ಫೇಸ್ ಬುಕ್ ಸೇರಿದಂತೆ 22 ಜಾಲತಾಣಕ್ಕೆ ಜಮ್ಮು-ಕಾಶ್ಮೀರದಲ್ಲಿ ನಿಷೇಧ

ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಹರಡಲು ಕಾರಣವಾಗುತ್ತಿರುವ ಸಾಮಾಜಿಕ ಜಾಲತಾಣ ವೆಬ್ ಸೈಟ್ ಹಾಗೂ ಅಪ್ಲಿಕೇಷನ್ ಗಳನ್ನು ಅಲ್ಲಿನ ರಾಜ್ಯ ಸರಕಾರವು ನಿಷೇಧಿಸಿ ಆದೇಶ ಹೊರಡಿಸಿದೆ

ಶ್ರೀನಗರ್, ಏಪ್ರಿಲ್ 26: ಜಮ್ಮು ಮತ್ತು ಕಾಶ್ಮೀರ ಸರಕಾರ ಬುಧವಾರ ಫೇಸ್ ಬುಕ್, ವಾಟ್ಸ್ ಆಪ್, ಟ್ವಿಟ್ಟರ್ ಸೇರಿದಂತೆ ಇಪ್ಪತ್ತೆರಡು ಸಾಮಾಜಿಕ ಜಾಲತಾಣ ವೆಬ್ ಸೈಟ್ ಹಾಗೂ ಅಪ್ಲಿಕೇಷನ್ ಗಳನ್ನು ನಿಷೇಧಿಸಿದೆ. ರಾಷ್ಟ್ರವಿರೋಧಿ ಹಾಗೂ ಸಮಾಜ ವಿರೋಧಿಗಳು ಇವುಗಳ ದುರ್ಬಳಕೆ ಮಾಡಬಹುದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ಒಂದು ತಿಂಗಳು ಅದಕ್ಕಿಂತ ಹೆಚ್ಚು ಕಾಲ ಅಥವಾ ಮುಂದಿನ ಆದೇಶದವರೆಗೆ ಈ ನಿಷೇಧ ಮುಂದುವರಿಯುತ್ತದೆ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್ ಕೆ ಗೋಯಲ್ ತಿಳಿಸಿದ್ದಾರೆ.

Jammu and Kashmir

ಮೂರು ಪುಟಗಳ ಆದೇಶ ಹೊರಡಿಸಿರುವ ಅವರು, ಇಂಟರ್ ನೆಟ್ ಸೇವೆ ಒದಗಿಸುವ ಎಲ್ಲ ಕಂಪೆನಿಗಳಿಗೆ ಆದೇಶ ನೀಡಿದ್ದು, ಈ ಸಾಮಾಜಿಕ ಜಾಲತಾಣಗಳ ಮೂಲಕ ಯಾವುದೇ ಸಂದೇಶ-ಫೋಟೋ-ಮಾಹಿತಿಯನ್ನು ರವಾನಿಸದಂತೆ ಎಚ್ಚರ ವಹಿಸಬೇಕು" ಎಂದಿದ್ದಾರೆ.[ಕಲ್ಲು ತೂರಾಟಕ್ಕೆ ವಾಟ್ಸಾಪ್ ಗ್ರೂಪ್ ಗಳಿಂದ ನಿರ್ದೇಶನ!]

Facebook

ಫೇಸ್ ಬುಕ್, ಟ್ವಿಟ್ಟರ್, ವಾಟ್ಸ್ ಆಪ್, ವಿ ಚಾಟ್, ಕ್ಯೂ ಕ್ಯೂ, ಕ್ಯೂ ಜೋನ್, ಗೂಗಲ್ ಪ್ಲಸ್, ಸ್ಕೈಪ್, ಲೈನ್, ಪಿನ್ ಟರಸ್ಟ್, ಸ್ನಾಪ್ ಚಾಟ್, ಯೂಟ್ಯೂಬ್, ಫ್ಲಿಕರ್ ಸೇರಿದಂತೆ ಒಟ್ಟು ಇಪ್ಪತ್ತೆರಡು ವೆಬ್ ಸೈಟ್, ಸಾಮಾಜಿಕ ಜಾಲತಾಣ ಹಾಗೂ ಅಪ್ಲಿಕೇಷನ್ ಗಳನ್ನು ನಿಷೇಧಿಸಲಾಗಿದೆ.

Twitter

2016ರಲ್ಲಿ ಕಾಶ್ಮೀರ ಕಣಿವೆಯಲ್ಲಿ ನಡೆದ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ ಜಾಲತಾಣಗಳು, ಇನ್ ಸ್ಟಂಟ್ ಮೆಸೇಜ್ ಸರ್ವೀಸ್ ಮತ್ತಿತರ ಜಾಲತಾಣಗಳಾ ಮೂಲಕ ಹಿಂಸಾಕೃತ್ಯಕ್ಕೆ ಪ್ರಚೋದನೆ ನೀಡಲಾಗುತ್ತಿದೆ. ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂಬ ಕಾರಣಕ್ಕೆ ಅಲ್ಲಿನ ರಾಜ್ಯ ಸರಕಾರ ಈ ತೀರ್ಮಾನ ಕೈಗೊಂಡಿದೆ.[ಕಾಶ್ಮೀರ ಮರು ಮತದಾನ ಶೇ. 2 ! ಕಣಿವೆ ರಾಜ್ಯದ ಇತಿಹಾಸದಲ್ಲೇ ಅತಿ ಕಳಪೆ]

Whatsapp

ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಮಾಹಿತಿ ಪ್ರಕಾರ, ಮುನ್ನೂರೈವತ್ತು ವಾಟ್ಸ್ ಆಪ್ ಗುಂಪುಗಳನ್ನು ಕಾಶ್ಮೀರದಲ್ಲಿ ವದಂತಿ ಹಬ್ಬಲು ಬಳಸಲಾಗುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಂಡ ಸರಕಾರ ಶೇ 90ರಷ್ಟು ಇಂಥ ಗುಂಪುಗಳನ್ನು ನಿಲ್ಲಿಸಲು ಸಫಲವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+