ಮತ್ತೆ ಬಾಲ ಬಿಚ್ಚಿದ ಉಗ್ರರು ಎನ್ ಕೌಂಟರ್ ಗೆ ಬಲಿ
ಶ್ರೀನಗರ, ಜ, 18: ಕಾಶ್ಮೀರ ಗಡಿಯಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದೆ. ಭಾನುವಾರ ಮುಂಜಾನೆ ಎನ್ ಕೌಂಟರ್ ನಲ್ಲಿ ಉಗ್ರರಿಬ್ಬರು ಹತ್ಯೆ ಮಾಡಲಾಗಿದೆ.
ಜೈಷ್-ಇ-ಮಹಮದ್ ಸಂಘಟನೆ ಸೇರಿದ ಉಗ್ರರಿಬ್ಬರನ್ನು ಉತ್ತರ ಕಾಶ್ಮೀರದ ಸೊಪೋರ್ ಪಟ್ಟಣ ಸಮೀಪ ಏನ್ ಕೌಂಟರ್ ನಲ್ಲಿ ಹತ್ಯೆಮಾಡಲಾಗಿದೆ.[ಗಣರಾಜ್ಯೋತ್ಸವಕ್ಕೆ ಮುಂಬೈಗೆ ಬಾಂಬ್, ಉಗ್ರರ ಬೆದರಿಕೆ ಸಂದೇಶ]

ಅಡಗುದಾಣದ ಬಳಿ ನಾವು ತೆರಳಿದಾಗ ಉಗ್ರರು ದಾಳಿ ಮಾಡಲು ಮುಂದಾದರು. ತಕ್ಷಣ ಸೇನೆ ಪ್ರತಿದಾಳಿ ನಡೆಸಿತು. ಗುಂಡಿನ ದಾಳಿಯಲ್ಲಿ ಇಬ್ಬರು ಉಗ್ರರು ಸ್ಥಳದಲ್ಲೇ ಹತರಾದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.[ಉಗ್ರರ ವಿರುದ್ಧ ಹೋರಾಟ: ಫ್ರಾನ್ಸಿಗೆ ಸಾಧ್ಯ, ಭಾರತಕ್ಕೆ ಸಾಧ್ಯವಿಲ್ಲವೇ?]
ಮನೆಯಲ್ಲಿ ಅಡಗಿಕೊಂಡಿದ್ದ ಉಗ್ರರ ಮೇಲೆ ದಾಳಿ ಮಾಡಲಾಯಿತು. ಈ ಸಂದರ್ಭ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಲ್ಲದೇ ಸೈನ್ಯದ ಮೇಲೆ ಗುಂಡಿನ ದಾಳಿ ಮಾಡಲು ಉಗ್ರಗಾಮಿಗಳು ಮುಂದಾದರು. ಸೇನೆ ಪ್ರತಿ ದಾಳಿ ನಡೆಸಿದಾಗ ಗುಂಡಿಗೆ ಬಲಿಯಾದರು. ಉತ್ತರ ಕಾಶ್ಮೀರದ ಹಲವೆಡೆ ಉಗ್ರರು ಅವಿತುಕೊಂಡುರುವ ಬಗ್ಗೆ ಮಾಹಿತಿಯಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications