ಜಾಹ್ನವಿ ಕಪೂರ್ ಬೆಂಬಲಕ್ಕೆ ನಿಂತ ಚಿತ್ರರಂಗ: “ಇಂದು ಬೇರೆಯವರದ್ದು, ನಾಳೆ ನಿಮ್ಮವರದ್ದಾಗಬಹುದು” ವೈಭವ್ ಸೂರ್ಯವಂಶಿ!

Janhvi Kapoor: ನಟಿ ಜಾಹ್ನವಿ ಕಪೂರ್ ಬೆಂಬಲಕ್ಕೆ ಇಡೀ ಚಿತ್ರರಂಗವೇ ನಿಂತಿದೆ. ಜೂನಿಯರ್ ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಅವರು ಅಭಿನಯಿಸಿರುವ ಹೊಸ ಸಿನಿಮಾದ ಹಾಡನ್ನು ಎಐ ಬಳಕೆ ಮಾಡಿ ಕೆಟ್ಟದಾಗಿ ವಿಡಿಯೋ ಮಾಡಿ ಟ್ರೆಂಡ್ ಮಾಡಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದು, ಇಡೀ ಚಿತ್ರರಂಗವೇ ಜಾಹ್ನವಿ ಕಪೂರ್ ಅವರ ಬೆಂಬಲಕ್ಕೆ ನಿಂತಿದೆ. ಈ ವಿಚಾರವಾಗಿ ಜಾಹ್ನವಿ ನಟಿ, ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರು ಸಹ ಪ್ರತಿಕ್ರಿಯಿಸಿದ್ದಾರೆ.

ನಟ, ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರು, ಎಲ್ಲಾ ಸೆಲೆಬ್ರಿಟಿಗಳು ಯಶಸ್ವಿಯಾಗಿ ಮಾಡಿದ ಏಕೈಕ ಕೆಲಸವೆಂದರೆ, ಆ ಆಕ್ಷೇಪಾರ್ಹ ಲಿಂಕ್‌ ಅನ್ನು ಪ್ರಚಾರ ಮಾಡುವ ಮೂಲಕ ಕೋಟ್ಯಂತರ ಜನರು ಅದನ್ನು ನೋಡುವಂತೆ ಮಾಡಿದ್ದು. ಇದಕ್ಕಿಂತ ಜಾಣತನದ ನಡೆ ಎಂದರೆ, ತಪ್ಪಿತಸ್ಥನನ್ನು ಪತ್ತೆಹಚ್ಚುವುದರತ್ತ ಗಮನಹರಿಸಿ, ಆ ಕ್ರಮದ ಬಗ್ಗೆ ಮಾತ್ರ ಪ್ರಚಾರ ಮಾಡಬೇಕಿತ್ತು. ಆದರೆ ಅವರು ಮಾಡಿದ್ದು ಟ್ವೀಟ್‌ ಮಾಡುವ ಮೂಲಕ ಸಂತ್ರಸ್ತರಾದವರು ಗುರುತು ಮತ್ತು ಆಕ್ಷೇಪಾರ್ಹ ವಿಷಯದ ಬಗ್ಗೆ ಅಪಾರ ಗಮನ ಸೆಳೆಯುವ ಕೆಲಸವಾಗಿದೆ. ಈ ಆಕ್ಷೇಪಾರ್ಹ ವಿಷಯವನ್ನು ಹಂಚುವುದು ಅಥವಾ ಹರಡುವುದೂ ಕೂಡ ಅಪರಾಧವೇ ಆಗಿದೆ ಎಂದು ಎಲ್ಲ ಸೆಲೆಬ್ರಿಟಿಗಳಿಗೂ ಚಾಟಿ ಬೀಸಿದ್ದಾರೆ.

