Jammu and Kashmir Exit Polls 2024: ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ ಗೆಲುವು ಖಚಿತ ಎನ್ನುತ್ತವೆ ಈ ಸಮೀಕ್ಷೆಗಳು..
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಫಲಿತಾಂಶಗಳನ್ನು ಅಕ್ಟೋಬರ್ 8 ರಂದು ಪ್ರಕಟಿಸಲಾಗುವುದು. ಇದಕ್ಕೂ ಮುನ್ನ ಇಂದು (ಅಕ್ಟೋಬರ್ 5) ಸಂಜೆ ವಿವಿಧ ಮಾಧ್ಯಮ ಚಾನೆಲ್‌ಗಳು ಮತ್ತು ಸಮೀಕ್ಷಾ ಏಜೆನ್ಸಿಗಳಿಂದ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಮತದಾನದ ನಂತರ ತಕ್ಷಣವೇ ಎಕ್ಸಿಟ್ ಪೋಲ್‌ಗಳನ್ನು ನಡೆಸಲಾಗುತ್ತದೆ. ಇದರಲ್ಲಿ ಮತದಾರರ ಹೇಳಿಕೆಯನ್ನು ಸಂಗ್ರಹಿಸಲಾಗಿರುತ್ತದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮಂಗಳವಾರ ಪೂರ್ಣಗೊಂಡಿದೆ. ಇಂದು (ಅಕ್ಟೋಬರ್ 5) ಹರಿಯಾಣದಲ್ಲಿ ಮತದಾನ ನಡೆದಿದೆ. ಹರಿಯಾಣದಲ್ಲಿ ಮತದಾನ ಪ್ರಕ್ರಿಯೆ ಮುಗಿದ ಬಳಿಕ, ವಿವಿಧ ಏಜೆನ್ಸಿಗಳು ಎರಡೂ ರಾಜ್ಯಗಳ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಹಾಗಾದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ಪಕ್ಷ ಸರ್ಕಾರ ರಚಿಸಬಹುದು ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದೆ? ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು? ಎಂದು ತಿಳಿಯೋಣ.

ಚುನಾವಣೋತ್ತರ ಸಮೀಕ್ಷೆಗಳು:-
ಜಮ್ಮು ಕಾಶ್ಮೀರದ ವಿಧಾನಸಭೆಗೆ ಎಕ್ಸಿಟ್ ಪೋಲ್ ಫಲಿತಾಂಶದ ಪ್ರಕಾರ ಕಾಂಗ್ರೆಸ್ ಮೈತ್ರಿಕೂಟ ಮೈಲುಗೈ ಸಾಧಿಸಲಿದೆ. ಒಟ್ಟು 90 ಸ್ಥಾನಗಳಿದ್ದು, ಸಿ ವೋಟರ್ ಪ್ರಕಾರ ಕಾಂಗ್ರೆಸ್-ನ್ಯಾಷನಲ್ ಕಾನ್ಸರೆನ್ಸ್ ಮೈತ್ರಿಕೂಟ 40-48 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.
ದೈನಿಕ್ ಭಾಸ್ಕರ್ ಪ್ರಕಾರ ಕಾಂಗ್ರೆಸ್-ನ್ಯಾಚನಲ್ ಕಾನ್ಫರೆನ್ಸ್ 35-40, ಬಿಜೆಪಿಗೆ 25-30, ಪಿಡಿಪಿ 4-7, ಇತರರು 12-16 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದಿದೆ.
People's pulse exit poll: ಪೀಪಲ್ಸ್ ಪಲ್ಸ್ ಎಕ್ಸಿಟ್ ಪೋಲ್ ಪ್ರಕಾರ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಬಹುಮತ ಪಡೆಯುವುದು ಖಚಿತವಾಗಿದೆ. ಬಿಜೆಪಿ : 23-27, ಕಾಂಗ್ರೆಸ್-ಎನ್‌ಸಿ: 46-50, ಪಿಡಿಪಿ: 7-11, ಇತರೆ: 4-6 ಸ್ಥಾನಗಳನ್ನು ಪಡೆಯಲಿವೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಕುರಿತು India Today C-Voter ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಶೇ 36, ಬಿಜೆಪಿ ಶೇ 41, ಪಿಡಿಎಫ್ ಶೇ 5 ಮತ್ತು ಇತರರು ಶೇ 18ರಷ್ಟು ಮತಗಳನ್ನು ಪಡೆಯಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ 2024ರ ಕುರಿತು India Today C-Voter ನಡೆಸಿದ ಸಮೀಕ್ಷೆಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಒಮರ್ ಅಬ್ದುಲ್ಲಾ ಉತ್ತಮ ಎಂದು ಶೇ 39ರಷ್ಟು ಜನರು, ರವೀಂದ್ರ ರೈನಾ ಉತ್ತಮ ಎಂದು ಶೇ 12ರಷ್ಟು ಜನರು, ಮೆಹಬೂಬಾ ಮುಫ್ತಿ ಉತ್ತಮ ಎಂದು ಶೇ 9ರಷ್ಟು ಜನರು ಮತ್ತು ವಿಕಾರ್ ರಸೂಲ್ ವಾನಿ ಪರವಾಗಿ ಶೇ 6ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಆಯೋಗ ಸೆಪ್ಟೆಂಬರ್ 18 ರಂದು ಬೆಳಿಗ್ಗೆ 7 ರಿಂದ ಅಕ್ಟೋಬರ್ 5 ರ ಸಂಜೆ 6.30 ರವರೆಗೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಅಥವಾ ಇತರ ಯಾವುದೇ ಪ್ರಸಾರದ ಮೂಲಕ ನಿರ್ಗಮನ ಸಮೀಕ್ಷೆಗಳ ಪ್ರಸಾರವನ್ನು ನಿಷೇಧಿಸಿದೆ. ಹೀಗಾಗಿ ಅಕ್ಟೋಬರ್ 5ರ ಶನಿವಾರ ಸಂಜೆ 6.30ರ ನಂತರವಷ್ಟೇ ಎಕ್ಸಿಟ್ ಪೋಲ್‌ಗಳು ಬಹಿರಂಗಗೊಂಡಿವೆ.
