ಹೌದೆ? ನಿಜವೇ? ಅರ್ನಾಬ್ ಗೆ 5 ಕೋಟಿ ಸಂಬಳವೇ?

ಬೆಂಗಳೂರು, ಡಿ. 24: ಹೌದೆ? ನಿಜವೇ? ಅರ್ನಾಬ್ ಗೆ 5 ಕೋಟಿ ಸಂಬಳವೇ? ಎಂದು ಆಮ್ ಆದ್ಮಿ ಪಕ್ಷದ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಶ್ನಿಸಿದ್ದಾರೆ. ಕೇಜ್ರಿವಾಲ್ ಅವರ ಪ್ರಶ್ನೆ ಈಗ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಚರ್ಚೆ, ಹಾಸ್ಯ, ಕೆಸರೆರೆಚಾಟಕ್ಕೆ ಗ್ರಾಸವಾಗಿದೆ.

ಟೈಮ್ಸ್ ನೌ ವಾಹಿನಿ ಮುಖ್ಯ ಸಂಪಾದಕ, ಜನಪ್ರಿಯ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಅವರ ಸಂಬಳದ ಲೆಕ್ಕಾಚಾರದ ವಿಷಯ ಚರ್ಚೆಗೆ ಕಾರಣವಾಗಿದ್ದು, ಕೋಮಲ್ ಇಂಡಿಯನ್ ಎಂಬ ಟ್ವಿಟ್ಟರ್ ಅಕೌಂಟ್ ನಿಂದ ಬಂದ ಟ್ವೀಟ್.[ಅರ್ನಬ್ ಗೋಸ್ವಾಮಿ ಯಾರು]

ಆಮ್ ಆದ್ಮಿ ಪಕ್ಷ ಸೇರಿರುವ ಮಾಜಿ ಪತ್ರಕರ್ತ ಆಶೀಶ್ ಕೇತನ್ ಅವರ ಸಂಬಳದ ಬಗ್ಗೆ ಚರ್ಚೆ ನಡೆದಿದ್ದು, ಈಗ ವಿಷಯ ಡಿಡಿಸಿಎ ಹಗರಣ, ಅರುಣ್ ಜೇಟ್ಲಿ, ಟೈಮ್ಸ್ ನೌ ನಿಲುವು ಎಲ್ಲದರ ಬಗ್ಗೆ ಬಿಸಿಬಿಸಿ ಚರ್ಚೆಗೆ ಇಂಬು ನೀಡಿದೆ. [ಅರ್ನಾಬ್-ರಾಹುಲ್ ಸಕತ್ ಕಾಮಿಡಿ ಶೋ]

ಎಲ್ಲಾ ವಿಷಯಕ್ಕೂ ಟ್ವಿಟ್ಟರ್ ನಲ್ಲಿ ಹ್ಯಾಶ್ ಟ್ಯಾಗ್ ಹಾಕಿ ಇವತ್ತಿಗೆ ಟ್ರೆಂಡಿಂಗ್ ಟಾಪಿಂಗ್ ನಾವೇ ನೀಡಿದ್ದು ಎಂದು ಬೊಬ್ಬೆ ಹಾಕುತ್ತಾ, ರಾತ್ರಿ ವೇಳೆ Nation wants to Know ಎಂದು ಕೇಳುತ್ತಿದ್ದ ಅರ್ನಾಬ್ ಅವರು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಬಗ್ಗೆ ಸಾಫ್ಟ್ ನಿಲುವು ಹೊಂದಿದ್ದಾರೆ ಎಂಬ ಗುಮಾನಿ ಹುಟ್ಟಿಕೊಂಡಿದೆ.

ಅರ್ನಾಬ್ ಸಂಬಳದ ಪ್ರಶ್ನೆ ಏಕೆ ಬಂತು?

ಅರ್ನಾಬ್ ಸಂಬಳದ ಪ್ರಶ್ನೆ ಏಕೆ ಬಂತು?

