• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನರ್ಸರಿ ಬಾಲೆ ಮೇಲೆ ಕಾರು ಚಾಲಕನಿಂದ ಲೈಂಗಿಕ ದೌರ್ಜ‌ನ್ಯ

By Ashwath
|
Google Oneindia Kannada News

ನವದೆಹಲಿ, ಆ.6: ಶಾಲಾ ಮಕ್ಕಳ ಮೇಲೆ ಲೈಂಗಿಕ ಕಿರುಕುಳದ ಬಗ್ಗೆ ದೇಶವ್ಯಾಪಿ ಚರ್ಚೆ‌ ನಡೆಯುತ್ತಿರುವ ಸಂದರ್ಭದಲ್ಲೇ ದೆಹಲಿಯ ಶಾಲೆಯ ವಾಹನ ಚಾಲಕನೊಬ್ಬ ಐದು ವರ್ಷದ ನರ್ಸರಿ ವಿದ್ಯಾರ್ಥಿ‌ನಿ ಮೇಲೆ ಲೈಂಗಿಕ ದೌರ್ಜ‌ನ್ಯ ಎಸಗಿದ್ದಾನೆ.

ವಿದ್ಯಾರ್ಥಿ‌ಗಳನ್ನು ಶಾಲೆಗೆ ಕರೆತರುತ್ತಿದ್ದ ಮಾರುತಿ ಕಾರಿನ ಚಾಲಕ ವಿಪಿನ್‌ ಕುಮಾರ್‌(35) ಬಂಧಿಸಲಾಗಿದೆ.

ಮಂಗಳವಾರ ಚಾಲಕನ ಕೃತ್ಯ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿ‌ಗಳ ಪೋಷಕರು ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ಶಾಲೆಯ ಪ್ರಾಂಶುಪಾಲರು ಕಾರು ಚಾಲಕನನ್ನು ಕೆಲಸದಿಂದ ವಜಾ ಮಾಡಿದ್ದಾರೆ.[8 ವರ್ಷದ ಬಾಲಕಿ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ]

ಈ ವರ್ಷ ಏಪ್ರಿಲ್‌ನಲ್ಲಿ ವಿದ್ಯಾರ್ಥಿ‌ನಿ ಶಾಲೆಗೆ ಸೇರಿದ್ದು, ಪ್ರತಿದಿನ ಅವಳು ವಿಪಿನ್‌ ಕುಮಾರ್‌ ಕಾರಿನಲ್ಲಿ ಶಾಲೆಗೆ ಹೋಗುತ್ತಿದ್ದಳು. ವಿದ್ಯಾರ್ಥಿ‌ನಿ ಮನೆ ಶಾಲೆಯಿಂದ ತುಂಬಾ ದೂರದಲ್ಲಿದ್ದು ಕಾರಿನಿಂದ ಕೊನೆಯವಳಾಗಿ ಇಳಿಯುತ್ತಿದ್ದಳು. ಶಾಲೆಯಿಂದ ಮನೆಗೆ ಬರುವಾಗ ಎಲ್ಲಾ ಮಕ್ಕಳನ್ನು ಕಾರಿನಿಂದ ಇಳಿಸಿದ ಮೇಲೆ ವಿಪಿನ್‌ ಕುಮಾರ್‌ ಬಲವಂತವಾಗಿ ತನ್ನ ತೊಡೆಯಲ್ಲಿ ಕುಳ್ಳಿರಿಸಿ ಆಕೆ ಮೇಲೆ ಲೈಂಗಿಕ ದೌರ್ಜ‌ನ್ಯ ಎಸಗುತ್ತಿದ್ದ.

ಕಳೆದ ಕೆಲ ದಿನಗಳಿಂದ ಬಾಲಕಿ ಶಾಲೆಗೆ ಹೋಗಲು ನಿರಾಕರಿಸುತ್ತಿದ್ದಳು. ಪೋಷಕರು ಎಷ್ಟೇ ಹೇಳಿದರೂ ಶಾಲೆಗೆ ಹೋಗುವುದಿಲ್ಲ ಎಂದು ಹಠ ಹಿಡಿಯುತ್ತಿದ್ದಳು. ಸೋಮವಾರ ರಾತ್ರಿ ಪೋಷಕರು ಬಾಲಕಿಯನ್ನು ಕರೆದು ವಿಚಾರಿಸಿದಾಗ ಬಾಲಕಿ ತನ್ನ ಮೇಲೆ ಚಾಲಕ ನಡೆಸುತ್ತಿರುವ ಕೃತ್ಯವನ್ನು ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಕಿಯನ್ನು ಇದೀಗ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಖಿನ್ನತೆಯಿಂದ ಬಳಲುತ್ತಿರುವ ಬಾಲಕಿಗೆ ಕೌನ್ಸಿಲಿಂಗ್‌ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

ಪೊಲೀಸರು ಆರೋಪಿ ವಿಪಿನ್‌ಕುಮಾರ್‌ ಇದೇ ರೀತಿ ಕೃತ್ಯವನ್ನು ಉಳಿದ ವಿದ್ಯಾರ್ಥಿ‌ನಿಯರ ಎಸಗಿದ್ದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜೊತೆಗೆ ಆತನ ಮೊಬೈಲ್‌ನ್ನು ವಶ ಪಡಿಸಿಕೊಂಡಿದ್ದಾರೆ.

English summary
A school cab driver has been charged with repeated sexual abuse of a five-year-old girl while ferrying her to and from a school in Defence Colony, south Delhi. The abuse came to light after the victim shared her trauma with her parents when pressed to reveal why she didn't want to go to school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X