ಮೂರು ಹಂತಗಳಲ್ಲಿ ಚುನಾವಣೆ 2024
ಜಮ್ಮು ಮತ್ತು ಕಾಶ್ಮೀರದ 90 ಸ್ಥಾನಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆದಿದ್ದು ಶಾಂತಿಯುತವಾಗಿ ಮತದಾನ ನಡೆದಿದೆ. ಸೆಪ್ಟೆಂಬರ್ 18 ರಂದು ಮೊದಲ ಹಂತದಲ್ಲಿ ಚುನಾವಣೆ ನಡೆದಿದ್ದರೆ, ಸೆಪ್ಟೆಂಬರ್ 25ರಂದು ಎರಡನೇ ಹಂತದಲ್ಲಿ ಮತ್ತು ಅಕ್ಟೋಬರ್ 1ರಂದು ಮೂರನೇ ಹಂತದಲ್ಲಿ ಚುನಾವಣೆ ನಡೆದಿದೆ.
ಸೆಪ್ಟೆಂಬರ್ 18ರಂದು ನಡೆದ ಮೊದಲ ಹಂತದಲ್ಲಿ ಶೇ.61.38ರಷ್ಟು ಮತದಾನ ನಡೆದಿದ್ದರೆ, ಸೆಪ್ಟೆಂಬರ್ 26ರಂದು ನಡೆದ ಎರಡನೇ ಹಂತದಲ್ಲಿ ಶೇ.57.31ರಷ್ಟು ಮತದಾನವಾಗಿತ್ತು. ಮೂರನೇ ಹಂತದಲ್ಲಿ ಶೇ.69.69 ರಷ್ಟು ಮತದಾನವಾಗಿದೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ 2014
ಜಮ್ಮು ಮತ್ತು ಕಾಶ್ಮೀರದಲ್ಲಿ ಕೊನೆಯ ವಿಧಾನಸಭಾ ಚುನಾವಣೆ 2014 ರಲ್ಲಿ ನಡೆಯಿತು. ಆ ಸಮಯದಲ್ಲಿ ನಡೆಸಿದ ಸಿ ವೋಟರ್ ಎಕ್ಸಿಟ್ ಪೋಲ್‌ನಲ್ಲಿ ಭಾರತೀಯ ಜನತಾ ಪಕ್ಷವು 27-33, ಕಾಂಗ್ರೆಸ್ (ಇಂಡಿಯನ್ ನ್ಯಾಷನಲ್ ಕಾಂಗ್ರೆಸ್) 4-10, ನ್ಯಾಷನಲ್ ಕಾನ್ಫರೆನ್ಸ್ (ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್) 8- 14, PDP (ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ) 32-38 ಸ್ಥಾನಗಳನ್ನು ಪಡೆಯುತ್ತದೆ ಮತ್ತು ಇತರರು 2-8 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಭವಿಷ್ಯ ನುಡಿದಿದೆ. ಫಲಿತಾಂಶಗಳ ಕುರಿತು ಮಾತನಾಡುವುದಾದರೆ, ಚುನಾವಣೆಯಲ್ಲಿ ಪಿಡಿಪಿ ಗರಿಷ್ಠ 28 ಸ್ಥಾನಗಳನ್ನು ಪಡೆದರೆ, ಬಿಜೆಪಿ 25 ಸ್ಥಾನಗಳನ್ನು ಪಡೆದಿದೆ. ನ್ಯಾಷನಲ್ ಕಾನ್ಫರೆನ್ಸ್‌ಗೆ 15 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 12 ಸ್ಥಾನಗಳು ಲಭಿಸಿವೆ.












Click it and Unblock the Notifications