ಕೊವಿಡ್ 19 ವಿರುದ್ಧ ಹೋರಾಡಲು ಸ್ಯಾನಿಟೈಸರ್‌ಗಿಂತ ಸೋಪು ಹೆಚ್ಚು ಪರಿಣಾಮಕಾರಿ?
ನವದೆಹಲಿ, ಅಕ್ಟೋಬರ್ 15: ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಹ್ಯಾಮಡ್ ಸ್ಯಾನಿಟೈಸರ್‌ಗಿಂತ ಸೋಪು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಯಾಕೆಂದರೆ ಕೇವಲ ಸ್ಯಾನಿಟೈಸರ್ ಹಚ್ಚಿಕೊಳ್ಳುವುಕ್ಕಿಂತ ಸೋಪು ಹಚ್ಚಿ ಪದೇ ಪದೇ ಶುದ್ಧ ನೀರಿನಿಂದ ಕೈತೊಳೆಯುವುದು ಉತ್ತಮ, ಅದರಿಂದ ವೈರಸನ್ನು ಹೋಗಲಾಡಿಸಬಹುದು ಎಂದು ಹೇಳಿದ್ದಾರೆ.
ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳುವ ಬಗ್ಗೆ ಜನರು ಹೆಚ್ಚು ಜಾಗೃತರಾಗಬೇಕು. ಇಂದು ಗ್ಲೋಬಲ್ ಹ್ಯಾಂಡ್ ವಾಶ್‌ಡೇಯನ್ನು ಆಚರಿಸಲಾಗುತ್ತಿದೆ. ಸೋಪು ಮತ್ತು ನೀರಿನಿಂದ ಕೈತೊಳೆಯುವ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.

ಹ್ಯಾಂಡ್ ಸ್ಯಾನಿಟೈಸರ್‌ಗಿಂತ ಕೈತೊಳೆಯುವುದು ಒಳ್ಳೆಯದು ಏಕೆ?
ಕೈ ನೈರ್ಮಲ್ಯಕ್ಕೆ ಹೋಲಿಸಿದರೆ ಸೋಪು ಮತ್ತು ನೀರಿನಿಂದ ಕೈ ತೊಳೆಯುವುದು ಸೂಕ್ಷ್ಮಜೀವಿಗಳನ್ನು ತೆಗೆದುಹಾಕುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಸಾಬೂನು ನೀರು ಲಭ್ಯವಿಲ್ಲದ ಸ್ಥಳಗಳಲ್ಲಿ ಮಾತ್ರ ಸ್ಯಾನಿಟೈಸರ್ ಬಳಸಲು ಸಲಹೆ ನೀಡಿದ್ದಾರೆ. ಸ್ಯಾನಿಟೈಸರ್‌ಗಳು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲಬಹುದಾದರೂ ಹ್ಯಾಂಡ್‌ವಾಶ್ ಮಾಡಿದಾಗ ಆಗುವಂತೆ ಸ್ಯಾನಿಟೈಸರ್‌ನಿಂದ ನಿಮ್ಮ ಕೈ ಸ್ವಚ್ಛವಾಗುವುದಿಲ್ಲ.

ಹ್ಯಾಂಡ್ ಸ್ಯಾನಿಟೈಸರ್ ಮಾರಾಟ ಹೆಚ್ಚಳ
ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಕೆಯೂ ಕೂಡ ಹೆಚ್ಚಾಗಿದೆ. ಹೀಗಾಗಿ ಹೆಚ್ಚೆಚ್ಚು ಸ್ಯಾನಿಟೈಸರ್ ಉತ್ಪಾದನೆಯಾಗುತ್ತಿದೆ. ಕೈತೊಳೆಯುವುದು ಅಥವಾ ಸಾಬೂನಿನಿಂದ ಕೈತೊಳೆಯುವುದು ರೋಗಾಣುಗಳು ಮ್ತತು ಸೋಂಕುಗಳನ್ನು ತಡೆಗಟ್ಟುವ ಮಾನದಂಡವಾಗಿದೆ. ಅದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.

ಉತ್ತಮ ಸ್ಯಾನಿಟೈಸರ್‌ನ್ನು ಆಯ್ಕೆ ಮಾಡುವುದು ಹೇಗೆ?
-ಸ್ಯಾನಿಟೈಸರ್ ಕನಿಷ್ಠ ಶೇ.70ರಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಏಕೆಂದರೆ ಅಲ್ಕೋಹಾಲ್ ನೈರ್ಮಲ್ಯೀಕರಣ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತದೆ. ಶೇ.95ರಷ್ಟು ಎಥೆನಾಲ್ ಅಥವಾ ಐಸೊಪ್ರೊಪನಾಲ್ ಹೊಂದಿರುವ ಹ್ಯಾಂಡ್ ಸ್ಯಾನಿಟೈಸರ್‌ನ್ನು ಬಳಸಲು ಶಿಫಾರಸು ಮಾಡಲಾಗಿದೆ.
-ಆಲ್ಕೋಹಾಲ್ ಫ್ರೀ ಸ್ಯಾನಿಟೈಸರ್ ಬಳಕೆಯನ್ನು ಬಿಡಿ, ಮಾರುಕಟ್ಟೆಯಲ್ಲಿನ ಕೆಲವು ಸ್ಯಾನಿಟೈಸರ್‌ಗಳನ್ನು ಆಲಕೋಹಾಲ್ ಮುಕ್ತ ಎಂದು ಮಾರಾಟ ಮಾಡಲಾಗುತ್ತಿದೆ. ಅವುಗಳು ರೋಗಾಣುಗಳ ವಿರುದ್ಧ ಹೋರಾಡುತ್ತವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಹಾಗಾಗಿ ಅಂತಹ ಸ್ಯಾನಿಟೈಸರ್ ಬಳಕೆ ಮಾಡದಿರುವುದೇ ಒಳ್ಳೆಯದು.
Recommended Video

ಹ್ಯಾಂಡ್ ಸ್ಯಾನಿಟೈಸರ್ ಬಳಕೆಯ ಸಾಧಕ ಬಾಧಕಗಳು
ಹ್ಯಾಂಡ್ ಸ್ಯಾನಿಟೈಸರ್‌ನ್ನು ಪಾಕೆಟ್‌ಗಳು, ಚೀಲಗಳಲ್ಲಿ ಎಲ್ಲೆ ಬೇಕಾದರೂ ಹೇಗೆ ಬೇಕಾದರೂ ಒಯ್ಯಬಹುದು, ಸೋಪು ಮತ್ತು ನೀರು ಇಲ್ಲದ ಸ್ಥಳಗಳಲ್ಲಿ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಹ್ಯಾಂಡ್ ಸ್ಯಾನಿಟೈಸರ್‌ಗಳ ಪ್ರಮುಖ ಲಾಭ ಇದು. ಆದರೆ ಹ್ಯಾಂಡ್ ಸ್ಯಾನಿಟೈಸರ್‌ಗಳ ಸಮಸ್ಯೆ ಎಂದರೆ ಅವು ಕೆಲವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ಜತೆ ಹೋರಾಡುವುದಿಲ್ಲ, ಉದಾಹರಣೆಗೆ ಅತಿಸಾರವನ್ನು ಉಂಟು ಮಾಡುವ ವೈರಸ್ ವಿರುದ್ಧ ಈ ಸ್ಯಾನಿಟೈಸರ್‌ಗಳು ಪರಿಣಾಮ ಬೀರುವುದಿಲ್ಲ.












Click it and Unblock the Notifications