ಅಪ್ರಾಪ್ತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎಸ್‌ಐ ಬಂಧನ
ಅನಂತ್‌ನಾಗ್(ಜಮ್ಮು ಕಾಶ್ಮೀರ), ಆ.6: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪದಲ್ಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ.
ದೀಸು ಗ್ರಾಮದಲ್ಲಿ ಆ.5 ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು ಪೊಲೀಸ್ ಇನ್ಸ್‌ಪೆಕ್ಟರ್ ಅಜೀಝ್ ಎಂಬಾತನನ್ನು ಬುಧವಾರ ಬಂಧಿಸಿದ್ದು ಪ್ರಕರಣ ದಾಖಲಾಗಿದೆ.

13 ವರ್ಷದ ಅಪ್ರಾಪ್ತ ಬಾಲಕಿ ತಂದೆ ಮತ್ತು ಪೊಲೀಸ್ ಅಧಿಕಾರಿ ಸ್ನೇಹಿತರಾಗಿದ್ದು ಮಂಗಳವಾರ ಸಂಜೆ ಬಾಲಕಿಯ ತಂದೆ ಮತ್ತು ಬಾಲಕಿ ಸಾಮಾಗ್ರಿ ತರಲು ಮಾರುಕಟ್ಟೆಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಬಾಲಕಿ ತಂದೆಯಲ್ಲಿ ಚಹಾ ಪುಡಿ ತರಲು ಹೇಳಿದ್ದಾನೆ. ಅದರಂತೆ ಬಾಲಕಿ ಪೊಲೀಸ್ ಅಧಿಕಾರಿ ಮನೆಗೆ ಚಹಾ ಪುಡಿ ನೀಡಲು ಹೋಗಿದ್ದಾಳೆ. ಈ ಸಂದರ್ಭದಲ್ಲಿ ಎಸ್‌ಐ, ಬಾಲಕಿ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಎಸ್‌ಐ ತನ್ನ ಬಟ್ಟೆಯನ್ನು ವಿವಸ್ತ್ರಗೊಳಿಸುವುದನ್ನು ನೋಡಿ ಬಾಲಕಿ ಜೋರಾಗಿ ಕಿರುಚಿದ್ದಾಳೆ. ಬಾಲಕಿ ಕಿರುಚಾಟ ನೋಡಿ ಸ್ಥಳೀಯರು ಮನೆಗೆ ಬಂದಾಗ ಆತನ ಕೃತ್ಯ ಬೆಳಕಿಗೆ ಬಂದಿದೆ.[ನರ್ಸರಿ ಬಾಲೆ ಮೇಲೆ ಕಾರು ಚಾಲಕನಿಂದ ಲೈಂಗಿಕ ದೌರ್ಜನ್ಯ]
ವಿಚಾರ ತಿಳಿದು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಆತನನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ. ಘಟನೆ ನಡೆದು ಎಸ್‌ಐಯನ್ನು ಬಂಧಿಸದ ವಿರುದ್ಧ ಆಕ್ರೋಶ ಗೊಂಡ ಗ್ರಾಮಸ್ಥರು ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಜನರ ಪ್ರತಿಭಟನೆ ತೀವ್ರವಾದ ಹಿನ್ನಲೆಯಲ್ಲಿ ಪೊಲೀಸರು ಎಸ್‌ಐಯನ್ನು ಬಂಧಿಸಿದ್ದಾರೆ.
ಬಂಧಿತ ಎಸ್‌ಐ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications