Jammu & Kashmir Assembly Election 2024: ಮೊದಲ ಹಂತದ ಚುನಾವಣೆಯಲ್ಲಿ ದಾಖಲೆಯ ಮತದಾನ ನಿರೀಕ್ಷೆ

ನವದೆಹಲಿ, ಸೆಪ್ಟಂಬರ್ 18: ಕೇಂದ್ರ ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಘೋಷಣೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಒಟ್ಟು 90 ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತದಾನ ನಡೆದಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ನಡೆದಿದ್ದು, ಮಧ್ಯಾಹ್ನ 1 ಗಂಟೆಗೆ ಹೊತ್ತಿಗೆ ಶೇಕಡಾ 41.17 ರಷ್ಟು ಮತದಾನ ನಡೆದಿದೆ. ಎಲ್ಲೆಡೆ ಇದುವರೆಗೆ ಸುಸೂತ್ರವಾಗಿ ಮತದಾನ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಮೂರು ಹಂತಗಳಲ್ಲಿ ಮತದಾನ ಜರುಗಲಿದೆ. ಇಂದು ಮೊದಲ ಹಂತದಲ್ಲಿ ಕೆಲವು ಕ್ಷೇತ್ರಗಳಲ್ಲಿ ಅತ್ಯುತ್ತಮ ದಾಖಲೆಯ ಮತದಾನ ನಡೆದಿದೆ. 24 ಕ್ಷೇತ್ರಗಳಲ್ಲಿ 23 ಲಕ್ಷಕ್ಕೂ ಹೆಚ್ಚು ಮತದಾರರು ಮತ ದಾನ ಅರ್ಹತೆ ಪಡೆದುಕೊಂಡಿದ್ದಾರೆ ಎಂದು ಚುನಾವಣೆ ಆಯೋಗ ಮಾಹಿತಿ ನೀಡಿದೆ.

Jammu and Kashmir Assembly Election 1st Phase Voting Turnout Reaches 50 66 Pc Till 4 pm

ಎಲ್ಲೆಡೆ ಮತದಾನ ಸರಾಗ

ಈ ಕ್ಷೇತ್ರ ವ್ಯಾಪ್ತಿಯ ಏಳು ಜಿಲ್ಲೆಗಳ ಜನರು ವಿಧಾನಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ಒಟ್ಟು ಚುನಾವಣಾ ಆಯೋಗವು 3,276 ಮತಗಟ್ಟೆ ಸ್ಥಾಪಿಸಲಾಗಿದೆ. 14,000 ಮತಗಟ್ಟೆ ಸಿಬ್ಬಂದಿ ಸುಗಮ ಮತ್ತು ಸಮರ್ಥ ಮತದಾನ ಪ್ರಕ್ರಿಯೆ ಖಚಿತಪಡಿಸಿಕೊಳ್ಳಲಾಗುತ್ತಿದೆ. ಸುಗಮ ಮತದಾನಕ್ಕೆ ಆದ್ಯತೆ ನೀಡಿದ್ದು, ಎಲ್ಲೆಡೆ ಸಾರಗವಾಗಿ ಮತದಾನ ನಡೆದಿದೆ.

ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 41.17 ರಷ್ಟು ಮತದಾನವಾಗಿದೆ, ಸಂಜೆ 4 ಗಂಟೆ ಹೊತ್ತಿಗೆ 50.66ರಷ್ಟು ಮತದಾನ ನಡೆಯುವ ನಿರೀಕ್ಷೆ ಇದೆ. ಈ ಭಾರಿ ದಾಖಲೆಯ ಮತದಾನ ಆಗುವ ನಿರೀಕ್ಷೆ ಇದೆ.

ಇನ್ನೂ ಅಧಿಕಾರಿಗಳ ಪ್ರಕಾರ, ಕಾಶ್ಮೀರ ಕಣಿವೆಯ 16 ವಿಧಾನಸಭಾ ಕ್ಷೇತ್ರಗಳಲ್ಲಿ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇಕಡಾ 47.68 ರಷ್ಟು ಗರಿಷ್ಠ ಮತದಾನ ದಾಖಲಾಗಿದೆ. ಡಿಹೆಚ್ ಪೋರಾ ಕ್ಷೇತ್ರದಲ್ಲಿ ಶೇಕಡಾ 43.66, ದೂರು ಕ್ಷೇತ್ರದಲ್ಲಿ ಶೇಕಡಾ 41.30 ಮತ್ತು ಕೊಕರ್ನಾಗ್ (ಎಸ್‌ಟಿ) ಕ್ಷೇತ್ರದಲ್ಲಿ ಗರಿಷ್ಠ ಶೇಕಡಾ 41 ರಷ್ಟು ಮತದಾನ ಜರುಗಿದೆ. ಸಂಜೆ ಹೊತ್ತಿಗೆ ಗರಿಷ್ಠ 60ರಷ್ಟು ಮತದಾನ ನಡೆಯುವ ಸಾಧ್ಯತೆ ಇದೆ.

ಇಂದು ನಡೆದ ಜಮ್ಮು ಮತ್ತು ಕಾಶ್ಮೀರದ ಒಟ್ಟು 24 ಕ್ಷೇತ್ರಗಳ ಮತದಾನದಲ್ಲಿ ಜಮ್ಮು ಪ್ರದೇಶದ ಇಂದರ್ವಾಲ್ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನ ನಡೆದಿದೆ. ಈ ಕ್ಷೇತ್ರದಲ್ಲಿ ಮಧ್ಯಾಹ್ನದ ವೇಳೆಗೆ ಶೇಕಡಾ 60.01 ರಷ್ಟು ಮತದಾನ ಆಗಿದೆ ಎಂದು ಚುನಾವಣೆ ಆಯೋಗದ ಮೂಲಗಳು ಮಾಹಿತಿ ನೀಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+