55 ಕೋಟಿ ಕರೆಂಟ್ ಬಿಲ್ ಕಂಡು ಬೆಚ್ಚಿಬಿದ್ದ!

electricity bill
ಜೈಪುರ, ಸೆ.14 : ಕೆಲವೊಮ್ಮೆ ವಿದ್ಯುತ್ ಬಿಲ್, ನೀರಿನ ಬಿಲ್ ಹೆಚ್ಚಾಗಿ ಬಂದು ಜನರ ಜೇಬಿಗೆ ಕತ್ತರಿ ಹಾಕುವುದು ಸಾಮಾನ್ಯ. ಆದರೆ, ಜೈಪುರ ವಿದ್ಯುತ್ ಸರಬರಾಜು ಘಟಕ ವರ್ಕ್ ಶಾಪ್ ಮಾಲೀಕನಿಗೆ ಬರೋಬ್ಬರಿ 55 ಕೋಟಿ ವಿದ್ಯುತ್ ಬಿಲ್ ಕಳುಹಿಸಿದೆ.

ಜೈಪುರ ಪಟ್ಟಣದಲ್ಲಿ ಪೊಕಾರ್ಮಲ್ ಸೇನ್ ಎಂಬ ವರ್ಕ್ ಶಾಪ್ ಮಾಲೀಕನಿಗೆ ಈ ತಿಂಗಳ ವಿದ್ಯುತ್ ಬಿಲ್ ನೋಡಿ ನಿಜಕ್ಕೂ ಕರೆಂಟ್ ಹೊಡೆದಂತಾಗಿದೆ. ಈ ತಿಂಗಳ ಆತನ ವಿದ್ಯುತ್ ಬಿಲ್ 54.94 ಕೋಟಿ ರೂ.ಗಳು. ಜೈಪುರ ಪಟ್ಟಣದ ಒಟ್ಟು ಬಿಲ್ ಗಿಂತ ಮೂರು ಪಟ್ಟು ಹೆಚ್ಚಾಗಿದೆ ಈ ಬಿಲ್.

ಸೇನ್ ಪ್ರತಿ ತಿಂಗಳು ಸುಮಾರು 12,000 ರೂ. ವಿದ್ಯುತ್ ಬಿಲ್ ಪಾವತಿಸುತ್ತಿದ್ದ. ಆದರೆ, ಈ ತಿಂಗಳು ಜೈಪುರ ವಿದ್ಯುತ್ ಸರಬರಾಜು ಘಟಕ ಆತನಿಗೆ 55 ಕೋಟಿ ರೂ.ಗಳ ಬಿಲ್ ಅನ್ನು ಸೆ.10ರಂದು ಕಳುಹಿಸಿದೆ. ಅದು ಬಿಲ್ ಕಟ್ಟಲು ಕೊನೆಯ ಎರಡು ದಿನ ಮುಂಚಿತವಾಗಿ.

ವಿದ್ಯುತ್ ಬಿಲ್ ನೋಡಿ ಹೌಹಾರಿದ ಸೇನ್ ಬಿಲ್ ಪಾವತಿ ಮಾಡುವುದು ಹೇಗೆ? ಎಂದು ತಲೆಕೆಡಿಸಿಕೊಂಡು ಕೂತಿದ್ದ. ಕೊನೆಗೂ ಮಾಧ್ಯಮಗಳಿಗೆ ವಿದ್ಯುತ್ ಇಲಾಖೆಯ ಈ ಯಡವಟ್ಟಿನ ಬಗ್ಗೆ ಮಾಹಿತಿ ನೀಡಿದ್ದಾನೆ ಮತ್ತು ಇಲಾಖೆಗೆ ದೂರು ನೀಡಿದ್ದಾನೆ.

ಮಾಧ್ಯಮಗಳಲ್ಲಿ ಈ ವಿಷಯ ಬಹಿರಂಗವಾಗುತ್ತಿದ್ದಂತೆ ತೀವ್ರ ಮುಜುಗರಕ್ಕೆ ಒಳಗಾದ ಜೈಪುರ ವಿದ್ಯುತ್ ಘಟಕ, ತಾಂತ್ರಿಕ ದೋಷದಿಂದ ಇಂತಹ ತಪ್ಪು ನಡೆದಿದೆ ಎಂದು ಸ್ಪಷ್ಟನೆ ನೀಡಿದೆ. ಘಟನೆ ಕುರಿತು ತನಿಖೆಗೆ ಆದೇಶ ನೀಡಿದೆ.

ಸದ್ಯ ಸೇನ್ ಹೊಸ ವಿದ್ಯುತ್ ಬಿಲ್ ಪಡೆದಿದ್ದು, ಈ ಬಾರಿ ಆತನಿಗೆ 10,000ರೂ. ಬಿಲ್ ಪಾವತಿ ಮಾಡಬೇಕಿದೆ. ಹತ್ತು ಸಾವಿರ ರೂ. ಬಿಲ್ ಗೆ 55 ಕೋಟಿ ಬಿಲ್ ಕೊಟ್ಟ ವಿದ್ಯುತ್ ಘಟಕದ ಕಾರ್ಯವೈಖರಿ ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಒಳಗಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+