Chandrayaan-3: ಸತತ 3ನೇ ಬಾರಿ ಚಂದ್ರನ ಕಕ್ಷೆ ಮುಟ್ಟಿದ ಭಾರತ!

ಭಾರತ ಬಾಹ್ಯಾಕಾಶ ಸಾಮ್ರಾಜ್ಯದ ಅಧಿಪತಿ ಅನ್ನೋದು ಇಂದು ಮತ್ತೆ ಸಾಬೀತಾಗಿದೆ. ಈ ಕ್ಷಣಕ್ಕಾಗಿಯೇ ಶತಕೋಟಿ ಭಾರತೀಯರು ಕಾಯುತ್ತಿದ್ದರು. ಅಂದಹಾಗೆ 'ಚಂದ್ರಯಾನ-3' ಬಾಹ್ಯಾಕಾಶ ನೌಕೆ ಇದೀಗ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿದೆ. ಈ ಮೂಲಕ ಭಾರತ ಸತತ 3ನೇ ಬಾರಿಗೆ ಯಾವುದೇ ಸಮಸ್ಯೆ ಇಲ್ಲದೆ ಚಂದ್ರನ ಕಕ್ಷೆ ತಲುಪಿದ ಸಾಧನೆಯನ್ನೂ ಮಾಡಿದೆ.

ಹೌದು, ಭಾರತದ 3ನೇ ಮೂನ್‌ ಮಿಷನ್‌ ಆಗಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಚಂದ್ರನತ್ತ ತನ್ನ ಅದ್ಭುತ ಯಾನವನ್ನು ಮುಂದುವರಿಸಿದೆ. ಈಗಾಗಲೇ ಮುಕ್ಕಾಲು ಭಾಗದ ಪ್ರಯಾಣ ಮುಗಿಸಿರುವ 'ಚಂದ್ರಯಾನ-3' ನೌಕೆ, ಇಂದು ಅಧಿಕೃತವಾಗಿ ಚಂದ್ರನ ಕಕ್ಷೆಗೆ ಎಂಟ್ರಿ ಕೊಟ್ಟಿದೆ. ಚಂದ್ರನ ಕಕ್ಷೆಗೆ 'ಚಂದ್ರಯಾನ-3' ನೌಕೆಯನ್ನು ಸೇರಿಸುವ ಕೆಲಸ ಇಂದು ಯಶಸ್ವಿಯಾಗಿ ನಡೆದಿದೆ. ಲೂನಾರ್ ಟ್ರಾನ್ಸ್‌ಫರ್‌ ಟ್ರಾಜೆಕ್ಟರಿ ಪಥದಲ್ಲಿದ್ದ ನೌಕೆ ಚಂದ್ರನ ಕಕ್ಷೆ ಸೇರಿದೆ. ಕಳೆದ ಸೋಮವಾರ ಮಧ್ಯರಾತ್ರಿ ಭೂ ಕಕ್ಷೆಯಿಂದ ನೌಕೆಯು ಬೇರ್ಪಟ್ಟಿತ್ತು. 'ಲೂನಾರ್‌-ಆರ್ಬಿಟ್‌ ಇನ್‌ರ್ಸಶನ್‌' ಅಂದರೆ ಎಲ್‌ಓಐ ಮೂಲಕ ಕಾರ್ಯ ಯಶಸ್ವಿಯಾಗಿ ನಡೆದಿದೆ.

isro-successfully-done-lunar-orbit

ಕಕ್ಷೆ ಬದಲಿಸುವ ಕ್ರಿಯೆ ಹೇಗೆ ನಡೆಯುತ್ತೆ?

TLI ಅಥವಾ ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಅಂದ್ರೆ ಕಕ್ಷೆ ಬದಲಿಸುವ ಪ್ರಕ್ರಿಯೆ ಎಂದು ಅರ್ಥ. ಇದು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಹಾದಿಗೆ ಕಳುಹಿಸಲು ಬೆನ್ನೆಲುಬು ಎನ್ನಬಹುದು. ಪ್ರಕ್ರಿಯೆಯನ್ನ ರಾಸಾಯನಿಕ ರಾಕೆಟ್ ಇಂಜಿನ್‌ನಿಂದ ನಿರ್ವಹಿಸಲಾಗುತ್ತದೆ. ಈ ಮೂಲಕ ಬಾಹ್ಯಾಕಾಶ ನೌಕೆ ವೇಗ ಹೆಚ್ಚಿಸಲಾಗುತ್ತದೆ. ಹಾಗೇ ಹೆಚ್ಚಿದ ವೇಗ ಅದರ ಕಕ್ಷೆಯನ್ನ ಕಡಿಮೆ ವೃತ್ತಾಕಾರದ ಭೂ ಕಕ್ಷೆಯಿಂದ ಹೆಚ್ಚು ಹತ್ತಿರದ ಕಕ್ಷೆಗೆ ಬದಲಾಯಿಸಲು ಸಹಾಯ ಮಾಡುತ್ತೆ. ಆಗಸ್ಟ್‌ 17ಕ್ಕೆ ಪ್ಯೊಪಲ್ಷನ್‌ ಮಾಡ್ಯೂಲ್‌ & ಲ್ಯಾಂಡರ್ ಮಾಡ್ಯೂಲ್‌ ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್‌ 23ರ ಸಂಜೆ 5.47ಕ್ಕೆ ಇಸ್ರೋ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯಲಿದೆ.

