Jammu & Kashmir Peoples Pulse Exit Poll Results: ಕಣಿವೆ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಹವಾ!, ಬಿಜೆಪಿ ಟುಸ್ ಪಟಾಕಿ

ನವದೆಹಲಿ, ಅಕ್ಟೋಬರ್ 05: ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆ 2024ಗೆ ಮೂರು ಹಂತಗಳಲ್ಲಿ ಚುನಾವಣೆ ನಡೆದಿದ್ದು, ಇಂದು ಹರಿಯಾಣ ಚುನಾವಣೆ ಬಳಿಕ ವಿವಿಧ ಸುದ್ದಿಸಂಸ್ಥೆಗಳು 'ಪೀಪಲ್ ಪಲ್ಸ್' ಎಕ್ಸಿಟ್ ಪೋಲ್ ಬಿಡುಗಡೆ ಮಾಡಿದೆ. ಎಬಿಪಿ ಸುದ್ದಿ ಸಂಸ್ಥೆ (Peoples Pulse Exit Poll) ಸಮೀಕ್ಷೆ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ಪಕ್ಷ ಹೆಚ್ಚು ಸ್ಥಾನ ಗಳಿಸಲಿದೆ. ಯಾರಿಗೆ ಜನರು ಮಣೆ ಹಾಕಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

'ಪೀಪಲ್ ಪಲ್ಸ್' ಸಮೀಕ್ಷೆ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಇಲ್ಲಿ ಕಾಂಗ್ರೆಸ್ 46 ರಿಂದ 50ಸ್ಥಾನ, ಬಿಜೆಪಿ ಕೇವಲ 23 ರಿಂದ 27, ಪಿಡಿಪಿ 07 ರಿಂದ 11 ಸ್ಥಾನಗಳು, ಇತರೆ ಪಕ್ಷಗಳು 4ರಿಂದ 6 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ತಿಳಿಸಿದೆ. ಈ ಮೂಲಕ ದಶಕದ ನಂತರ ಬಿಜೆಪಿ ವಿರುದ್ಧ ಕಾಂಗ್ರೆಸ್ ಮೇಲುಗೈ ಸಾಧಿಸುವ ಸಾಧ್ಯತೆ ಇದೆ ಎಂಬುದು ಈ ಸಮೀಕ್ಷೆಯಿಂದ ಗೊತ್ತಾಗಲಿದೆ.

Jammu And Kashmir Election 2024 ABP News Exit Poll Predictions Know Which Party Got Majority

ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 90 ಸ್ಥಾನಗಳಿಗೆ ಮೂರು ಹಂತಗಳಲ್ಲಿ ಅಂದರೆ ಸೆಪ್ಟೆಂಬರ್ 18, 25 ಹಾಗೂ ಅಕ್ಟೋಬರ್ 1 ರಂದು ಮತದಾನ ನಡೆದಿದೆ. ಜರುಗಿತ್ತು. ಕಣಿವೆ ರಾಜ್ಯದಲ್ಲಿ ದಶಕದ ಬಳಿಕ ವಿಧಾನಸಭೆಗೆ ನಡೆದು ಚುನಾವಣೆಯು ಬಿಜೆಪಿ ಪ್ರತಿಷ್ಠಿಯಾಗಿದೆ. ಇತ್ತ ಬಿಜೆಪಿ ನಿಲುವು ದೂರುತ್ತಾ ಬಂದಿದ್ದ ಕಾಂಗ್ರೆಸ್ ಸೇರಿದಂತೆ ಇನ್ನಿತರ ಪಕ್ಷಗಳು ಪ್ರಬಲ ಪೈಪೋಟಿ ನೀಡಿವೆ. ಸದ್ಯ ಕಾಂಗ್ರೆಸ್ ಮೇಲುಗೈ ಸಾಧಿಸುವ ಮುನ್ಸೂಚನೆ ಸಿಕ್ಕಿದೆ.

ಕಳೆದ ಬಾರಿ 2014ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆ ಬಳಿಕ ಹೊರ ಬಿದ್ದ ಎಕ್ಸಿಟ್ ಫೋಲ್ ಫಲಿತಾಂಶ ನೋಡುವುದಾದರೆ, 90 ಸದಸ್ಯ ಬಲದಲ್ಲಿ ಮ್ಯಾಜಿಕ್ ನಂಬರ್ 44. ಇದರಲ್ಲಿ ಪಿಡಿಪಿ 32-38 ಸ್ಥಾನ ಪಡೆದು ದೊಡ್ಡ ಪಕ್ಷವಾಗಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿತ್ತು. ಬಿಜೆಪಿ 27-33 ರಲ್ಲಿದೆ. ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) 8-14 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 4-10 ಸೀಟು ಗೆಲ್ಲಬಹುದೆಂದು ಆಗ ಎಕ್ಸಿಟ್ ಪೋಲ್ ವರದಿಗಳು ಮಾಹಿತಿ ನೀಡಿದ್ದವು.

ಚುನಾವಣೆ ಆಯೋಗದಿಂದ ಅಧಿಕೃತವಾಗಿ ಬಂದ ಫಲಿತಾಂಶದಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ 2014 ರಲ್ಲಿ ಯಾವೊಂದು ಪಕ್ಷ ಪರಿಪೂರ್ಣ ಬಹುಮತ ಪಡೆದಿರಲಿಲ್ಲ. ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ 28 ಸ್ಥಾನಗಳನ್ನು ಗಳಿಸಿತ್ತು. ಬಿಜೆಪಿ 25 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈ ಬಾರಿ ಬಿಜೆಪಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+