ಕೊರೊನಾ ಬಿಕ್ಕಟ್ಟಿನ ನಡುವೆಯೂ ಇಸ್ರೋ ಮಹತ್ವದ ಹೆಜ್ಜೆ: 59 ದೇಶಗಳ ಜತೆ ಒಪ್ಪಂದ
ಬೆಂಗಳೂರು, ಅಕ್ಟೋಬರ್ 13: ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಅಭಿವೃದ್ಧಿಗೆ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಗತಿ ಹೊಂದುವ ಆಕಾಂಕ್ಷೆ ಹೊಂದಿರುವ ದೇಶಗಳಿಗೆ ಸಹಾಯ ಮಾಡುವ ಸಲುವಾಗಿ ಬಾಹ್ಯಾಕಾಶ ಸಹಕಾರಕ್ಕೆ ಸಂಬಂಧಿಸಿದಂತೆ 59 ದೇಶಗಳೊಂದಿಗೆ ಒಟ್ಟು 250 ದಾಖಲೆಗಳಿಗೆ ಭಾರತ ಸಹಿ ಹಾಕಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಸಮಾವೇಶದಲ್ಲಿ (ಐಎಸಿ) ಮಾತನಾಡಿದ ಕೆ. ಶಿವನ್, ರಷ್ಯಾ, ಅಮೆರಿಕ, ಫ್ರಾನ್ಸ್, ಜಪಾನ್ ಮತ್ತು ಇಸ್ರೇಲ್ ಜತೆ ಭಾರತವು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿನ ಪ್ರಮುಖ ಸಹಕಾರ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ದೇಶಗಳೊಂದಿಗಿನ ಹಾಲಿ ಮತ್ತು ಭವಿಷ್ಯದ ಯೋಜನೆಗಳ ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಹತ್ವಾಕಾಂಕ್ಷಿ ಗಗನಯಾನ ಯೋಜನೆಗಾಗಿ ಗಗನಯಾನಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತಿದೆ. ಅತ್ಯಂತ ಮಹತ್ವದ ವೈದ್ಯಕೀಯ ತಂತ್ರಜ್ಞಾನಗಳನ್ನು ಫ್ರಾನ್ಸ್ ಒದಗಿಸುತ್ತಿದೆ. ಆದರೆ ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಗಗನಯಾನ ಯೋಜನೆಯು ಸಣ್ಣ ಬದಲಾವಣೆಯನ್ನು ಕಾಣಲಿದೆ. 2022ರ ಆಗಸ್ಟ್ ತಿಂಗಳಲ್ಲಿ ಗಗನಯಾನ ಯೋಜನೆ ನಡೆಸಲು ಗುರಿ ಹೊಂದಲಾಗಿತ್ತು. ಈ ಗುರಿಯಲ್ಲಿ ಚಿಕ್ಕ ಬದಲಾವಣೆಯಾಗಲಿದೆ. ಯೋಜನೆಗೆ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಇತರೆ ಬಾಹ್ಯಾಕಾಶ ಪರಿಣತ ದೇಶಗಳ ಸಹಾಯ ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಮುಂದೆ ಓದಿ.