ಚಂದ್ರನ ಗುರುತ್ವದಿಂದಲೇ ಕೆಲಸ!

ಮುಂದಿನ ಕಾರ್ಯಾಚರಣೆ ಆಗಸ್ಟ್‌ 6 ರಂದು ನಡೆಯಲಿದೆ. ಚಂದ್ರನ ಕಕ್ಷೆಯಲ್ಲಿ ಇನ್ನೊಂದು ಹಂತಕ್ಕೆ 'ಚಂದ್ರಯಾನ-3' ನೌಕೆ ಎಂಟ್ರಿ ಕೊಡಲಿದೆ. ಈ ಮೂಲಕ ರೋವರ್ ಇಳಿಸುವ ಪ್ರಯತ್ನಕ್ಕೆ ಸಕಲ ಸಿದ್ಧತೆ ಸಾಗಲಿದೆ. ಚಂದ್ರನ ಗುರತ್ವ ಬಳಿಸಿಕೊಂಡು ಇಸ್ರೋ ವಿಜ್ಞಾನಿ ಸಮೂಹ ಈ ಕಾರ್ಯ ನಡೆಸುತ್ತಿದೆ. ಜಗತ್ತಿನ ಇತರ ಬಾಹ್ಯಾಕಾಶ ಸಂಸ್ಥೆಗಳಿಗೆ ಹೋಲಿಕೆ ಮಾಡಿದರೆ ಭಾರತದ ಇಸ್ರೋ ತನ್ನ ಜಾಣ್ಮೆಯಿಂದ ಕೆಲಸ ಮಾಡುತ್ತದೆ. ಇದೇ ಕಾರಣಕ್ಕೆ ಅತ್ಯಂತ ಕಡಿಮೆ ವೆಚ್ಚದಲ್ಲೂ ಅದ್ಭುತ ಯೋಜನೆ ಸಾಧ್ಯವಾಗುತ್ತಿದೆ.

isro-successfully-done-lunar-orbit

ಕಡಿಮೆ ವೆಚ್ಚದಲ್ಲಿ ಅದ್ಭುತ ಸಾಧನೆ

ಅಷ್ಟಕ್ಕೂ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ವೆಚ್ಚದಲ್ಲಿ ಭಾರತದ ಇಸ್ರೋ 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿ ಕಡೆಗೆ ಪ್ರಯಾಣ ಬೆಳೆಸಿದೆ.

ಒಟ್ನಲ್ಲಿ ಭಾರತದ ಈ ಮಹತ್ವದ ಯೋಜನೆ ಕ್ಷಣಕ್ಷಣಕ್ಕೂ ಅಂತಿಮ ಹಂತಕ್ಕೆ ಹತ್ತಿರವಾಗ್ತಿದೆ. ಚಂದ್ರನ ಸೂಕ್ಷ್ಮ ಅಧ್ಯಯನ ನಡೆಸಲು ಭಾರತ ಈ ಯೋಜನೆ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ತಲುಪುವುದು ಇಸ್ರೋ ಮೊದಲ ಗುರಿ, ಹೀಗಾಗಿ ಚಂದ್ರನ ದಕ್ಷಿಣ ಧ್ರುವ ತಲುಪೋದಕ್ಕೆ ಬಾಹ್ಯಾಕಾಶ ನೌಕೆಗೆ ಅಗತ್ಯವಿರುವ ನೂಕುಬಲ ನೀಡಲಾಗಿದೆ. ಹಾಗೇ ಪ್ರತಿ ಪ್ರಕ್ರಿಯೆಗಳಲ್ಲೂ ಇಸ್ರೋ ಯಶಸ್ವಿಯಾಗಿದೆ. ಇದಕ್ಕಿಂತಲೂ ಮಹತ್ವದ ಕೆಲಸ ಏನೆಂದರೆ ಚಂದ್ರನ ಮೇಲೆ ನೀರು ಹುಡುಕುವ ಕೆಲಸ. ಇಂದು ಅಧಿಕೃತವಾಗಿ ಚಂದ್ರನ ಕಕ್ಷೆಗೆ ಎಂಟ್ರಿ ಕೊಟ್ಟಿರುವ ಇಸ್ರೋ ನೌಕೆ ಇನ್ನೇನು ತನ್ನ ಕೆಲಸದಲ್ಲಿ ನಿರತವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+