ಜಮ್ಮು-ಕಾಶ್ಮೀರದಲ್ಲಿ ಫೇಸ್ಬುಕ್ ಸೇರಿ 22 ಸಾಮಾಜಿಕ ಜಾಲತಾಣಗಳು ನಿಷೇಧ
ರಾಷ್ಟ್ರ ಮತ್ತು ಸಾಮಾಜಿಕ ವಿರೋಧಿ ಕೆಲಸಗಳಿಗೆ ಬಳಸಲಾಗುತ್ತಿದ್ದ. ಹಾಗೂ ಕಣಿವೆಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರವು ಫೇಸ್ಬುಕ್ ಸೇರಿ 22 ಸಾಮಾಜಿಕ ಮಾಧ್ಯಗಳಿಗೆ ನಿಷೇಧ ಹೇರಿದೆ.
ಜಮ್ಮು ಮತ್ತು ಕಾಶ್ಮೀರ, ಏಪ್ರಿಲ್ 26 : ಫೇಸ್ ಬುಕ್, ಟ್ವಿಟರ್ ಹಾಗೂ ವಾಟ್ಸಪ್ ಸೇರಿದಂತೆ ಒಟ್ಟು 22 ಸಾಮಾಜಿಕ ಮಾಧ್ಯಮಗಳಿಗೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಒಂದು ತಿಂಗಳುಗಳ ಮಟ್ಟಿಗೆ ನಿಷೇಧ ಹೇರಿದೆ.
ಈ ತಾಣಗಳನ್ನು ರಾಷ್ಟ್ರ ಮತ್ತು ಸಾಮಾಜಿಕ ವಿರೋಧಿ ಕೆಲಸಗಳಿಗೆ ಬಳಸಲಾಗುತ್ತಿದ್ದ. ಹಾಗೂ ಕಣಿವೆಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಸಾಮಾಜಿಕ ಮಾಧ್ಯಮಗಳ ಮೇಲಿನ ನಿಷೇಧವನ್ನು ಒಂದು ತಿಂಗಳ ಕಾಲ ಅಥವಾ ಮುಂದಿನ ಆದೇಶದವರೆಗೂ ಜಾರಿಯಲ್ಲಿರುತ್ತದೆ ಎಂದು ಜಮ್ಮು ಮತ್ತು ಕಾಶ್ಮೀರದ ಗೃಹ ಕಾರ್ಯದರ್ಶಿ ಆರ್ ಕೆ ಗೋಯೆಲ್ ತಿಳಿಸಿದ್ದಾರೆ.
ಸಾರ್ವಜನಿಕರ ಹಿತಾಸಕ್ತಿ ಮೇರೆಗೆ ಸರ್ಕಾರ ಈ ಕ್ರಮಕೈಗೊಂಡಿದ್ದು, ಯಾವುದೇ ಮಾಹಿತಿ ಅಥವಾ ವರ್ಗದ ಸಂದೇಶಗಳು ಸೇರಿದಂತೆ ಇತರೆ ಮಾಹಿತಿಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಗೋಯೆಲ್ ಹೇಳಿದರು.












Click it and Unblock the Notifications