ISRO - EOS-08: ಭೂವೀಕ್ಷಣಾ ಕಿರು ಉಪಗ್ರಹ ಉಡಾವಣೆ ಮಾಡಿದ ಇಸ್ರೋ
ಬೆಂಗಳೂರು, ಆಗಸ್ಟ್ 16: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಕಿರು ಉಪಗ್ರಹವನ್ನು ಆಗಸಕ್ಕೆ ಉಡಾವಣೆ ಮಾಡಿದೆ. ಈ ಮೂಲಕ ಬಾಹ್ಯಾಕಾಶದಲ್ಲಿ ಹೊಸ ಸಾಧನೆಗೆ ಮುಂದಾಗಿರುವ ಇಸ್ರೋ 'ಇಒಎಸ್ -08' ಹೆಸರಿನ ಭೂವೀಕ್ಷಣಾ ಕಿರು ಉಪಗ್ರಹವನ್ನು ಇಸ್ರೋ ಇಂದು ಶುಕ್ರವಾರ ಆಗಸ್ಟ್ 16ರಂದು ಬೆಳಗ್ಗೆ 9.17ಕ್ಕೆ ಶ್ರೀಹರಿಕೋಟಾದಿಂದ ಉಡ್ಡಯನ ಮಾಡಿದೆ.
'IOS-08' ಹೆಸರಿನ ಈ ಪುಟ್ಟ ಉಪಗ್ರಹವು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಅಭಿವೃದ್ಧಿ ಮಾಡಿರುವ ಎಸ್ಎಸ್‌ಎಲ್‌ವಿ ಡಿ3 ರಾಕೇಟ್ ಮೂಲಕ ಭೂಮಿಯಿಂದ ತನ್ನ ಕಕ್ಷೆಗೆ ಹಾರಿತು. ಇದರ ಉಡಾವಣೆಗೆ ಗುರುವಾರದಿಂದಲೇ ಇಸ್ರೋ ವಿಜ್ಞಾನಿಗಳು ಅಗತ್ಯ ತಯಾರಿಸಿ ಆರಂಭಿಸಿದ್ದರು. ಗುರುವಾರ ತಡರಾತ್ರಿ (ಬೆಳಗ್ಗೆ) 2.47ರಿಂದಲೇ ಕೌಂಟ್‌ಡೌನ್ ಶುರುವಾಗಿತ್ತು.

ಸದ್ಯ ತನ್ನ ಕಕ್ಷೆ ಸೇರುವಲ್ಲಿ ಯಶಸ್ವಿಯಾಗಿರುವ 'IOS-08' ಪುಟ್ಟ ಉಪಗ್ರಹವನ್ನು ಮೊದಲು 78ನೇ ಸ್ವಾತಂತ್ರ್ಯ ದಿನಾಚರಣೆಯ ದಿನ ಆಗಸ್ಟ್ 15ರಂದೆ ಉಡಾವಣೆ ಮಾಡಲು ಇಸ್ರೋ ವಿಜ್ಞಾನಿಗಳು, ಅಧ್ಯಕ್ಷರು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಒಂದು ದಿನ ತಡವಾಗಿದೆ ಎಂದು ತಿಳಿದು ಬಂದಿದೆ.
ಕಕ್ಷೆಗೆ ಸೇರಿದ ಕಿರು ಉಪಗ್ರಹ EOS-08
ಬೆಳಗ್ಗೆ ಯಶಸ್ವಿ ಉಡಾವಣೆ ಆಗುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಸುರಕ್ಷಿತವಾಗಿ EOS-08 ಉಪಗ್ರಹವನ್ನು 475 ಕಿಮೀ ವೃತ್ತಾಕಾರದ ಕಕ್ಷೆಗೆ ಯಶಸ್ವಿಯಾಗಿ ತಲುಪಿಸಿದ್ದಾರೆ.

ಈ ಕಿರು ಉಪಗ್ರಹವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾಗಿದೆ. ಮೈಕ್ರೋ ಸ್ಯಾಟ್‌ಲೈಟ್ ಹಾಗೂ ಅಭಿವೃದ್ಧಿಯನ್ನು, ಭವಿಷ್ಯದಲ್ಲಿ ಉಪಗ್ರಹಗಳ ಕಾರ್ಯಾಚರಣೆ ನೋಡಿಕೊಂಡು ತಯಾರಿಸಲಾಗಿದೆ.
🚀SSLV-D3/EOS-08🛰️ Mission:
— ISRO (@isro) August 12, 2024
The launch of the third developmental flight of SSLV is scheduled for August 16, 2024, in a launch window of one hour starting at 09:17 Hrs. IST pic.twitter.com/JWxq9X6rjk
ಬೆಂಗಳೂರು ಬಾಹ್ಯಾಕಾಶ ಸಂಶೋಧಾನ ಸಂಸ್ಥೆಯು ನಿರ್ವಹಿಸುತ್ತಿರುವ ವರ್ಷದ ಮೂರನೇ ಯೋಜನೆ ಇದಾಗಿದೆ. ಈ ಹಿಂದೆ ವರ್ಷ ಆರಂಭದಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಎರಡು ಮಿಷನ್ ಅನ್ನು ನಿರ್ವಹಿಸಲಾಗಿತ್ತು. ಕ್ರಮವಾಗಿ PSLV-C58/XpoSat ಹಾಗೂ GSLV-F14/INSAT -3DS ಮಿಷನ್ ಅನ್ನು ಕಕ್ಷೆಗೆ ಇಸ್ರೋ ಇಳಿಸಿತ್ತು.
ಎಸ್‌ಎಸ್‌ಎಲ್‌ವಿ ಮೂರು ಹಂತಗಳ ಕಡಿಮೆ ಹಂತದ ವಾಹನವಾಗಿದೆ. ಒಟ್ಟು 500 ಕೆಜಿ ತೂಕ ಹೊಂದಿದೆ ಎಂದು ಇಸ್ರೋ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದೆ.
ಇಸ್ರೋ ಸಾಧನೆ ಬಣ್ಣಿಸಿದ ಮಾಜಿ ಸಿಎಂ
ಇನ್ನೂ ಇಸ್ರೋ ಈ ಸಾಧನೆಗೆ ಅನೇಕ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿದ್ದು, SSLV-D3/EOS-08 ಮಿಷನ್‌ನ ಯಶಸ್ವಿ ಉಡಾವಣೆಗಾಗಿ ISRO ತಂಡಕ್ಕೆ ಅಭಿನಂದನೆಗಳು. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಪಿತ ಬೆಂಬಲ ಮತ್ತು ಮಾರ್ಗದರ್ಶನಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇಸ್ರೋ ಯಶಸ್ಸಿನ ನಂತರ ಯಶಸ್ಸನ್ನು ನೀಡುತ್ತಲೇ ಇರುತ್ತದೆ. ಭಾರತದ ಬಾಹ್ಯಾಕಾಶ ಪ್ರಯಾಣಕ್ಕೆ ಮತ್ತೊಂದು ಹೆಮ್ಮೆಯ ದಿನ ಎಂದು ಅವರು ಬಣ್ಣಿಸಿದ್ದಾರೆ.












Click it and Unblock the Notifications