ರೈಲ್ವೆ ಪ್ರಯಾಣಿಕರಿಗೆ ಕಹಿ ಸುದ್ದಿ: ನಾಳೆ ಮೇ 25-27ರ ವರೆಗೆ ರದ್ದಾದ ರೈಲುಗಳ ಪಟ್ಟಿ-ಮಾರ್ಗ ಇಲ್ಲಿದೆ
ಬೆಂಗಳೂರು, ಮೇ 24: ಬೆಂಗಳೂರು, ಉತ್ತರ ಕರ್ನಾಟಕದ ಭಾಗದ ಸಾರ್ವಜನಿಕರಿಗೆ ಮಹತ್ವದ ಸುದ್ದಿಯೊಂದನ್ನು ತಿಳಿಸಿದೆ. ರೈಲ್ವೆ ಹಳಿ ಮತ್ತು ಬ್ರಿಡ್ಜ್ ಸೇರಿದಂತೆ ಇನ್ನಿತರ ಕಾಮಗಾರಿಗಳ ಕಾರಣದಿಂದಾಗಿ ವಿವಿಧ ಮಾರ್ಗಗಳಿಗೆ ಹೊರಡುವ ರೈಲುಗಳ ಸಂಚಾರ ಮೇ 25 ರಿಂದ ಮೇ 27ರವರೆಗೆ ರದ್ದುಗೊಂಡಿವೆ ಭಾರತೀಯ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಈ ಪೈಕಿ ನಾಳೆ ಗುರುವಾರ ರದ್ದಾದ ರೈಲುಗಳ ಸಂಖ್ಯೆ ಹೆಚ್ಚಿದೆ.
ಈ ಕುರತು ಟ್ವೀಟ್ ಮಾಡಿರುವ ರೈಲ್ವೆ ಸಚಿವಾಲಯವು ಕ್ರಾಸಿಂಗ್, ಹಳಿಗಳ ನಿರ್ವಹಣೆ ಕಾರಣದಿಂದ ಬೆಂಗಳೂರು ನೈಋತ್ಯ ರೈಲ್ವೆ ವಿಭಾಗ ಒಂದಷ್ಟು ರೈಲುಗಳ ಸಂಚಾರ ತಾತ್ಕಾಲಿಕವಾಗಿ ಸ್ಥಗತಿಗೊಂಡಿದೆ. ಇದರಲ್ಲಿ ತುಮಕೂರು ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಮಾರ್ಗವಾಗಿ ತೆರಳುವ ರೈಲುಗಳ ಪ್ರಮಾಣಿಕರು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.

ರದ್ದಾದ ರೈಲುಗಳ ಮಾರ್ಗ-ದಿನಾಂಕದ ಮಾಹಿತಿ
* ಚಿಕ್ಕಮಗಳೂರುನಿಂದ ಯಶವಂತಪುರಕ್ಕೆ ಹೊರಡುವ 16239 ಸಂಖ್ಯೆ ರೈಲು ಗಾಡಿ ಸಂಚಾರ ಮೇ 25 ಮತ್ತು ಮೇ 27ರಂದು ಸ್ಥಗಿತಗೊಂಡಿದೆ.
* ಮೇ 25 ಮತ್ತು ಮೇ 27ರಂದು ಯಶವಂಪುರ-ಚಿಕ್ಕಮಗಳೂರು ಗಾಡಿ ಸಂಖ್ಯೆ -16240 ಸಂಚಾರ ಬಂದ್ ಆಗಿದೆ.
* ಕೆಎಸ್‌ಆರ್-ಬೆಂಗಳೂರಿನ ರೈಲು ಸಂಖ್ಯೆ 12614 ಸಂಚಾರ ಸ್ಥಗಿತ.
* ಮೇ 25 ರಂದು ಮಾತ್ರ ಯಶವಂತಪುರ- ವಾಸ್ಕೋ 17309 ಸಂಖ್ಯೆಯ ರೈಲು ಸಂಚಾರ ಸ್ಥಗಿತಗೊಂಡಿದೆ
* ಮೇ 25, 27ರಂದು ಬೆಂಗಳೂರು ಕೆಎಸ್‌ಆರ್‌ನಿಂದ ತುಮಕೂರು ತೆರಳುವ ರೈಲು (06571) ಸಂಚಾರ ಬಂದ್ ಆಗಿದೆ.
* ಮೇ 25, 27ರಂದು ತುಮಕೂರು-ಬೆಂಗಳೂರು (06576) ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
* ಮೇ 25, 27ರಂದುತಾಳಗುಪ್ಪದಿಂದ ಬೆಂಗಳೂರಿಗೆ ಹೊರಡುವ ರೈಲು (20652) ಸ್ಥಿಗಿತ.
* ಮೇ 25, 27ರಂದು ಕೆಎಸ್‌ಆರ್-ಧಾರವಾಡ (12725) ಸಂಚಾರ ಬಂದ್.
* ಮೇ 25, 27ರಂದು ಧಾರವಾಡ- ಬೆಂಗಳೂರು (12726) ಓಡಾಟ ಬಂದ್.
* ಮೇ 25, 27ರಂದು ಯಶವಂತಪುರ- ಶಿವಮೊಗ್ಗ ನಗರ (16579) ಮಾರ್ಗದ ರೈಲು ಸೇವೆ ವ್ಯತ್ಯಯ.
* ಮೇ 25 ರಂದು ಮೈಸೂರು- ವಾರಣಾಸಿ (22687) ರೈಲು ಸಂಚಾರ ಬಂದ್.

* ಮೇ 25 ರಂದು ಮೈಸೂರು-ಬೆಳಗಾವಿ (17326) ರೈಲು ಸೇವೆ ಸ್ಥಗಿತ.
* ಮೇ 27ರಂದು ಯಶವಂತಪುರ-ವಾಸ್ಕೋ (17309).
* ಮೇ 25, 27ರಂದು ತುಮಕೂರು-ಚಾಮರಾಜನಗರ ರೈಲು (17346)ಸಂಚಾರ ಸ್ಥಗಿತ.
* ಮೇ 27ರಂದು ಹುಬ್ಬಳ್ಳಿ-ರಾಮೇಶ್ವರಂ (07355) ಸಂಖ್ಯೆಯ ರೈಲು ಸೇವೆ ವ್ಯತಯ.
* ಮೇ 26 ವಾಸ್ಕೋ- ಬೆಂಗಳೂರು ಯಶವಂತಪುರ (17310) ಸೇವೆ ಬಂದ್ ಆಗಿರಲಿದೆ.
* ಮೇ 25ರಂದು ಚಾಮರಾಜನಗರ -ತುಮಕೂರು (07345) ಸಂಖ್ಯೆಯ ರೈಲು ಸಂಚಾರ ಸ್ಥಗಿತ.
* ಮೇ 25ರಂದು ಮೈಸೂರು-ಉದಯಪುರ ಸಿಟಿ (19668) ಮತ್ತು ಟಾಟಾನಗರ -ಯಶವಂತಪುರ (18111) ಸಂಖ್ಯೆಯ ರೈಲುಗಳ ಸೇವೆಯಲ್ಲಿ ತಾತ್ಕಾಲಿಕವಾಗಿ ವ್ಯತ್ಯಯವಾಗಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.












Click it and Unblock the Notifications