ನಾಸಾ ಜತೆ 'ನಿಸಾರ್' ಉಪಗ್ರಹ
ಮಾನವ ಸಹಿತ ಬಾಹ್ಯಾಕಾಶ ಹಾರಾಟದಿಂದ ಗ್ರಹಗಳ ಪತ್ತೆ ಮತ್ತು ಜಂಟಿ ಕಾರ್ಯಾಚರಣೆಗಳ ವಿವಿಧ ಹಂತಗಳಲ್ಲಿ ಸಹಭಾಗಿತ್ವ ನಡೆಯಲಿದೆ. ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚೆರ್ ರೇಡಾರ್ 'ನಿಸಾರ್' ಉಪಗ್ರಹ ಒಪ್ಪಂದ ನಡೆದಿದೆ. ಅಮೆರಿಕದ ಭೂಗರ್ಭ ಸಮೀಕ್ಷೆ (ಯುಎಸ್‌ಜಿಎಸ್) ಜತೆ ಉಪಗ್ರಹ ದತ್ತಾಂಶಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಸಹ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಜಂಟಿ ಉಪಗ್ರಹ ಉಡಾವಣೆ
ಫ್ರಾನ್ಸ್ ನಮ್ಮ ಪ್ರಮುಖ ಪಾಲುದಾರ ದೇಶವಾಗಿದೆ. ಮೇಘಾ ಮತ್ತು ಸರಳ್ ಎಂಬ ಎರಡು ಜಂಟಿ ಉಪಗ್ರಹಗಳನ್ನು ಉಡಾವಣೆ ಮಾಡಿದ್ದೇವೆ. ಮತ್ತೊಂದು ಯೋಜನೆ ಪ್ರಗತಿಯಲ್ಲಿದೆ. ಜಪಾನ್ ಬಾಹ್ಯಾಕಾಶ ಸಂಸ್ಥೆ ಜಕ್ಸಾ ಜತೆ ಇಸ್ರೋ ಸಹಭಾಗಿತ್ವ ಹೊಂದಿದ್ದು, ಜಂಟಿಯಾಗಿ ಚಂದ್ರ ಧ್ರುವ ಸಂಶೋಧನಾ ಯೋಜನೆ ನಡೆಸಲಿದೆ. ಜರ್ಮನ್ ಸಂಸ್ಥೆಯೊಂದಿಗೆ ರೋಬೋಟಿಕ್ಸ್‌ಗಳಲ್ಲಿ ಡಿಎಲ್‌ಆರ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದೆ. ಇಸ್ರೇಲ್ ಬಾಹ್ಯಾಕಾಶ ಸಂಸ್ಥೆಯೊಂದಿಗೆ (ಐಎಸ್‌ಎ) ಎಲೆಕ್ಟ್ರಿಕ್ ಪ್ರೊಪಲ್ಷನ್ ವ್ಯವಸ್ಥೆ ಮತ್ತು ಬಾಹ್ಯಾಕಾಶದ ಆಳದಲ್ಲಿನ ನೆಟ್ವರ್ಕ್ ಆಂಟೆನಾ ಸಪೋರ್ಟ್ ಕ್ಷೇತ್ರದಲ್ಲಿ ಸಹಕಾರ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.

ರಾಕೆಟ್ ಉಡಾವಣೆ
ನವೆಂಬರ್‌ನಲ್ಲಿ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆ ಮಾಡಲು ಇಸ್ರೋ ಯೋಜನೆ ನಡೆಸಿದೆ. ಇಸ್ರೋದ ಅನೇಕ ಮಹತ್ವದ ಯೋಜನೆಗಳು ಕೊರೊನಾ ವೈರಸ್ ಪಿಡುಗಿನ ಕಾರಣ ಹಿನ್ನಡೆ ಅನುಭವಿಸಿವೆ. ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆ ಈ ವರ್ಷದ ಮೊದಲ ಉಡಾವಣೆಯಾಗಲಿದೆ ಎಂದು ತಿಳಿಸಿದ್ದಾರೆ.

ನವೆಂಬರ್ ಮೊದಲ ವಾರದಲ್ಲಿ ಉಡಾವಣೆ
ಭಾರತದ ಬಾಹ್ಯಾಕಾಶ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿಗಳು, ತಂತ್ರಜ್ಞರು ತಮ್ಮ ಕೆಲಸ ನಿಭಾಯಿಸಲು ದೂರದ ಪ್ರದೇಶಗಳಿಗೆ ತೆರಳಬೇಕಾಗುತ್ತದೆ. ಇದರಿಂದಾಗಿ ನಮ್ಮ ಚಟುವಟಿಕೆಗಳಲ್ಲಿ ವಿಳಂಬವಾಗುತ್ತಿದೆ. ಪಿಎಸ್‌ಎಲ್‌ವಿ ಸಿ-49 ಅನ್ನು ನವೆಂಬರ್ ಮೊದಲ ವಾರ ಉಡಾವಣೆ ಮಾಡಲು ಆಲೋಚನೆ ನಡೆಸುತ್ತಿದ್ದೇವೆ. ನಂತರ ಎಲ್ಲ ಯೋಜನೆಗಳು ನಿಗದಿಯಂತೆ ನಡೆಯಲಿವೆ ಎಂದು ಹೇಳಿದ್ದಾರೆ.
-
Artemis 2 Mission: 54 ವರ್ಷಗಳ ಬಳಿಕ ಮತ್ತೆ ಚಂದ್ರನತ್ತ ಐತಿಹಾಸಿಕ ಪಯಣ, ಆರ್ಟೆಮಿಸ್-2 ಭರ್ಜರಿ ಆರಂಭ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ












Click it and Unblock the Notifications