Jammu And Kashmir Elections: 2 ನೇ ಹಂತದ ಮತದಾನ ಯಶಸ್ವಿ; ವೈಷ್ಣೋ ದೇವಿ ಕ್ಷೇತ್ರದಲ್ಲಿ ದಾಖಲೆಯ ಮತದಾನ
ನವದೆಹಲಿ, ಸೆಪ್ಟೆಂಬರ್ 26: 90 ಸದಸ್ಯ ಬಲದ ಜಮ್ಮು ಮತ್ತು ಕಾಶ್ಮೀರದ ವಿಧಾಸಭಾ ಚುನಾವಣೆ ಮೂರು ಹಂತದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 18ರಂದು ಮೊದಲ ಹಂತ, ಸೆಪ್ಟೆಂಬರ್ 25ರಂದು ಎರಡನೇ ಹಂತದಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ.
ಅಕ್ಟೋಬರ್ 01ರಂದು ಮೂರನೇ ಹಾಗೂ ಕೊನೆಯ ಹಂತದ ಮತದಾನ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಎರಡನೇ ಹಂತದ ಮತದಾನ ಮುಕ್ತಾಯಗೊಂಡಿದೆ. ಸಂಜೆ 5 ಗಂಟೆಯವರೆಗೆ ಕಣಿವೆ ರಾಜ್ಯದಲ್ಲಿ ಶೇ 54ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಚುನಾವಣೆ ಹಿನ್ನೆನೆ ಬಿಗಿ ಭದ್ರತೆಯ ನಡುವೆ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಗೆ ಶಾಂತಿಯುತವಾಗಿ ಪೂರ್ಣಗೊಂಡಿದೆ. ಚುಣಾವಣೆಯ ವೇಳೆ ಮತದಾರರು ಶಾಂತಿಯುತವಾಗಿ ಮತ ಚಲಾಯಿಸಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಎರಡನೇ ಹಂತದಲ್ಲಿ ಒಟ್ಟು 2.5 ಮಿಲಿಯನ್ ಮತದಾರರಿದ್ದು, 26 ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಸೇರಿದಂತೆ 239 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಜಮ್ಮು ಪ್ರದೇಶದ ಶ್ರೀ ಮಾತಾ ವೈಷ್ಣೋ ದೇವಿ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಮತದಾನವಾಗಿದ್ದು, ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇಕಡಾ 75.29 ರಷ್ಟು ವೋಟಿಂಗ್ ದಾಖಲಿಸಿದೆ, ಪೂಂಚ್-ಹವೇಲಿ ಶೇ. 72.71ರಷ್ಟು , ಗುಲ್ಬ್‌ಗಢ STಯಲ್ಲಿ ಶೇ 72.19 ಮತ್ತು ಸುರನ್‌ಕೋಟೆ ವ್ಯಾಪ್ತಿಯಲ್ಲಿ ಶೇ 72.18 ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಂಕಿ- ಅಂಶಗಳು ಮಾಹಿತಿ ನೀಡಿವೆ.
ಕಾಶ್ಮೀರ ಕಣಿವೆಯ 15 ವಿಧಾನಸಭಾ ಕ್ಷೇತ್ರಗಳಲ್ಲಿ ಖಾನ್‌ಸಾಹಿಬ್‌ನಲ್ಲಿ ಶೇಕಡಾ 67.70 ರಷ್ಟು ಮತದಾನ ದಾಖಲಾಗಿದ್ದು, ಕಂಗನ್ (ಎಸ್‌ಟಿ) ಶೇ.67.60 ಮತ್ತು ಚ್ರಾರ್-ಇ-ಶರೀಫ್ ಶೇ.66ರಷ್ಟು ಹಕ್ಕು ಚಲಾವಣೆ ಆಗಿರುವ ಮಾಹಿತಿ ದೊರೆತಿದೆ. ಮೊದಲ ಹಂತದ ಮತದಾನ ಸೆಪ್ಟೆಂಬರ್ 18 ರಂದು ನಡೆದಿದ್ದರೆ ಮೂರನೇ ಮತ್ತು ಕೊನೆಯ ಹಂತದ ಮತದಾನ ಅಕ್ಟೋಬರ್ 1 ರಂದು ನಡೆಯಲಿದೆ. ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ.












Click it and Unblock the Notifications