ನಿರುದ್ಯೋಗ ಭೀತಿಯಲ್ಲಿರುವ ಟೆಕಿಗಳಿಂದ ಕಾಗ್ನಿಝೆಂಟ್ ವಿರುದ್ಧ ದೂರು
ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡಿಲು ಶುರುವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಈ ಕಂಪನಿಯ ಉದ್ಯೋಗಿಗಳು, ಫೋರಂ ಆಫ್ ಐಟಿ ಎಂಪ್ಲಾಯೀಸ್ (ಎಫ್ಐಟಿಇ) ಹಾಗೂ ಎನ್ ಡಿಎಲ್ ಎಫ್ ಐಟಿ ಎಂಪ್ಲಾಯೀಸ್ - ಎಂಬ ಎರಡು ಸಂಘಟನೆಗಳ ಮೂಲಕ ಈ ಮನವಿ ಸಲ್ಲಿಸಿವೆ.
ಚೆನ್ನೈ, ಮೇ 9: ಐಟಿ ಕ್ಷೇತ್ರದ ಪ್ರತಿಷ್ಠಿತ ಕಂಪನಿಗಳಲ್ಲೊಂದಾದ ಕಾಗ್ನಿಝೆಂಟ್ ಕಂಪನಿಯಿಂದ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿರುವ ಟೆಕಿಗಳು ತಮಗೆ ನ್ಯಾಯ ಕೊಡಿಸಬೇಕೆಂದು ತಮಿಳುನಾಡು ಸರ್ಕಾರದ ಮೊರೆ ಹೋಗಿದ್ದಾರೆ.
ಮೂಲಗಳ ಪ್ರಕಾರ, ಕಾಂಗ್ನಿಝೆಂಟ್ ಕಂಪನಿಯು ಸುಮಾರು 6 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.

ಮಾಧ್ಯಮಗಳಲ್ಲಿ ಈ ಸುದ್ದಿ ಹರಿದಾಡಿಲು ಶುರುವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಈ ಕಂಪನಿಯ ಉದ್ಯೋಗಿಗಳು, ಫೋರಂ ಆಫ್ ಐಟಿ ಎಂಪ್ಲಾಯೀಸ್ (ಎಫ್ಐಟಿಇ) ಹಾಗೂ ಎನ್ ಡಿಎಲ್ ಎಫ್ ಐಟಿ ಎಂಪ್ಲಾಯೀಸ್ - ಎಂಬ ಎರಡು ಸಂಘಟನೆಗಳ ಮೂಲಕ ಈ ಮನವಿ ಸಲ್ಲಿಸಿವೆ.
ತಮಿಳುನಾಡಿನ ಕಾರ್ಮಿಕ ಇಲಾಖೆಗೆ ಈ ದೂರು ಸಲ್ಲಿಸಲಾಗಿದೆ. ದೂರಿನಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ನಿರ್ಧಾರ ನ್ಯಾಯ ಸಮ್ಮತವಾದುದಲ್ಲ ಎಂದು ಟೆಕಿಗಳು ವಾದಿಸಿದ್ದಾರೆ.
ಆದರೆ, ಟೆಕಿಗಳ ಈ ದೂರಿಗೆ ಪ್ರತಿಕ್ರಿಯಿಸಿರುವ ಕಂಪನಿ, ತನ್ನ ನಿರ್ಧಾರ ಔಚಿತ್ಯಪೂರ್ಣವಾಗಿದೆ ಎಂದು ಹೇಳಿಕೊಂಡಿದೆ.

Click it and Unblock the Notifications