ಇದಕ್ಕೆ ಕಾರಣವೂ ಇದೆ. ಡಿಡಿಸಿಎ ಹಗರಣದ ಬಗ್ಗೆ ಬಿಜೆಪಿಯ ಉಚ್ಚಾಟಿತ ಸಂಸದ ಕೀರ್ತಿ ಅಜಾದ್ ಅವರು ವಿಡಿಯೋ ಸಾಕ್ಷ್ಯ ಬಹಿರಂಗಗೊಳಿಸಿದ ಸುದ್ದಿಗೋಷ್ಠಿಯನ್ನು ಎಲ್ಲಾ ಪ್ರಮುಖ ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡಿದರೆ, ಟೈಮ್ಸ್ ನೌ ಮಾತ್ರ ಆಸಕ್ತಿ ವಹಿಸಿರಲಿಲ್ಲ.

ಆಶೀಶ್ ಕೇತನ್ ಜೊತೆ ಸಂವಾದದಿಂದ ಹುಟ್ಟಿದ ಪ್ರಶ್ನೆ

ಆಶೀಶ್ ಕೇತನ್ ಜೊತೆ ಸಂವಾದದಿಂದ ಹುಟ್ಟಿದ ಪ್ರಶ್ನೆ

ಇದನ್ನು ಪ್ರಶ್ನಿಸಿ ಕೋಮಲ್ ಇಂಡಿಯನ್(@Komal_Indian) ಅಕೌಂಟ್ ನಿಂದ ಟ್ವೀಟ್ ಮಾಡಲಾಗಿತ್ತು. ನಿಮಗೆ 5 ಕೋಟಿ ರು ಪ್ಯಾಕೇಜ್ ಸಿಗುವ ತನಕ ವಿತ್ತ ಸಚಿವರ ವಿರುದ್ಧ ಚರ್ಚೆ, ಸಂವಾದ ಎಲ್ಲಿ ಮಾಡುತ್ತೀರಿ ಎಂದು ಆಶೀಶ್ ಕೇತನ್ ಅವರು ಅರ್ನಾಬ್ ಗೆ ಪ್ರಶ್ನಿಸಿದ್ದನ್ನು ಟ್ವೀಟ್ ಮಾಡಲಾಗಿದೆ.

ಚರ್ಚೆ ಆರಂಭಕ್ಕೆ ಕಾರಣವಾದ ಟ್ವೀಟ್

ಚರ್ಚೆ ಆರಂಭಕ್ಕೆ ಕಾರಣವಾದ ಟ್ವೀಟ್ ಕೋಮಲ್ ಇಂಡಿಯನ್(@Komal_Indian) ಅಕೌಂಟ್ ನಿಂದ ಟ್ವೀಟ್ ಮಾಡಲಾಗಿದೆ.

ಅರವಿಂದ್ ಕೇಜ್ರಿವಾಲ್ ಅವರ ಪ್ರಶ್ನೆ

ಅರವಿಂದ್ ಕೇಜ್ರಿವಾಲ್ ಅವರ ಪ್ರಶ್ನೆ ಹಾಕಿದ್ದು ಹೀಗೆ

ಮಾಧ್ಯಮದ ಶಾರುಖ್ ಖಾನ್ ಎಂದರೆ ಅರ್ನಾಬ್

ಅರ್ನಾಬ್ ಅವರು ಇಂಗ್ಲೀಷ್ ಮಾಧ್ಯಮದ ಶಾರುಖ್ ಖಾನ್

ಜೇಟ್ಲಿ ಅವರು ಬಾಡಿಗೆಗೆ ಪಡೆದಿದ್ದರೆ

ಅರುಣ್ ಜೇಟ್ಲಿ ಅವರು ಲ್ಯಾಪ್ ಟಾಪ್ ನಂತೆ ಅರ್ನಾಬ್ ರನ್ನು ಬಾಡಿಗೆಗೆ ಪಡೆದಿದ್ದರೆ?

ಆಹಾ! ಎಂಥಾ ಟ್ವೀಟ್ ಸೂಪರ್

ಆಹಾ! ಎಂಥಾ ಟ್ವೀಟ್ ಸೂಪರ್, ಅರ್ನಾಬ್ ಅವರು ಪಪ್ಪು ಯಾದವ್ ಗೆ ಸಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+