿರುವುದರಿಂದ ಈ ಸರ್ಕಾರವನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ.

ಬಿಹಾರ ರಾಜಕೀಯದಲ್ಲಿ ನಿನ್ನೆ ನಡೆದ ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಮಗ, ಬಿಹಾರದ ಉಪಮುಖ್ಯಮಂತ್ರಿಯಾಗಿದ್ದ ತೇಜಸ್ವಿ ಯಾದವ್ ಅವರ ವರ್ತನೆಗೆ ಬೇಸತ್ತು ನಿತೀಶ್ ರಾಜೀನಾಮೆ ನೀಡಿದ್ದರು. ಅವರ ಕ್ರಮವನ್ನು ಸ್ವಾಗತಿಸಿದ್ದ ಬಿಜೆಪಿ, ಜೆಡಿಯು ಗೆ ಬೆಂಬಲ ನೀಡುವುದಾಗಿ ಹೇಳಿತ್ತು. ಬಿಜೆಪಿ ಬೆಂಬಲದೊಂದಿಗೆ ಇದೀಗ ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+