Janhvi Kapoor Film Industry Stands With Her Today Someone Else Tomorrow You Vaibhav Suryavanshi AI Issues

ನಟಿ ಖುಷ್ಬು ಸುಂದರ್ ಅವರು, ಒಬ್ಬ ಮಹಿಳೆಯಾಗಿ, ಇನ್ನೊಬ್ಬ ಮಹಿಳೆಯನ್ನು ಡಿಜಿಟಲ್ ರೂಪದಲ್ಲಿ ನಿಂದಿಸಿದಾಗ, ಕೀಳಾಗಿ ಮತ್ತು ಅವಮಾನಿಸಿದಾಗ ನಾನು ಮೌನವಾಗಿರಲು ಸಾಧ್ಯವಿಲ್ಲ. AI ಮೂಲಕ ಮಾಡಿರುವುದು ತಮಾಷೆಯಲ್ಲ, ಮನರಂಜನೆಯಲ್ಲ ಮತ್ತು ನಾವು ಎಂದಿಗೂ ಸಾಮಾನ್ಯಗೊಳಿಸಬೇಕಾದ ವಿಷಯವಲ್ಲ. ಇದು ಕ್ರೂರ, ನಿಂದನೀಯ. ಅಲ್ಲದೆ ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಇದು ಆಕೆಯ ಘನತೆಗೆ ಧಕ್ಕೆ ತರುವ ವಿಚಾರವಾಗಿದೆ.

ಮಹಿಳೆಯನ್ನು ಗುರಿಯಾಗಿಸಿಕೊಂಡು ಮಾರ್ಫ್ ಮಾಡಿದ ವೀಡಿಯೊಗಳ ಸೃಷ್ಟಿ ಮತ್ತು ಪ್ರಸರ ಮಾಡುವುದು ನೋಡಿದರೆ ಆಕ್ರೋಶ ವಾಗುತ್ತದೆ. ಯಾವುದೇ ಮಹಿಳೆಯು ತನ್ನ ಘನತೆ, ಗೌರವ ಮತ್ತು ಸುರಕ್ಷತೆಗೆ ಧಕ್ಕೆ ತರಲು ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಬಹುದು ಎಂಬ ಭಯದಲ್ಲಿ ಬದುಕುವಂತಾಗಬಾರದು. ಇಂದು, ಅದು ಅವಳೇ. ನಾಳೆ, ಅದು ನಾನು, ನೀವು, ನಮ್ಮ ಮಗಳು, ನಮ್ಮ ಸಹೋದರಿ, ನಮ್ಮ ತಾಯಿ ಅಥವಾ ನಾವು ಪ್ರೀತಿಸುವ ಯಾವುದೇ ಮಹಿಳೆಯಾಗಿರಬಹುದು ಎಂದು ಖುಷ್ಬು ಅವರು ಹೇಳಿದ್ದಾರೆ.

ನಾವು ಇಂದು ಅದರಿಂದ ತೊಂದರೆಗೆ ಒಳಗಾಗಿಲ್ಲ ಎನ್ನುವ ಕಾರಣಕ್ಕೆ ನಾವು ಮೌನವಾಗಿರಲು ಸಾಧ್ಯವಿಲ್ಲ. ಒಬ್ಬ ಮಹಿಳೆಯ ಘನತೆಯ ಮೇಲೆ ದಾಳಿಯಾದಾಗ, ಪ್ರತಿಯೊಬ್ಬ ಮಹಿಳೆ ಎದ್ದು ನಿಂತು ಮಾತನಾಡುವ ಅವಶ್ಯಕತೆ ಇದೆ. ಅಂತಹ ವಿಷಯವನ್ನು ಕ್ರಿಯೇಟ್ ಮಾಡುವವರು, ತಿಳಿದೂ ಸಹ ಅದನ್ನು ಹಂಚಿಕೊಳ್ಳುವವರು, ಪ್ರಚಾರ ಮಾಡುವವರು ಅಥವಾ ಉದ್ದೇಶಪೂರ್ವಕವಾಗಿ ಅದನ್ನು ವೈರಲ್ ಮಾಡುವವರು ಕಾನೂನಿನ ಅಡಿಯಲ್ಲಿ ಹೊಣೆಗಾರರಾಗಿರಬೇಕು.

ಈ ಘಟನೆಯನ್ನು ಉದಾಹರಣೆಯಾಗಿಸಿಕೊಂಡು ಯಾವ ರೀತಿ ಪರಿಣಾಮ ಎದುರಾಗುತ್ತದೆ ಹಾಗೂ ಈ ರೀತಿ ಮಾಡಿದರೆ ಶಿಕ್ಷೆ ಎದುರಿಸಬೇಕಾಗುತ್ತದೆ ಎನ್ನುವ ಸಂದೇಶ ರವಾನಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. AI ಎಂದಿಗೂ ಮಹಿಳೆಯರ ವಿರುದ್ಧದ ಅಸ್ತ್ರವಾಗಬಾರದು ಎಂದೂ ಹೇಳಿದ್ದಾರೆ.

