Isro: ಸ್ಪೇಸ್ ಡಾಕಿಂಗ್ ಪ್ರಯೋಗವನ್ನು ಜನವರಿ 9ಕ್ಕೆ ಮುಂದೂಡಿದ ಇಸ್ರೋ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಹಾತ್ವಾಕಾಂಕ್ಷೆಯ ಸ್ಪೇಸ್ ಡಾಕಿಂಗ್ (SpaDeX) ಮಿಷನ್‌ನ ಡಾಕಿಂಗ್ ಪ್ರಯೋಗವನ್ನು ಜನವರಿ 9, 2025ಕ್ಕೆ ಮುಂದೂಡಲಾಗಿದೆ. ಈ ಮೊದಲು ಜನವರಿ 7ರಂದು ಈ ಪ್ರಯೋಗ ನಡೆಸಲು ಇಸ್ರೋ ನಿರ್ಧರಿಸಿತ್ತು. ಇಸ್ರೋದ ಮಹತ್ವಾಕಾಂಕ್ಷೆ ಯೋಜನೆಯ ಮಹತ್ವದ ಘಟ್ಟದ ಅಪ್‌ಡೇಟ್ ಪಡೆಯಲು ಕೌತುಕದಿಂದ ಕಾಯುತ್ತಿದ್ದ ಬಾಹ್ಯಾಕಾಶ ಆಸಕ್ತರು ಈಗ ಇನ್ನೆರಡು ದಿನ ಹೆಚ್ಚಾಗಿ ಕಾಯಬೇಕಾಗಿದೆ.

ಜನವರಿ 7 ರಂದು ನಿಗದಿ ಮಾಡಿದ್ದ ಸ್ಪೇಸ್ ಡಾಕಿಂಗ್ ಪ್ರಯೋಗವನ್ನು ಈಗ ಜನವರಿ 9ಕ್ಕೆ ಮುಂದೂಡಲಾಗಿದೆ. ಡಾಕಿಂಗ್‌ ಕಾರ್ಯಕ್ಕೆ ಮತ್ತಷ್ಟು ಸಿದ್ಧತೆ ಬೇಕಾಗಿದೆ ಎಂದು ಇಂದು ತಿಳಿದುಬಂದ ಕಾರಣ ಎರಡು ದಿನ ಮುಂದಕ್ಕೆ ಹಾಕಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ.

Isro spadex docking experiment postponed to january 9 2025

ಸ್ಪೇಸ್ ಡಾಕಿಂಗ್‌ ಇಸ್ರೋಗೆ ನಿರ್ಣಾಯಕ ಪ್ರಯೋಗವಾಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಇದು ಭಾರತವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಇಸ್ರೋನ ಮುಂದಿನ ಹಲವು ಯೋಜನೆಗಳಿಗೆ ಡಾಕಿಂಗ್ ತಂತ್ರಜ್ಞಾನ ಅಗತ್ಯವಾಗಿದ್ದು ಅದಕ್ಕಾಗಿ ಇಸ್ರೋ ಈ ಪ್ರಯೋಗಕ್ಕೆ ಮುಂದಾಗಿದೆ.

ಬಾಹ್ಯಾಕಾಶದಲ್ಲಿ ಉಪಗ್ರಹ ಜೋಡಣೆ

ಸ್ಪೇಸ್ ಡಾಕಿಂಗ್ ಎಂದರೆ ಬಾಹ್ಯಾಕಾಶದಲ್ಲಿ ಎರಡು ಬಾಹ್ಯಾಕಾಶ ನೌಕೆಗಳನ್ನು ಜೋಡಿಸುವ ಪ್ರಕ್ರಿಯೆಯಾಗಿದೆ. ಅಮೆರಿಕ, ರಷ್ಯಾ, ಚೀನಾ ಮಾತ್ರ ಈ ತಂತ್ರಜ್ಞಾನದಲ್ಲಿ ಯಶಸ್ವಿಯಾಗಿದ್ದು ಭಾರತ ನಾಲ್ಕನೇ ದೇಶವಾಗುವ ಉತ್ಸಾಹದಲ್ಲಿದೆ. ಒಮ್ಮೆ ಈ ತಂತ್ರಜ್ಞಾನದಲ್ಲಿ ಯಶಸ್ವಿಯಾದರೆ ಭಾರತ ಬಾಹ್ಯಾಕಾಶದಲ್ಲಿ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಬಹುದು.

ಈ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವಾದರೆ ಕಕ್ಷೆಯಲ್ಲಿ ಇಂಧನ ತುಂಬುವ ಪ್ರಕ್ರಿಯೆ, ಉಪಗ್ರಹ ಸೇವೆಯಂತಹ ಹಲವು ಕಾರ್ಯಗಳಿಗೆ ಸಹಾಯಕವಾಗಲಿದೆ. ಬಾಹ್ಯಾಕಾಶದ ಬಗ್ಗೆ ಇಸ್ರೋ ಅಧ್ಯಯನಕ್ಕೆ ಮತ್ತಷ್ಟು ಅವಕಾಶ ಸಿಗಲಿದೆ. ಈ ಪ್ರಯೋಗ ಯಶಸ್ವಿಯಾಗಲಿ ಎಂದು ಪ್ರತಿಯೊಬ್ಬ ಭಾರತೀಯರು ಬೇಡಿಕೊಳ್ಳುತ್ತಿದ್ದಾರೆ.

ಡಾಕಿಂಗ್ ಕಾರ್ಯಾಚರಣೆಯು ಎರಡು ಬಾಹ್ಯಾಕಾಶ ನೌಕೆಗಳನ್ನು ಒಳಗೊಂಡಿರುತ್ತದೆ. ಒಂದು ಚೇಸರ್ ಮಾಡ್ಯೂಲ್ ಮತ್ತೊಂದು ಟಾರ್ಗೆಟ್ ಮಾಡ್ಯೂಲ್. ಚೇಸರ್ ಮಾಡ್ಯೂಲ್ ನಿಯಂತ್ರಣ ವ್ಯವಸ್ಥೆಯೊಂದಿಗೆ ಸುಸಜ್ಜಿತವಾಗಿದ್ದು, ಮಾನವನ ಹಸ್ತಕ್ಷೇಪವಿಲ್ಲದೆ ಟಾರ್ಗೆಟ್ ಮಾಡ್ಯೂಲ್ ಅನ್ನು ಸಮೀಪಿಸುವಂತೆ ಮತ್ತು ಜೋಡಣಾ ಕಾರ್ಯ ನಡೆಸುವಂತೆ ವಿನ್ಯಾಸ ಮಾಡಲಾಗಿದೆ.

ಎರಡು ದಿನಗಳು ತಡವಾಗುವುದಕ್ಕೆ ನಿಖರ ಕಾರಣವೇನು ಎಂದು ಇಸ್ರೋ ಬಹಿರಂಗಪಡಿಸಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ತಾಂತ್ರಿಕ ಹೊಂದಾಣಿಕೆ ಮತ್ತು ಅನಿರೀಕ್ಷಿತ ಸಮಸ್ಯೆಗಳಿಂದಾಗಿ ಪ್ರಯೋಗವನ್ನು ಎರಡು ದಿನ ಮುಂದೂಡಲಾಗಿದೆ ಎಂದು ಬಾಹ್ಯಾಕಾಶ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+