ಜಯಲಲಿತಾ ಚೆಕ್ ಮೂಲಕ ನಡೆಸಿದ ಹಣ ವರ್ಗಾವಣೆ ಅಕ್ರಮ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮೇ 05 : ಜಯಲಲಿತಾ ಮತ್ತು ಇತರ ಆರೋಪಿಗಳು ಚೆಕ್ ಮೂಲಕ ನಡೆಸಿದ ಹಣ ವರ್ಗಾವಣೆ ಅಕ್ರಮವಾದದ್ದು ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ಗೆ ಹೇಳಿಕೆ ನೀಡಿದೆ. ಪ್ರಕರಣದ ವಿಚಾರಣೆಯನ್ನು ಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ.

ವಿಶೇಷ ಸರ್ಕಾರಿ ಅಭಿಯೋಜಕ ಬಿ.ವಿ.ಆಚಾರ್ಯ ಅವರು ಸುಪ್ರೀಂಕೋರ್ಟ್‌ಗೆ ಇಂದು ಲಿಖಿತ ದಾಖಲೆಗಳನ್ನು ಸಲ್ಲಿಸಿದ್ದು, ಹಣ ವರ್ಗಾವಣೆ ಅಕ್ರಮವಾದದ್ದು ಎಂದು ಹೇಳಿದರು. ಅಕ್ರಮ ಹಣವನ್ನು ಸಕ್ರಮವಾದದ್ದು ಎಂದು ತೋರಿಸಲು ಕಂಪನಿಗಳನ್ನು ಶಶಿಕಲಾ ನಟರಾಜನ್ ಹೆಸರಿಗೆ ವರ್ಗಾವಣೆ ಮಾಡಲಾಗಿದೆ ಎಂದು ವಾದ ಮಂಡಿಸಿದರು. [ಶಶಿಕಲಾಗೆ ಹಣ ಕೊಟ್ಟು ಸಾಲ ರೂಪದಲ್ಲಿ ವಾಪಸ್ ಪಡೆದಿದ್ದ ಜಯಾ!]

jayalalithaa

ಚೆಕ್ ಮೂಲಕ ನಡೆಸಿರುವ ಹಣದ ವರ್ಗಾವಣೆ ಅಕ್ರಮ ಎಂದು ವಿಶೇಷ ಕೋರ್ಟ್‌ಗೂ ದಾಖಲೆಗಳನ್ನು ಸಲ್ಲಿಕೆ ಮಾಡಲಾಗಿತ್ತು. ಈ ಬಗ್ಗೆ ಇನ್ನಷ್ಟು ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಆಚಾರ್ಯ ಮನವಿ ಮಾಡಿದರು. ಕೋರ್ಟ್ ಮಂಗಳವಾರಕ್ಕೆ ವಿಚಾರಣೆ ಮುಂದೂಡಿತು. [ಪ್ರಭಾವ ಬಳಸಿ ಗಿರಗಿಟ್ಲೆಯಾಡಿಸುವ ಶಶಿಕಲಾ]

ಹಣ ವರ್ಗಾವಣೆ ಮಾಡಿರುವುದು ಕಾನೂನು ಬದ್ಧವಾಗಿದೆ ಎಂಬುದನ್ನು ಸಾಬೀತು ಮಾಡಲು ಜಯಲಲಿತಾ ಕಂಪನಿಗಳನ್ನು ಶಶಿಕಲಾ ಮತ್ತು ಇತರರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಇಲ್ಲಿ ಕೂಡಾ ನಡೆದಿರುವುದು ಅಕ್ರಮ ವ್ಯವಹಾರ ಎಂದು ಕೋರ್ಟ್‌ಗೆ ತಿಳಿಸಿದರು. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಶಶಿಕಲಾ ಹೆಸರಿಗೆ ಹಣವನ್ನು ವರ್ಗಾವಣೆ ಮಾಡಿದ ಜಯಲಲಿತಾ ಅವರು ಪುನಃ ಅದನ್ನು ಸಾಲ ರೂಪದಲ್ಲಿ ಪಡೆದು, ಕಾನೂನು ಬದ್ಧವಾಗಿದೆ ಎಂದು ತೋರಿಸಿದ್ದಾರೆ ಎಂದು ಆಚಾರ್ಯ ಅವರು ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Please Wait while comments are loading...