Janhvi Kapoor: ನನ್ನ ಫೋಟೋಗಳನ್ನು ಎಐ ಮಾದರಿಯಲ್ಲಿ ಬಳಸಬೇಡಿ: ನಟಿ ಯಾಮಿನಿ ಗುಪ್ತಾ

ನಟಿ ಯಾಮಿನಿ ಗುಪ್ತಾ ಅವರು, ಮಾಧ್ಯಮಗಳಿಗೆ ಒಂದು ಪ್ರಾಮಾಣಿಕ ವಿನಂತಿ ದಯವಿಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ನನ್ನ ಛಾಯಾಚಿತ್ರಗಳನ್ನು ಬದಲಾಯಿಸಲು ಅಥವಾ ಹೆಚ್ಚು ಚೆನ್ನಾಗಿ ಕಾಣುವಂತೆ ಮಾಡುವುದಕ್ಕೆ AI ಬಳಸುವುದನ್ನು ತಡೆಯಿರಿ. ದಯವಿಟ್ಟು ಮೂಲ ರೂಪದಲ್ಲಿ ಚಿತ್ರಗಳನ್ನು ಬಳಸಿ. AI ಬಳಸಿಕೊಂಡು ವ್ಯಕ್ತಿಯ ಚಿತ್ರ ಅಥವಾ ಹೋಲಿಕೆಯನ್ನು ಬದಲಾಯಿಸುವುದು ಅಥವಾ ಅದನ್ನು ಅವರ ಅರಿವು ಮತ್ತು ಒಪ್ಪಿಗೆಯಿಲ್ಲದೆ ಬದಲಾಯಿಸಬಾರದು. ನನ್ನ ವಿನಂತಿಯನ್ನು ಗೌರವಿಸಿದ್ದಕ್ಕಾಗಿ ಮುಂಚಿತವಾಗಿ ಎಲ್ಲರಿಗೂ ಧನ್ಯವಾದಗಳು! ಅಂತ ಹೇಳಿದ್ದಾರೆ.

ಎಐ ದುರ್ಬಳಕೆ: ಜೂನಿಯರ್‌ ಸಚಿನ್‌ ವೈಭವ್‌ ಸೂರ್ಯವಂಶಿ ಹೇಳಿದ್ದೇನು

ಎಐ ದುರ್ಬಳಕೆಯ ಬಗ್ಗೆ ಧ್ವನಿ ಜೂನಿಯರ್‌ ಸಚಿನ್ ಅಂತಲೇ ಖ್ಯಾತಿ ಗಳಿಸಿರುವ ಕ್ರಿಕೆಟಿಗ ವೈಭವ್‌ ಸೂರ್ಯವಂಶಿ ಅವರು ಸಹ ಧ್ವನಿ ಎತ್ತಿದ್ದಾರೆ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಮಹಿಳೆಯರನ್ನು ಗುರಿಯಾಗಿಸಿಕೊಂಡು ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ, ಮಾರ್ಫ್ ಮಾಡಲಾದ ವಿಷಯವನ್ನು ಸೃಷ್ಟಿಸಲು ಮತ್ತು ಹರಡಲು AI ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು ಅತ್ಯಂತ ಆತಂಕಕಾರಿ ಮತ್ತು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ವಿಷಯವಾಗಿದೆ ಎಂದಿದ್ದಾರೆ.

ಸಂತ್ರಸ್ತೆಯ ಪರವಾಗಿ ನಿಲ್ಲಿ. ಅದನ್ನು ವರದಿ ಮಾಡಿ. ಹಂಚಿಕೊಳ್ಳಬೇಡಿ. ಇಂದು ಅದು ಬೇರೆಯವರ ತಾಯಿ, ಸಹೋದರಿ, ಪತ್ನಿ ಅಥವಾ ಮಗಳಾಗಿರಬಹುದು. ನಾಳೆ ಅದು ನಿಮ್ಮವರೇ ಆಗಿರಬಹುದು ಎಂದೂ ವೈಭವ್ ಸೂರ್ಯವಂಶಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+